ಕರ್ನಾಟಕ

karnataka

ಹೈಕಮಾಂಡ್​ಗೆ ಗೊತ್ತಾಗಲೆಂದು ವಿಜಯೇಂದ್ರ, ಅಶೋಕ್​ರಿಂದ ರಾಜ್ಯ ಸರ್ಕಾರದ ವಿರುದ್ಧ ಆರೋಪ: ಚಲುವರಾಯಸ್ವಾಮಿ

By ETV Bharat Karnataka Team

Published : Nov 22, 2023, 5:46 PM IST

Updated : Nov 23, 2023, 11:03 PM IST

ಜಾತಿ ಗಣತಿ ಇಂದು ಅನಿವಾರ್ಯ. ಆದರೆ ಅದನ್ನು ಸರಿಯಾಗಿ ಮಾಡಿಲ್ಲ ಎಂಬ ಆರೋಪ ಇದೆ. ಜಾತಿಗಣತಿ ವರದಿಯಲ್ಲಿ ದೋಷಗಳಿದ್ದರೆ ಕ್ಯಾಬಿನೆಟ್​​ನಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.

minister cheluvarayaswamy
ಸಚಿವ ಚಲುವರಾಯಸ್ವಾಮಿ

ಚಲುವರಾಯಸ್ವಾಮಿ

ದಾವಣಗೆರೆ:ಕೇಂದ್ರ ಬಿಜೆಪಿ ಹೈಕಮಾಂಡ್​ಗೆ ನಾವು ಇದ್ದೀವಿ ಅಂತ ಗೊತ್ತಾಗಬೇಕಲ್ವ, ಅದ್ದರಿಂದ ವಿಜಯೇಂದ್ರ ಹಾಗೂ ಆರ್ ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ಏನಾದ್ರು ಮಾತನಾಡುತ್ತಿದ್ದಾರೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

ಜಿಲ್ಲೆಯ ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೆ ಬಿಜೆಪಿ ಸರ್ಕಾರದಲ್ಲಿ ಆರ್​ ಅಶೋಕ್ ಅವರನ್ನು ಸಚಿವ ಸ್ಥಾನದಿಂದ ಕಿತ್ತುಹಾಕುವ ನಿರ್ಧಾರ ಮಾಡಿದ್ರು, ವಿಜಯೇಂದ್ರಗೆ ಟಿಕೆಟ್ ನೀಡಲು ಸಹ ಮೀನಮೇಷ ಎಣಿಸಿ, ಕೊನೆಗೆ ಕೊಟ್ಟಿದ್ದರು. ಬಿಜೆಪಿಯಲ್ಲಿ ಯಾರೂ ನಾಯಕರು ಇಲ್ಲದಿರುವ ಹಿನ್ನೆಲೆ ಅನಿವಾರ್ಯತೆಯಿಂದ ಅವರಿಬ್ಬರನ್ನು ಅಧ್ಯಕ್ಷ, ವಿರೋಧ ಪಕ್ಷ ನಾಯಕರನ್ನಾಗಿ ಮಾಡಿದ್ದಾರೆ ಎಂದು ವ್ಯಂಗ್ಯವಾಗಿ ಲೇವಡಿ ಮಾಡಿದರು.

ಸಮಾಜ ವಿಜ್ಞಾನ ಪುಸ್ತಕದಲ್ಲಿ ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳನ್ನು ಸೇರ್ಪಡೆ ಮಾಡ್ಬೇಕೆಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ಆದೇಶಕ್ಕೆ ಪ್ರತಿಕ್ರಿಯಿಸಿದ ಅವರು, ಇದರ ಬಗ್ಗೆ ಸರ್ಕಾರ ಕಮಿಟಿ ಮಾಡುತ್ತೆ ಎಂದು ಹೇಳಿದರು.

