ಕರ್ನಾಟಕ

karnataka

ಬೇಡಜಂಗಮ ಸರ್ಟಿಫಿಕೇಟ್ ಪಡೆದವರಿಗೆ ಜಿಲ್ಲೆಯಿಂದ ಬಿ-ಫಾರ್ಮ್ ನೀಡುವುದಿಲ್ಲ: ಸಂಸದ ಜಿ ಎಂ ಸಿದ್ದೇಶ್ವರ್

By

Published : Mar 27, 2022, 10:38 PM IST

ಪರಿಶಿಷ್ಟರಿಗೆ ಅನ್ಯಾಯ ಮಾಡುವುದಿಲ್ಲ. ಪರಿಶಿಷ್ಟರಿಗೆ ಮೀಸಲಾದ ಸ್ಥಾನ ಪರಿಶಿಷ್ಟರಿಗೆ ಕೊಡುತ್ತೇವೆ, ಇದರಲ್ಲಿ ಯಾವುದೇ ಅನುಮಾನವಿಲ್ಲ. ಬೇಡ ಜಂಗಮ ಸರ್ಟಿಫಿಕೇಟ್ ಪಡೆದವರಿಗೆ ಜಿಲ್ಲೆಯಿಂದ ಬಿ-ಫಾರ್ಮ್ ನೀಡುವುದಿಲ್ಲ ಎಂದು ಸಂಸದ ಜಿ ಎಂ ಸಿದ್ದೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಸಂಸದ ಜಿಎಂ ಸಿದ್ದೇಶ್ವರ್
ಸಂಸದ ಜಿಎಂ ಸಿದ್ದೇಶ್ವರ್

ದಾವಣಗೆರೆ: ಬೇಡಜಂಗಮ ಸರ್ಟಿಫಿಕೇಟ್ ಪಡೆದವರಿಗೆ ಜಿಲ್ಲೆಯಿಂದ ಬಿ-ಫಾರ್ಮ್ ನೀಡುವುದಿಲ್ಲ, ಪರಿಶಿಷ್ಟರಿಗೆ ಅನ್ಯಾಯ ಮಾಡುವುದಿಲ್ಲ. ಪರಿಶಿಷ್ಟರಿಗೆ ಮೀಸಲಾದ ಸ್ಥಾನ ಪರಿಶಿಷ್ಟರಿಗೆ ಕೊಡುತ್ತೇವೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಂಸದ ಜಿ ಎಂ ಸಿದ್ದೇಶ್ವರ್ ಹೇಳಿದ್ದಾರೆ.

ಸಂಸದ ಜಿ ಎಂ ಸಿದ್ದೇಶ್ವರ್ ಹೇಳಿಕೆ

ಬಿಜೆಪಿ ಜಿಲ್ಲಾ ತುರ್ತು ಕೋರ್ ಕಮಿಟಿ‌ ಸಭೆ ಬಳಿಕ ಮಾತನಾಡಿದ ಅವರು, ನಮ್ಮ ಪಕ್ಷದ ವಾಗೀಶ್ ಸ್ವಾಮಿ ಅವರಿಗೂ ಈ ಬಗ್ಗೆ ಸೂಚನೆ ನೀಡಿದ್ದೇವೆ. ಅವರು ಬೇಡಜಂಗಮ ಮೀಸಲಾತಿ ಅಡಿ ಸ್ಪರ್ಧಿಸಬೇಕು ಎಂದರೆ ಬಿಜೆಪಿಗೆ ರಾಜೀನಾಮೆ ನೀಡಿ ಪಕ್ಷೇತರವಾಗಿ ಸ್ಪರ್ಧಿಸಲಿ ಎಂದರು.

ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯುಂತೆ ವಿದ್ಯಾರ್ಥಿಗಳಿಗೆ ಮನವಿ: ಹೈಕೋರ್ಟ್ ಆದೇಶವನ್ನೂ ಎಲ್ಲ ವಿದ್ಯಾರ್ಥಿಗಳು ಪಾಲಿಸಬೇಕು, ಭವಿಷ್ಯ ಮುಖ್ಯ. ಎಲ್ಲರೂ ಕೋರ್ಟ್ ತೀರ್ಪನ್ನು ಪಾಲಿಸಬೇಕು, ಎಲ್ಲ ವಿದ್ಯಾರ್ಥಿಗಳು ಕೋರ್ಟ್ ತೀರ್ಪನ್ನು ಒಪ್ಪಿ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಬೇಕೆಂದು ಮನವಿ ಮಾಡಿದರು.

TAGGED:

ABOUT THE AUTHOR

...view details