ಕರ್ನಾಟಕ

karnataka

ಪಕ್ಷ ನನ್ನನ್ನು ಉಚ್ಛಾಟನೆ ಮಾಡಿಲ್ಲ, ನಲವತ್ತು ಲಕ್ಷ ಹಣ ಸಿಕ್ಕಿರುವ ಬಗ್ಗೆ ಮಾಹಿತಿ ಇಲ್ಲ: ಮಾಡಾಳ್ ವಿರೂಪಾಕ್ಷಪ್ಪ

By

Published : Mar 7, 2023, 9:55 PM IST

Updated : Mar 7, 2023, 10:08 PM IST

ಬಿಜೆಪಿ ಪಕ್ಷಕ್ಕೆ ನನ್ನಿಂದಾಗಿ ಮುಜುಗರ ಆಗಬಾರದೆಂದು ಕೆಎಸ್​ಡಿಎಲ್​ ಅಧ್ಯಕ್ಷ ಸ್ಥಾನಕ್ಕೆ ಮುಖ್ಯಮಂತ್ರಿ ಸೂಚನೆ ಮೇರೆಗೆ ರಾಜೀನಾಮೆ ಕೊಟ್ಟಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಡಾಳ್​ ವಿರೂಪಾಕ್ಷಪ್ಪ ತಿಳಿಸಿದರು.

there-is-no-information-about-getting-forty-lakh-money-modal-virupakshappa
ಪಕ್ಷ ನನ್ನನ್ನು ಉಚ್ಛಾಟನೆ ಮಾಡಿಲ್ಲ, ನಲವತ್ತು ಲಕ್ಷ ಹಣ ಸಿಕ್ಕಿರುವ ಬಗ್ಗೆ ಮಾಹಿತಿ ಇಲ್ಲ: ಮಾಡಾಳ್ ವಿರೂಪಾಕ್ಷಪ್ಪ

ಪಕ್ಷ ನನ್ನನ್ನು ಉಚ್ಛಾಟನೆ ಮಾಡಿಲ್ಲ, ನಲವತ್ತು ಲಕ್ಷ ಹಣ ಸಿಕ್ಕಿರುವ ಬಗ್ಗೆ ಮಾಹಿತಿ ಇಲ್ಲ: ಮಾಡಾಳ್ ವಿರೂಪಾಕ್ಷಪ್ಪ

ದಾವಣಗೆರೆ: ಬಿಜೆಪಿ ಪಕ್ಷ ನನ್ನನ್ನು ಉಚ್ಛಾಟನೆ ಮಾಡಿಲ್ಲ, ನಲವತ್ತು ಲಕ್ಷ ಹಣ ಸಿಕ್ಕಿರೋದು ಯಾವುದು ಅಂತ ನನಗೆ ಸ್ಪಷ್ವವಾದ ಮಾಹಿತಿ ಇಲ್ಲ. ಮೊಬೈಲ್ ಸ್ವಿಚ್ಡ್​​ ಆಫ್ ಮಾಡಿಕೊಂಡು ಮನೆಯಲ್ಲೇ ಇದ್ದೆ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘‘ಪುತ್ರನ ಮೇಲೆ ಲೋಕಾಯುಕ್ತ ದಾಳಿ ಆಗಿರುವ ಆರೋಪ ನಿರಾಧಾರ, ಅದು ಸತ್ಯಕ್ಕೆ ದೂರವಾದ ವಿಚಾರವಾಗಿದೆ‌, ಲೋಕಾಯುಕ್ತಕ್ಕೆ ನಲವತ್ತು ಲಕ್ಷ ಹಣ ಸಿಕ್ಕಿರುವುದು ಯಾವ ಹಣ ಎಂಬುದು ಮಾಹಿತಿ ಇಲ್ಲ, ಮೊಬೈಲ್ ಸ್ವೀಚ್ಡ್​ ಆಫ್ ಮಾಡಿಕೊಂಡು ಚನ್ನೇಶಪುರ ಮನೆಲ್ಲೆ ಇದ್ದೆ, ಎಲ್ಲೂ ಹೋಗಿಲ್ಲ. ಲೋಕಾಯುಕ್ತ ಸಂಸ್ಥೆಯ ಬಗ್ಗೆ ಅಪಾರ ಗೌರವವಿದೆ, ಭ್ರಷ್ಟಾಚಾರ ನಿರ್ಮೂಲನೆ ಮಾಡುವಂತ ಕೆಲಸ ಮಾಡುತ್ತಿದೆ ಅದಕ್ಕೆ ಗೌರವ ಕೋಡಬೇಕಾದದ್ದು ನಮ್ಮ ಧರ್ಮ, ಅವರ ಕೇಳುವ ಪ್ರಶ್ನೆಗೆ ಉತ್ತರಿಸುತ್ತೇನೆ ಎಂದು ಹೇಳಿದರು.