ಜಾತಿ ಗಣತಿ ವಿಚಾರದಲ್ಲಿ ಸರ್ಕಾರ ಸೂಕ್ತ ನಿರ್ಧಾರ :ಪ್ರತಿ ಮನೆಗೆ ಹೋಗಿ ಕೇಳಿಲ್ಲ ಎನ್ನುವುದನ್ನು ಸಿಎಂಗೆ ಮನವಿ ಮಾಡಲಾಗಿದೆ. ಜಾತಿಗಣತಿ ಅನಿವಾರ್ಯವಾಗಿದೆ. ಆದರೆ ಅದನ್ನು ಸರಿಯಾಗಿ ಮಾಡಿಲ್ಲ ಎಂಬ ಆರೋಪ ಇದೆ. ಜಾತಿಗಣತಿಯಲ್ಲಿ ದೋಷಗಳಿದ್ದರೆ ಕ್ಯಾಬಿನೆಟ್​​ನಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಎಲ್ಲ ಸಮಾಜದ ಜನರು ಕೂಡ ದೋಷ ಸರಿಪಡಿಸಿ ಎಂದು ಮನವಿ ಮಾಡ್ತಾ ಇದ್ದಾರೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಅದನ್ನು ರಿಸೀವ್ ಮಾಡಿಲ್ಲ, ಜಯಪ್ರಕಾಶ್ ಹೆಗಡೆ ಅಧ್ಯಕ್ಷರಾಗಿದ್ದು, ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.

ಗುಳೆ ಹೋಗದಂತೆ ತಡೆಗೆ ಕ್ರಮ: ಇನ್ನು ಬರದಿಂದ ಜನರು ಕಂಗೆಟ್ಟಿದ್ದು, ಅವರು ಗುಳೆ ಹೋಗದಂತೆ ತಡೆಯಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ನರೇಗಾ ಯೋಜನೆ ಇರಬಹುದು, ಗ್ಯಾರಂಟಿ ಯೋಜನೆಗಳನ್ನು ತಂದಿದ್ದೇವೆ, ಸರ್ಕಾರ 75 ಸಾವಿರ ಕೋಟಿ ರೂ. ಗಿಂತ ಹೆಚ್ಚು ವೆಚ್ಚ ಮಾಡಿ ವಿವಿಧ ಯೋಜನೆಗಳನ್ನು ಜನರಿಗೆ ಒದಗಿಸುತ್ತಿದೆ. ಪ್ರಸ್ತುತ ಬರವನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸಲಿದೆ ಎಂದು ಸ್ಪಷ್ಟಪಡಿಸಿದರು.

ಮಂಡ್ಯ ಜಿಲ್ಲೆಗೂ ಎರಡು ಸಚಿವ ಸ್ಥಾನ ಸಿಗಲಿ: ಶಾಸಕ ಪಿಎಂ ನರೇಂದ್ರ ಸ್ವಾಮಿ ಸಚಿವ ಸ್ಥಾನ ಅಕಾಂಕ್ಷಿ ಅಗಿದ್ದರು. ಮೊದಲಿನಿಂದ ಸಚಿವರಾಗಬೇಕು ಎಂಬ ಆಸೆಯಲ್ಲಿ ಇದ್ದರು. ಅನೇಕ ಜಿಲ್ಲೆಗಳಲ್ಲಿ ಎರಡು ಸಚಿವ ಸ್ಥಾನ ಸಿಕ್ಕಿದೆ, ಅದರಂತೆ ನಮ್ಮ‌ ಜಿಲ್ಲೆಗೂ ಎರಡು ಸಚಿವ ಸ್ಥಾನ ನೀಡಲಿ, ನಮ್ಮ ಮಂತ್ರಿ ಸ್ಥಾನಕ್ಕೆ ಕುತ್ತು ಬರೋಲ್ಲ. ನಾನು ಕೂಡ ಅವರು ಸಚಿವರಾಗಬೇಕೆಂದು ಆಶಿಸುತ್ತೇ‌ನೆ ಎಂದರು.

ಇದನ್ನೂಓದಿ:ದಾವಣಗೆರೆ: ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗಿಯಾಗಿ ಎಂಜಾಯ್ ಮಾಡಿದ ಪೊಲೀಸ್​ ಸಿಬ್ಬಂದಿ

Last Updated : Nov 23, 2023, 11:03 PM IST

ABOUT THE AUTHOR

...view details