ಕರ್ನಾಟಕ

karnataka

ದಾವಣಗೆರೆ: ಪಕ್ಷದಿಂದ ಕಾಂಗ್ರೆಸ್​ ಮುಖಂಡನ ಉಚ್ಛಾಟನೆ; ಜಿಲ್ಲಾಧ್ಯಕ್ಷರ ವಿರುದ್ಧ ಮುಖಂಡನ ಆಕ್ರೋಶ!

By

Published : Sep 9, 2022, 10:40 PM IST

ಕಾಂಗ್ರೆಸ್​ ಮುಖಂಡ ವೈ ರಾಮಪ್ಪ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವ ಹಿನ್ನೆಲೆ ದಾವಣಗೆರೆ ಕಾಂಗ್ರೆಸ್​ನ​ ಜಿಲ್ಲಾಧ್ಯಕ್ಷ ವಿರುದ್ದ ರಾಮಪ್ಪ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Kn_dvg_01
ಜಿಲ್ಲಾಧ್ಯಕ್ಷನ ವಿರುದ್ಧ ಮುಖಂಡ ಆಕ್ರೋಶ

ದಾವಣಗೆರೆ: ಕಾಂಗ್ರೇಸ್​ನಲ್ಲಿ ಜಿಲ್ಲಾಧ್ಯಕ್ಷ ಮತ್ತು ಮುಖಂಡರ ಒಳಜಗಳ ಬೀದಿಗೆ ಬಿದ್ದಿದೆ. ಕಾಂಗ್ರೆಸ್​ನಿಂದ ಉಚ್ಚಾಟನೆಯಾಗಿರುವ ಕೈ ಮುಖಂಡ ಡಾ.ವೈ.ರಾಮಪ್ಪ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ವಿರುದ್ಧ ಕೆಂಡಕಾರಿದ್ದಾರೆ.

ಜಿಲ್ಲಾಧ್ಯಕ್ಷನ ವಿರುದ್ಧ ಮುಖಂಡ ಆಕ್ರೋಶ

ಪಕ್ಷದಿಂದ ಉಚ್ಛಾಟನೆ ಮಾಡಿದ್ದಕ್ಕೆ ಜಿಲ್ಲಾಧ್ಯಕ್ಷರ ವಿರುದ್ಧ ದಾವಣಗೆರೆಯಲ್ಲಿ ಪ್ರತಿಕಾಗೋಷ್ಠಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಅವರು, ಸಮಯ ಸಾಧಿಸಿ ರಾಜಕೀಯವಾಗಿ ತುಳಿಯಲು ನನ್ನ ವಿರುದ್ಧ ಪಿತೂರಿ ಮಾಡಲಾಗಿದೆ. ನನ್ನ ವಿರುದ್ಧ ಕೆಪಿಸಿಸಿ ಶಿಸ್ತು ಸಮಿತಿಗೆ ದೂರು ನೀಡಿರುವ ಜಿಲ್ಲಾಧ್ಯಕ್ಷ ಮಂಜಪ್ಪ ನಾಲಾಯಕ, ಯಾರದೋ ಮಾತು ಕೇಳಿ ಈ ಕೃತ್ಯ ನಡೆಸಲಾಗಿದೆ‌. ಮಂಜಪ್ಪಗೆ ಸಾಮಾನ್ಯ ಜ್ಞಾನವಿಲ್ಲ, ಆತ ನಾಲಾಯಕ ಜಿಲ್ಲಾಧ್ಯಕ್ಷ, ಎಂದು ವಾಗ್ದಾಳಿ ನಡೆಸಿದರು.

ಇನ್ನು ಮಾಜಿ ಸಚಿವ ಮಲ್ಲಿಕಾರ್ಜುನ್ ವಿರುದ್ದ ಹರಿಹಾಯ್ದಾ ವೈ ರಾಮಪ್ಪ, 50 ಜನರು ಬಂದರು ನನ್ನನ್ನ ಏನು ಮಾಡಲು ಸಾಧ್ಯವಿಲ್ಲ, ಮಲ್ಲಿಕಾರ್ಜುನ ಮೂರೇ ಮೂವರ ಮಾತು ಕೇಳಿ ಈ ತರಹ ಮಾಡಿದ್ದಾರೆ. ಶ್ರೀಮಂತಿಕೆ ಇದ್ದರೆ ಅವರ ಮನೆಯಲ್ಲಿ ಇಟ್ಟುಕೊಳ್ಳಲಿ. ಇವರಿಗೆ ಕಾಂಗ್ರೆಸ್​ನ ಸಂಸ್ಕೃತಿ, ಸಿದ್ದಾಂತ, ನೀತಿ ನಿಯಮಗಳು ಗೊತ್ತಿಲ್ಲ, ಈ ಬಗ್ಗೆ ನಾನು ಸೋನಿಯಾ ಗಾಂಧಿಯವರಿಗೆ ಮಾಹಿತಿ ನೀಡಿದ್ದೇನೆ.

ನನ್ನ ಪತ್ರಕ್ಕೆ ಜಿಲ್ಲಾಧ್ಯಕ್ಷ ಮಂಜಪ್ಪ ಉತ್ತರ ನೀಡದಿದ್ದರೆ ಅವರ ವಿರುದ್ದ ಕ್ರಿಮಿನಲ್ ಕೇಸ್ ಹಾಕುತ್ತೇನೆ, ಮಲ್ಲಿಕಾರ್ಜುನ ಬಿಜೆಪಿಗೆ ಬೆಂಬಲ ನೀಡುತ್ತಾರೋ, ಪಕ್ಷವನ್ನ ಬೆಳೆಸುತ್ತಾರೋ ಹೇಳಲಿ ಎಂದು ವೈ‌.ರಾಮಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ವಿಧಾನ ಮಂಡಲ ಅಧಿವೇಶನ ಹಿನ್ನೆಲೆ ಶಾಸಕಾಂಗ ಸಭೆ ಕರೆದ ಕಾಂಗ್ರೆಸ್

ABOUT THE AUTHOR

...view details