ಕರ್ನಾಟಕ

karnataka

ಫೈನಾನ್ಸ್ ಏಜೆಂಟ್ ಮೇಲೆ ಹಲ್ಲೆ ಪ್ರಕರಣ....ನಕಲಿ ಸ್ವಾಮೀಜಿ ಬಂಧನ

By

Published : May 5, 2019, 7:04 PM IST

ದತ್ತಾತ್ರೇಯ ಅವಧೂತ ಸ್ವಾಮಿ ಎಂದು ಹೇಳಿಕೊಂಡು ತಿರುಗುತ್ತಿದ್ದ ನಕಲಿ ಸ್ವಾಮಿ ರಾಘವೇಂದ್ರ ಕೊಲೆಯತ್ನದ ಆರೋಪದ ಮೇಲೆ ಬಂಧಿಸಲಾಗಿದೆ.

ದತ್ತಾತ್ರೇಯ ಅವಧೂತ ಸ್ವಾಮಿ ಎಂದು ಹೇಳಿಕೊಂಡು ತಿರುಗುತ್ತಿದ್ದ ನಕಲಿ ಸ್ವಾಮಿ ರಾಘವೇಂದ್ರ ಬಂಧನ

ದಾವಣಗೆರೆ:ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ದತ್ತಾತ್ರೇಯ ಅವಧೂತ ಸ್ವಾಮಿ ಎಂದು ಹೇಳಿಕೊಂಡು ತಿರುಗುತ್ತಿದ್ದ ಹಿರೇಕೆರೂರು ಪಟ್ಟಣದ ಹೊಸೂರು ನಗರದ ರಾಘವೇಂದ್ರ ಮತ್ತು ಚಾಲಕ ಲಿಂಗರಾಜ ಅವರನ್ನು ವಂಚನೆ, ಕೊಲೆಯತ್ನದ ಆರೋಪದ ಮೇಲೆ ಬಂಧಿಸಲಾಗಿದೆ.

ಘಟನೆ ಹಿನ್ನಲೆ

ದಾವಣಗೆರೆಯ ಟಾಟಾ ಕ್ಯಾಪಿಟಲ್ ಫೈನಾನ್ಸ್‌ನಲ್ಲಿ ವಾಹನದ ಮೇಲೆ ರಾಘವೇಂದ್ರ ಸಾಲ ಪಡೆದಿದ್ದರು. ಸಾಲ ಮರುಪಾವತಿ ಮಾಡುವಂತೆ ಕೇಳಿದ ಏಜೆಂಟ್ ಚಮನ್‌ ಅವರ ಮೇಲೆ ರಾಘವೇಂದ್ರ ಮತ್ತು ಲಿಂಗರಾಜ ಹಲ್ಲೆ ನಡೆಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲು ಯತ್ನಿಸಿದ್ದರು ಎನ್ನಲಾಗಿದೆ. ಈ ಸಂಬಂಧ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಈ ಹಿನ್ನಲೆ ಹಾವೇರಿ ಜಿಲ್ಲೆಯ ಹಿರೇಕೆರೂರಿನ ನಕಲಿ ಸ್ವಾಮೀಜಿಯನ್ನು‌ ಪೊಲೀಸರು ಶನಿವಾರ ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ.

ತಾನು ಅವಧೂತ ಸ್ವಾಮೀಜಿ ಎಂದು ಜನರಿಗೆ ನಂಬಿಸಿ ರಾಘವೆಂದ್ರ ವಂಚಿಸಿರುವ ಹಲವು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ. ಸಮನ್ಸ್ ಜಾರಿ ಮಾಡಲು ಹೋದ ಪೊಲೀಸರ ಮೇಲೆಯೂ ಹಲ್ಲೆ ನಡೆಸಿದ್ದ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಹೀಗಾಗಿ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಆರೋಪಿಗಳನ್ನು ಬಂಧಿಸಿದೆ.

ABOUT THE AUTHOR

...view details