ಪಕ್ಷದ ಶಿಸ್ತಿನ ಸಿಪಾಯಿ ನಾನು:ಪಕ್ಷ ನನ್ನನ್ನು ಉಚ್ಛಾಟನೆ ಮಾಡಿಲ್ಲ, ಪಕ್ಷದ ಶಿಸ್ತಿನ ಸಿಪಾಯಿ ನಾನು, ಬಿಜೆಪಿ ಪಕ್ಷದ ಎರಡು ಶಾಸಕನಾಗಲು ಅವಕಾಶ ಮಾಡಿಕೊಟ್ಟಿದೆ. ನನ್ನಿಂದಾಗಿ ಪಕ್ಷಕ್ಕೆ ಮುಜುಗರ ಆಗಬಾರದೆಂದು ಕೆಎಸ್​ಡಿಎಲ್​ ಅಧ್ಯಕ್ಷ ಸ್ಥಾನಕ್ಕೆ ಮುಖ್ಯಮಂತ್ರಿ ಸೂಚನೆ ಮೇರೆಗೆ ರಾಜೀನಾಮೆ ಕೊಟ್ಟಿದ್ದೇನೆ. ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ನಾನು ಸಜ್ಜನ ರಾಜಕಾರಣಿ ಉಚ್ಛಾಟನೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ:ಸ್ವಕ್ಷೇತ್ರದಲ್ಲಿ ಮಾಡಾಳ್ ವಿರೂಪಾಕ್ಷಪ್ಪಗೆ ಅದ್ಧೂರಿ ಸ್ವಾಗತ: ದೋಷ ಮುಕ್ತನಾಗುವೆ ಎಂದು ಕಣ್ಣೀರು ಹಾಕಿದ ಶಾಸಕ

ಇನ್ನು ವಾಸ್ತವಾಂಶ ಬಗ್ಗೆ ಸುದ್ದಿ ಬಿತ್ತರಿಸಿ ಎಂದು ಮಾಡಾಳ್ ವಿರೂಪಾಕ್ಷಪ್ಪನವರು ಮಾಧ್ಯಮದವರಿಗೆ ಮನವಿ ಮಾಡಿದರು. ಇನ್ನು ಮಾಜಿ ಸಿಎಂ ಯಡಿಯೂರಪ್ಪ ಅವರು ಮಾಡಾಳ್ ವಿರೂಪಾಕ್ಷಪ್ಪನವರು ಮಾಡಿದ್ದು ತಪ್ಪು, ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಮಾಜಿ ಸಿಎಂ ಯಡಿಯೂರಪ್ಪ ಅವರ ಹೇಳಿಕೆ ತಪ್ಪೇನೂ ಇಲ್ಲ ಎಂದರು.

ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು:ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆದ್ದುರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕು ನಮಗೆ ಪಕ್ಷ ಮುಖ್ಯ. ಇನ್ನು ನಮ್ಮ ಮನೆಯಲ್ಲಿ ಆರು ಕೋಟಿ ಸಿಕ್ಕಿರುವ ಹಣದ ಬಗ್ಗೆ ಮಾಹಿತಿ ಇಲ್ಲ ನನ್ನ ಬಳಿ, ಎರಡು ಮೂರು ಕೋಟಿ ಹಣವನ್ನು ನಮ್ಮ ತಾಲೂಕಿನ ಸಾಕಷ್ಟು ಜನ ಅಡಕೆ ಹಣವನ್ನು ಮನೆ ಮನೆಗಳಲ್ಲಿ ಇಟ್ಟುಕೊಂಡಿರುವುದು ಸಾಮಾನ್ಯ, ನಾನು ಬ್ಯೂಸಿನೆಸ್ ಮ್ಯಾನ್, ಕೃಷಿಕ ಕೂಡ ಹೌದು, 125 ಎಕರೆ ಅಡಕೆ ತೋಟ ಇದೆ, ಪಾನ್ ಮಸಾಲ ಕಂಪನಿ ಸೇರಿದ್ದಂತೆ ಕ್ರಷನ್ ಕೂಡ ಇದೆ, ಮನೆಯಲ್ಲಿ ಅಷ್ಟು ಹಣ ಸಿಗುವುದು ಸಾಮಾನ್ಯ ಎಂದು ಹೇಳಿದರು.

ಇದನ್ನೂ ಓದಿ:ನಮ್ಮ ಪಕ್ಷದಲ್ಲಿ ಪ್ರಾಥಮಿಕ ತನಿಖಾ ವರದಿ ಬರುವವರೆಗೂ ಉಚ್ಛಾಟನೆ ಮಾಡುವ ವ್ಯವಸ್ಥೆ ಇಲ್ಲ: ಸಿ.ಟಿ.ರವಿ

Last Updated : Mar 7, 2023, 10:08 PM IST

ABOUT THE AUTHOR

...view details