ಮಂಗಳೂರು:ಹಿಂದೂ ಕುಟುಂಬವೊಂದರ ಗೃಹ ಪ್ರವೇಶದಂದು ಆಯೋಜಿಸಿದ್ದ ಯಕ್ಷಗಾನ ಕಾರ್ಯಕ್ರಮವನ್ನು ಮುಸ್ಲಿಂ ಕುಟುಂಬವೊಂದು ತಮ್ಮ ಅಂಗಳದಲ್ಲಿಯೇ ಆಯೋಜಿಸಲು ಅವಕಾಶ ನೀಡಿ ಕೋಮು ಸಾಮರಸ್ಯ ಮೆರೆದ ಘಟನೆ ಮಂಗಳೂರಿನ ಕಿನ್ನಿಗೋಳಿಯಲ್ಲಿ ನಡೆದಿದೆ.
ನಾಗೇಶ್ ಎಂಬುವರು ಕಿನ್ನಿಗೋಳಿಯಲ್ಲಿ ನೂತನವಾಗಿ ಮನೆಯೊಂದನ್ನು ಕಟ್ಟಿಸಿದ್ದು, ನ.20ರಂದು ಗೃಹ ಪ್ರವೇಶ ಕಾರ್ಯಕ್ರಮವಿತ್ತು. ಯಕ್ಷಗಾನ ಹವ್ಯಾಸಿ ಕಲಾವಿದರಾಗಿರುವ ನಾಗೇಶ್ ಅವರು ಅಂದು ಸಂಜೆ ಗೃಹ ಪ್ರವೇಶದ ನಿಮಿತ್ತ ಯಕ್ಷಗಾನವನ್ನು ಆಯೋಜಿಸಿದ್ದರು. ಆದರೆ, ಯಕ್ಷಗಾನ ನಡೆಸಲು ಸ್ಥಳದ ಕೊರತೆಯಿದ್ದ ಕಾರಣ ನೆರೆಯ ಅಬ್ದುಲ್ ರಜಾಕ್ ಎಂಬುವರು ತಮ್ಮ ಮನೆಯ ಅಂಗಳದಲ್ಲಿಯೇ ಯಕ್ಷಗಾನ ಪ್ರದರ್ಶಿಸಲು ಅವಕಾಶ ನೀಡಿದ್ದಾರೆ.