ಕರ್ನಾಟಕ

karnataka

ಹರಿಹರ: 112 ಮಕ್ಕಳಿಗೆ ಪೌಷ್ಟಿಕ ಆಹಾರ ಧಾನ್ಯಗಳ ಕಿಟ್ ವಿತರಣೆ

By

Published : Oct 10, 2020, 10:54 AM IST

ಬೆಂಗಳೂರಿನ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಹಾಗೂ ಯೂತ್ ಫಾರ್ ಸೇವಾ ಸಂಸ್ಥೆಯಿಂದ ಮಕ್ಕಳಿಗೆ ಪೌಷ್ಟಿಕ ಧಾನ್ಯಗಳ ಕಿಟ್ ವಿತರಣೆ ಮಾಡಲಾಯಿತು.

Food kit
Food kit

ಹರಿಹರ : ಸಮುದಾಯವು ಆಸಕ್ತಿ ವಹಿಸಿದರೆ ಸರ್ಕಾರಿ ಶಾಲೆಗಳು ವಿಜ್ಞಾನಿ ಡಾ.ರಾಜಾ ರಾಮಣ್ಣನವರ ಆಶಯದಂತೆ ಅಭಿವೃದ್ಧಿ ಹೊಂದಲು ಸಾಧ್ಯವೆಂದು ದಾವಣಗೆರೆ ವಿವಿ ಸಿಂಡಿಕೇಟ್ ಸದಸ್ಯ ಟಿ.ಇನಾಯತ್‌ ಉಲ್ಲಾ ಹೇಳಿದರು.

ನಗರದ ಗಾಂಧಿ ಮೈದಾನದ ಸರ್ಕಾರಿ ಹಿರಿಯ ಪ್ರಾಥಮಿಕ (ಜಿಬಿಎಂಎಸ್) ಶಾಲೆಯಲ್ಲಿ ಬೆಂಗಳೂರಿನ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಹಾಗೂ ಯೂತ್ ಫಾರ್ ಸೇವಾ ಸಂಸ್ಥೆಯಿಂದ ಮಕ್ಕಳಿಗೆ ಪೌಷ್ಟಿಕ ಧಾನ್ಯಗಳ ಕಿಟ್ ವಿತರಿಸಿ ಮಾತನಾಡಿದ ಅವರು, ಡಾ.ರಾಜಾರಾಮಣ್ಣನ ಸಮುದಾಯ ದತ್ತ ಶಾಲೆ ಎಂಬ ಕಲ್ಪನೆಯಂತೆ ಸರ್ಕಾರ ಹೊಸ ನೀತಿಯನ್ನು ಜಾರಿ ಮಾಡಿದೆ. ಇದು ಅತ್ಯಂತ ಅಪರೂಪದ ಯೋಜನೆಯಾಗಿದೆ ಎಂದರು.

ಟೆಕ್ಸಾಸ್ ಕಂಪೆನಿಯ ಮಲ್ಲಿಕಾರ್ಜುನಯ್ಯ ಮಾತನಾಡಿ, ಪ್ರತಿ ಕಂಪೆನಿಗೂ ಸಾಮಾಜಿಕ ಜವಾಬ್ದಾರಿ ಯೋಜನೆಯಡಿ ಶೇ.2 ರಷ್ಟು ಲಾಭವನ್ನು ಸಾಮಾಜಿಕ ಕಾರ್ಯಕ್ಕೆ ಬಳಸಬೇಕೆಂದಿದೆ. ಆ ಪ್ರಕಾರ ನಮ್ಮ ಕಂಪೆನಿ ಜಿಲ್ಲೆಯ ಹತ್ತಾರು ಶಾಲೆಗಳ ಮಕ್ಕಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಿಸುತ್ತಿದೆ. ಮುಂದಿನ ದಿನಗಳಲ್ಲಿ ಮಕ್ಕಳಿಗೆ ಬ್ಯಾಗ್ ಸೇರಿದಂತೆ ಇತರೆ ಸಲಕರಣೆ ವಿತರಿಸುವುದಾಗಿ ಹೇಳಿದರು.

ಆಶ್ರಯ ಕಾಲೋನಿಯ ಸರ್ಕಾರಿ ಶಾಲೆಯ ಮಕ್ಕಳು ಸೇರಿದಂತೆ 112 ಮಕ್ಕಳಿಗೆ ಈ ಸಂದರ್ಭದಲ್ಲಿ ಕಿಟ್ ವಿತರಿಸಲಾಯಿತು.

ಈ ವೇಳೆ ಟೆಕ್ಸಾಸ್ ಕಂಪೆನಿಯ ಗಣೇಶ್, ಅಕ್ಷರ ದಾಸೋಹ ಎಡಿ ರಾಮಕೃಷ್ಣಪ್ಪ ಪಿ.ಆರ್., ಬಿಆರ್‌ಸಿ ವಿಶ್ವನಾಥ, ಇಸಿಒ ತೀರ್ಥಪ್ಪ, ಸಿಆರ್‌ಪಿಗಳಾದ ತಿಪ್ಪೇಸ್ವಾಮಿ, ರೂಪಾ, ರೇವಣ್ಣ, ಮುಖ್ಯ ಶಿಕ್ಷಕರಾದ ವೇದಮೂರ್ತಿ, ಶ್ರೀನಿವಾಸ್, ಶಿಕ್ಷಕರಾದ ಮೀರಾಬಾಯಿ, ಸುಮಂಗಲಮ್ಮ, ಹನಗೋಡಿ ಮಠ ಇತರರಿದ್ದರು.

ABOUT THE AUTHOR

...view details