ಕರ್ನಾಟಕ

karnataka

ಅಡಕೆ ಕಳ್ಳ ಸಾಗಣೆ, ಆಮದು ತಡೆಯಿರಿ: ಪ್ರಧಾನಿಗೆ ಡಾ. ವೀರೇಂದ್ರ ಹೆಗ್ಗಡೆ ಪತ್ರ

By

Published : Jun 3, 2022, 5:54 PM IST

ಅಡಕೆ ಕಳ್ಳ ಸಾಗಾಣಿಕೆ ತಡೆಯುವಂತೆ ಆಗ್ರಹಿಸಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

veerendra-heggade-wrote-letter-to-pm-modi-to-stop-illegal-areca-nut-import
ಅಡಿಕೆ ಕಳ್ಳ ಸಾಗಾಣಿಕೆ, ಆಮದು ತಡೆಯಿರಿ: ಪ್ರಧಾನಿಗೆ ಡಾ. ವೀರೇಂದ್ರ ಹೆಗ್ಗಡೆ ಪತ್ರ

ಮಂಗಳೂರು:ಅಡಕೆ ಕಳ್ಳ ಸಾಗಣೆದಾರರ ಅಕ್ರಮಗಳಿಂದ ಸ್ಥಳೀಯವಾಗಿ ಬೆಳೆದ ಬೆಳೆಗೆ ಬೆಲೆಯಲ್ಲಿ ಅಸ್ಥಿರವಾಗುತ್ತಿದೆ. ಇದು ಲಕ್ಷಾಂತರ ಅಡಕೆ ಬೆಳೆಗಾರರ ಬದುಕು ಮತ್ತು ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಕಳ್ಳ ಸಾಗಾಣಿಕೆ ತಡೆಯಲು ಕ್ರಮ ವಹಿಸುವಂತೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಕ್ಯಾಂಪ್ಕೋ ಸಂಸ್ಥೆಯ ಅಡಕೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಡಾ. ವೀರೇಂದ್ರ ಹೆಗ್ಗಡೆ, ವಿದೇಶಗಳಿಂದ ರಾಜ್ಯಕ್ಕೆ ಅಕ್ರಮ ಅಡಕೆ ಸರಬರಾಜಾಗುತ್ತಿದೆ. ಭಾರತದಲ್ಲಿ ಪ್ರತಿ ವರ್ಷ 15.63 ಟನ್​ಗಳಷ್ಟು ಅಡಿಕೆ ಉತ್ಪಾದಿಸಲಾಗುತ್ತಿದೆ. ಆದರೂ 24 ಸಾವಿರ ಟನ್ ಅಡಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಇದರ ಜೊತೆಗೆ ಜಿಎಸ್​​ಟಿಯು ಬೆಳೆಗಾರರ ಆದಾಯಕ್ಕೆ ಕುತ್ತು ತಂದಿದೆ. ಕೇಂದ್ರ ಸರ್ಕಾರ ತೆರಿಗೆ ಇಳಿಸಲು ಮುಂದಾಗಬೇಕು. ಅಕ್ರಮ ಸಾಗಣೆ ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಅಡಕೆ ಕಳ್ಳಸಾಗಾಣಿಕೆ ಅಸ್ತಿತ್ವದಲ್ಲಿದೆ ಎಂದು ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಹೇಳಿಕೆ ನೀಡಿದ್ದಾರೆ. ಅಡಕೆ ಸರಕು ಪಟ್ಟಿಯಲ್ಲಿ ಕಡಿಮೆ ದರ ನಮೂದಿಸಿ ಮಾರಾಟ ಮಾಡುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಈ ವರ್ಷ ಹಳೆಯ ವಸ್ತ್ರಸಂಹಿತೆ ಮುಂದುವರಿಸಿ: ಮಂಗಳೂರು ವಿವಿಯ ಹಿಜಾಬ್ ಪರ ವಿದ್ಯಾರ್ಥಿನಿ ಬೇಡಿಕೆ

TAGGED:

ABOUT THE AUTHOR

...view details