ಕರ್ನಾಟಕ

karnataka

ಮಂಗಳೂರು ಶೂಟೌಟ್​ನಲ್ಲಿ ಮಗನಿಗೆ ಗುಂಡು ತಗುಲಿದ ಪ್ರಕರಣ.. ತಂದೆಯ ಬಂಧನ

By

Published : Oct 7, 2021, 7:51 PM IST

rajesh-prabhu
ರಾಜೇಶ್ ಪ್ರಭು ()

ನಗರದಲ್ಲಿ ಬುಧವಾರ ನಡೆದ ಮಿಸ್​ಫೈರಿಂಗ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು: ನಗರದ ಮೋಗರ್ನ್ಸ್‌ಗೇಟ್​ನಲ್ಲಿ ನಡೆದ ಶೂಟೌಟ್​ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಷ್ಣವಿ ಕಾರ್ಗೋ ಸಂಸ್ಥೆಯ ಮಾಲೀಕ ರಾಜೇಶ್ ಪ್ರಭು ಅವರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.

ತನ್ನದೇ ಪಿಸ್ತೂಲ್​ನಿಂದ ಹಾರಿದ ಗುಂಡು ಪುತ್ರನಿಗೆ ತಗುಲಿ ಆತನ ಮೆದುಳು ನಿಷ್ಕ್ರಿಯಗೊಂಡ ವಿಚಾರ ತಿಳಿಯುತ್ತಿದ್ದಂತೆ ಉದ್ಯಮಿ ರಾಜೇಶ್ ಪ್ರಭುಗೆ ಹೃದಯಾಘಾತವಾಗಿತ್ತು. ತಕ್ಷಣ ಪೊಲೀಸ್ ವಶದಲ್ಲಿದ್ದ ಅವರನ್ನು ಯುನಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಬೆಳಗ್ಗೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ರಾಜೇಶ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ರಾಜೇಶ್ ಪ್ರಭು ಅವರು ಸಂಸ್ಥೆಯ ಗೂಡ್ಸ್ ಕಂಟೈನರ್ ಚಾಲಕ, ಕ್ಲೀನರ್‌ ಗಳಾದ ಅಶ್ರಫ್, ಚಂದ್ರಹಾಸ ಎಂಬುವರಿಗೆ ಮೊದಲೇ 10 ಸಾವಿರ ರೂ. ಸಂಬಳ ನೀಡಿದ್ದರು. ಇನ್ನುಳಿದ 4 ಸಾವಿರ ರೂ.ವನ್ನು ಮತ್ತೆ ನೀಡುವುದಾಗಿ ಹೇಳಿ ಎರಡು ದಿನ ಸತಾಯಿಸಿದ್ದರು ಎನ್ನಲಾಗ್ತಿದೆ.

ಅ.5 ರಂದು ಸಂಜೆ 3:30ಕ್ಕೆ ಕಚೇರಿಗೆ ಬಂದ ಚಾಲಕ, ಕ್ಲೀನರ್​ಗೆ ಬಾಕಿ ಹಣ ನೀಡುವಂತೆ ಸಂಸ್ಥೆಯ ಮಾಲೀಕರ ಪತ್ನಿ ಶಾಂತಲಾ ಪ್ರಭು ಅವರಲ್ಲಿ ಕೇಳಿದ್ದಾರೆ. ಈ ವೇಳೆ ಅವರು ಪತಿ ಹಾಗೂ ಪುತ್ರನನ್ನು ಕರೆಸಿಕೊಂಡಿದ್ದಾರೆ. ಆಗ ಅಶ್ರಫ್, ಚಂದ್ರಹಾಸ, ಆರೋಪಿ ರಾಜೇಶ್ ಪ್ರಭು, ಮೃತ ಬಾಲಕ ಸುಧೀಂದ್ರ ಪ್ರಭು ನಡುವೆ ಮಾತಿನ ಚಕಮಕಿ ನಡೆದು ವಾಗ್ವಾದಕ್ಕೆ ಕಾರಣವಾಗಿದೆ. ಈ ಸಂದರ್ಭ ಸುಧೀಂದ್ರನು ಚಂದ್ರಹಾಸ ಮೇಲೆ ಹಲ್ಲೆಗೈದಿದ್ದಾನೆ.

ಈ ಸಂದರ್ಭ ನಡೆದ ತಳ್ಳಾಟದಲ್ಲಿ ರಾಜೇಶ್ ಪ್ರಭು ತಮ್ಮ ಪಿಸ್ತೂಲ್ ತೆಗೆದು ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಆದರೆ ಅಶ್ರಫ್, ಚಂದ್ರಹಾಸರತ್ತ ಹಾರಿಸಿದ್ದ ಗುಂಡು ಅವರ ಮಗ ಸುಧೀಂದ್ರನ ತಲೆಗೆ ತಗುಲಿತ್ತು. ಗಂಭೀರ ಗಾಯಗೊಂಡ ಆತನನ್ನು ನಗರದ ಯುನಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಓದಿ:ಅರಣ್ಯ ಇಲಾಖೆ ಕಾರ್ಯಾಚರಣೆ: ಮಣ್ಣ ಮುಕ್ಕು ಹಾವುಗಳನ್ನು ಸಾಕಿ‌ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ

ABOUT THE AUTHOR

...view details