ಕರ್ನಾಟಕ

karnataka

ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬ್ಯಾನರ್ ಬಳಕೆ ನಿಷೇಧ

By

Published : Sep 14, 2020, 11:42 AM IST

ಎಲ್ಲಾ ಟ್ರಾಫಿಕ್ ಸಿಗ್ನಲ್ ವೃತ್ತಗಳಲ್ಲಿ ದೊಡ್ಡ ಪ್ರಮಾಣದ ಬ್ಯಾನರ್, ಕಟೌಟ್‍ಗಳನ್ನು ಅಳವಡಿಸುತ್ತಿರುವುದರಿಂದ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ದಾವಣಗೆರೆಯಲ್ಲಿ ಬ್ಯಾನರ್ ಬಳಕೆ ನಿಷೇಧ ಮಾಡಲಾಗಿದೆ.

ದಾವಣಗೆರೆ ಎಸ್ ಪಿ
ದಾವಣಗೆರೆ ಎಸ್ ಪಿ

ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಂಟಿಂಗ್ಸ್ ಹಾಗೂ ಬ್ಯಾನರ್​​​​ಗಳಿಗೆ ನಿಷೇಧ ಹೇರಲಾಗಿದೆ. ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ನಗರದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಧಾರ್ಮಿಕ ಮುಖಂಡರು ಮತ್ತು ಮುದ್ರಣ ಮಾಲೀಕರ ಜೊತೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಗರದ ಸುಗಮ ಸಂಚಾರಕ್ಕೆ ಅನುಕೂಲ‌ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸಿಸಿಟಿವಿ, ಸ್ಮಾರ್ಟ್ ಪಾರ್ಕಿಂಗ್, ಸಂಚಾರ ಸಿಗ್ನಲ್‍ಗಳನ್ನು ಅಳವಡಿಸಲಾಗುತ್ತಿದೆ. ಈ ಕಾಮಗಾರಿಗಳು ಸಂಪೂರ್ಣ ಪೂರ್ಣಗೊಳ್ಳುವ ಹಂತದಲ್ಲಿದ್ದು, ನಗರದಲ್ಲಿ ವಿವಿಧ ಸಮುದಾಯದ ಹಬ್ಬಗಳು, ಜನ್ಮ ದಿನಾಚರಣೆ, ವಿವಿಧ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಮುಖಂಡರುಗಳ ಬ್ಯಾನರ್ ಅಳವಡಿಸಬಾರದು ಎಂದು ಎಸ್​​​​ಪಿ ಹನುಮಂತರಾಯ ಹೇಳಿದರು.

ಎಲ್ಲಾ ಟ್ರಾಫಿಕ್ ಸಿಗ್ನಲ್ ವೃತ್ತಗಳಲ್ಲಿ ದೊಡ್ಡ ಪ್ರಮಾಣದ ಬ್ಯಾನರ್, ಕಟೌಟ್‍ಗಳನ್ನು ಅಳವಡಿಸುತ್ತಿರುವುದರಿಂದ ನಗರದ ಸುಗಮ ಸಂಚಾರಕ್ಕೆ ಹಾಗೂ ಟ್ರಾಫಿಕ್ ಸಿಗ್ನಲ್ ದೀಪಗಳು ವಾಹನ ಸವಾರರಿಗೆ ಗೋಚರಿಸುತ್ತಿಲ್ಲ. ಇದರಿಂದ ಲಘು ಅಪಘಾತಗಳು ಹಾಗೂ ಮಾರಣಾಂತಿಕ ಅಪಘಾತಗಳು ಸಂಭವಿಸುತ್ತಿದ್ದು, ಈ ಕುರಿತಂತೆ ಅನೇಕ ಬಾರಿ ಬ್ಯಾನರ್ ಮತ್ತು ಬಂಟಿಂಗ್ಸ್ ಗಳನ್ನು ಕಟ್ಟದಂತೆ ಗುತ್ತಿಗೆದಾರರಿಗೆ ಮೌಖಿಕವಾಗಿ ಎಚ್ಚರಿಕೆಯನ್ನು ನೀಡಿದ್ದರೂ ಸಹ ಅದೇ ಪ್ರವೃತ್ತಿಯನ್ನು ಮುಂದುವರಿಸಿದ್ದಾರೆ ಎಂದು ಹೇಳಿದರು.

ಸಿಸಿಟಿವಿ ಅಳವಡಿಸಿರುವ ಸ್ಥಳಗಳಲ್ಲಿ ಕ್ಯಾಮರಾಗಳಿಗೆ ದೃಶ್ಯಗಳು ಕಾಣದಂತೆ ಹಾಗೂ ಸಿಸಿಟಿವಿ ಕಂಬಗಳಿಗೆ ಬ್ಯಾನರ್ ಕಟ್ಟಿದ್ದಾರೆ. ಇದು ಮುಂದುವರಿದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ABOUT THE AUTHOR

...view details