ಕರ್ನಾಟಕ

karnataka

Watch.... ಸಿಎಂ ಬೊಮ್ಮಾಯಿ ಜತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ವಿದ್ಯಾರ್ಥಿನಿಯರು

By

Published : Oct 16, 2021, 7:53 PM IST

ದಾವಣಗೆರೆಯ ಸುರಹೊನ್ನೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಿದ್ರು. ಈ ವೇಳೆ ಶಾಲಾ ವಿದ್ಯಾರ್ಥಿನಿಯರು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು.

ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ದಾವಣಗೆರೆ: ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಜಿಲ್ಲೆಯ ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮಕ್ಕೆ ಆಗಮಿಸಿದ್ರು. ಈ ವೇಳೆ, ವಿದ್ಯಾರ್ಥಿನಿಯರು ಸಿಎಂ ಜತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ರು.

ಸಿಎಂ ಬೊಮ್ಮಾಯಿ ಜತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಶಾಲಾ ವಿದ್ಯಾರ್ಥಿನಿಯರು

ಸುರಹೊನ್ನೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಸಿಎಂ ಬೊಮ್ಮಾಯಿ, ಸಚಿವ ಆರ್.ಅಶೋಕ್ ಆಗಮಿಸಿದ್ದರು. ಸುರಹೊನ್ನೆ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಚಕ್ಕಡಿ ಗಾಡಿಯಲ್ಲಿ ಹತ್ತಿದ ಸಿಎಂ ಬೊಮ್ಮಾಯಿ ಹಾಗೂ ಆರ್.ಅಶೋಕ್ ಮೆರವಣಿಗೆಯಲ್ಲಿ ಭಾಗಿಯಾದರು. ಬಳಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದ ಸ್ಥಳಕ್ಕೆ ಸಿಎಂ ಆಗಮಿಸಿದ್ದು, ಈ ವೇಳೆ ಬಾಲಕಿಯರು ಸಿಎಂ ಜತೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ರು.

ಇದನ್ನೂ ಓದಿ: ಜಿಲ್ಲಾಧಿಕಾರಿ ನಡೆ - ಹಳ್ಳಿ ಕಡೆ ಕಾರ್ಯಕ್ರಮ: ಎತ್ತಿನಗಾಡಿ ಏರಿದ ಚಾಮರಾಜನಗರ ಡಿಸಿ, ಎಸಿ..!

ಇನ್ನೂ ಕೆಲವರು, ಸಿಎಂ ಕಾರ್ಯಕ್ರಮ ಮುಗಿಸಿ ಬರುವವರೆಗೂ ಕಾದು ಕುಳಿತು ಸೆಲ್ಫಿ ಕ್ಲಿಕ್ಕಿಸಿದ್ರು. ಬಳಿಕ ಸಿಎಂ, ಶಾಲಾ ಮಕ್ಕಳಿಗೆ ಚೆನ್ನಾಗಿ ಓದಿ, ಆಲ್ ದಿ ಬೆಸ್ಟ್ ಎಂದು ಹೇಳಿದ್ರು.

ABOUT THE AUTHOR

...view details