ಕರ್ನಾಟಕ

karnataka

ಉಕ್ರೇನ್​ನಿಂದ ಬಂದ ನಮ್ಮ ಮಕ್ಕಳ ಭವಿಷ್ಯಕ್ಕೆ ಏನಾದ್ರು ವ್ಯವಸ್ಥೆ ಮಾಡಿ : ಜಿಲ್ಲಾಡಳಿಕ್ಕೆ ಪೋಷಕರ ಮನವಿ

By

Published : Mar 18, 2022, 5:27 PM IST

ಉಕ್ರೇನ್​ನಿಂದ ಆಗಮಿಸಿದ 11 ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಜೊತೆ ಸಂವಾದ ನಡೆಸಿದ ಜಿಲ್ಲಾಡಳಿತ, ಅವರ ಅನುಭವಗಳನ್ನು ದಾಖಲಿಸಿತು..

Davangere DC conversation with students who came from Ukraine
Davangere DC conversation with students who came from Ukraine

ದಾವಣಗೆರೆ: ಉಕ್ರೇನ್ ಹಾಗೂ ರಷ್ಯಾದ‌ ನಡುವೆ ನಡೆದ ಯುದ್ಧದಿಂದ ಭಾರತದ ಸಾಕಷ್ಟು ಎಂಬಿಬಿಎಸ್ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. ಈಗಾಗಲೇ ತಮ್ಮ ತವರಿಗೆ ಸುರಕ್ಷಿತವಾಗಿ ಮರಳಿದ ವಿದ್ಯಾರ್ಥಿಗಳಿಗೆ ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ.

ದಾವಣಗೆರೆಗೆ 11 ಜನ ವಿದ್ಯಾರ್ಥಿಗಳು ಮರಳಿದ್ದು, ಅವರೊಂದಿಗೆ ಜಿಲ್ಲಾಡಳಿತ ಸಂವಾದ ನಡೆಸಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಏನಾದ್ರು ವ್ಯವಸ್ಥೆ ಮಾಡಿ ಎಂದು ಉಕ್ರೇನ್​ನಿಂದ ಮರಳಿದ ವಿದ್ಯಾರ್ಥಿಗಳ ಪೋಷಕರು ಅಧಿಕಾರಿಗಳ ಬಳಿ ನೋವು ತೋಡಿಕೊಂಡಿದ್ದಾರೆ.

ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಅನುಭವಗಳನ್ನು ಜಿಲ್ಲಾಡಳಿತ ಆಲಿಸಿತು. ಉಕ್ರೇನ್​​ನ ಪರಿಸ್ಥಿತಿ, ಅಲ್ಲಿ ಎದುರಿಸಿದ ಸಂಕಷ್ಟ, ಭಾರತ ಸರ್ಕಾರ ಮಾಡಿದ ಸಹಾಯ ಇವೆಲ್ಲವುಗಳನ್ನು ವಿದ್ಯಾರ್ಥಿಗಳು ಮೆಲುಕು ಹಾಕಿದರೆ, ಇತ್ತ ಸರ್ಕಾರಕ್ಕೆ ಕೃತಜ್ಞರಾಗಿರುವುದಾಗಿ ಪೋಷಕರು ತಿಳಿಸಿದರು. ಹಾಗೆಯೇ ಮುಂದೆ ನಮ್ಮ ಮಕ್ಕಳ‌ ಭವಿಷ್ಯಕ್ಕೆ ಏನಾದರೂ ವ್ಯವಸ್ಥೆ ಮಾಡಿ ಎಂದರು.

ಉಕ್ರೇನ್​ನಿಂದ ಬಂದ ವಿದ್ಯಾರ್ಥಿಗಳ ಜೊತೆ ದಾವಣೆಗೆರೆ ಜಿಲ್ಲಾಧಿಕಾರಿ ಸಂವಾದ

ಪ್ರಲ್ಹಾದ ಜೋಶಿ, ಸಂಸದ ತೇಜಸ್ವಿಸೂರ್ಯ, ಇಂಡಿಯನ್ ಎಂಬೆಸಿ ಅಧಿಕಾರಿಗಳು, ದಾವಣಗೆರೆ ಸಂಸದರು ಜಿಲ್ಲಾಧಿಕಾರಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಹಾಗೂ ಪೋಷಕರು ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ನೀಡಿದ ಭರವಸೆಯನ್ನು ಶ್ಲಾಘಿಸಿದರು.

ಇದನ್ನೂ ಓದಿ:ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಖುರ್ಚಿಗೆ ಕುತ್ತು!

ವಿದ್ಯಾರ್ಥಿಗಳಿಗೆ ದಾವಣಗೆರೆ ಜಿಲ್ಲಾಧಿಕಾರಿ ನೆನಪಿನ ಕಾಣಿಕೆ ನೀಡಿ ಅಭಿನಂದನೆ ಸಲ್ಲಿಸಿದರು. ಸರ್ಕಾರ ನೆರವಾಗದಿದ್ದರೇ ನಮ್ಮ ಮಕ್ಕಳನ್ನು ಮತ್ತೆ ಎಂದಿಗೂ ನೋಡದಂತಹ ಸ್ಥಿತಿ ಇತ್ತು. ದೇಶದ ಪ್ರಧಾನಿ ಅವರ ಟೀಂ​ಗೆ ನಮ್ಮದೊಂದು ಸಲಾಮ್ ಎಂದ ಪೋಷಕರು ಸರ್ಕಾರಕ್ಕೆ ನಾವೆಂದು ಚಿರಋಣಿ ಎಂದರು.

TAGGED:

ABOUT THE AUTHOR

...view details