ಪುತ್ತೂರು :ರೈತರ ವಿರುದ್ಧ ದೌರ್ಜನ್ಯ, ರೈತ ವಿರೋಧಿ ಕಾನೂನು ಹಾಗೂ ಫಸಲ್ ಭೀಮಾ ಯೋಜನೆಯಲ್ಲಿ ರೈತರಿಗೆ ನಡೆಯುತ್ತಿರುವ ಅನ್ಯಾಯದ ವಿರುದ್ಧ ಪುತ್ತೂರು ಗಾಂಧಿಕಟ್ಟೆ ಬಳಿ ಪ್ರತಿಭಟನೆ ನಡೆಸಲಾಯ್ತು.
ರೈತರ ಮಾರಣ ಹೋಮಕ್ಕೆ ಸಿದ್ಧತೆ ನಡೆಸುತ್ತಿರುವ ಕೇಂದ್ರ ಸರ್ಕಾರ, ಫಸಲ್ ಭಿಮಾ ಯೋಜನೆಯಲ್ಲಿ ರೈತರಿಗೆ ಮೋಸದಾಟ ನಡೆಸುವ ಮೂಲಕ ವಂಚನೆ ನಡೆಸುತ್ತಿದೆ. ಕೊರೊನಾ ನೆಪದಲ್ಲಿ ನಡೆದ ಲಾಕ್‌ಡೌನ್, ರೈತ ವಿರೋಧಿಯಾಗಿರುವ ಮೂರು ಮಸೂದೆಗಳನ್ನು ಸುಗ್ರೀವಾಜ್ಞೆ ಮೂಲಕ ಪಾಸು ಮಾಡಲು ನಡೆಸಿದ ಹುನ್ನಾರವೇ ಹೊರತು ಜನರ ರಕ್ಷಣೆಗಾಗಿ ಮಾಡಿದ್ದಲ್ಲ ಎಂದು ಕರ್ನಾಟಕ ರಾಜ್ಯ ರೈತಸಂಘ ಹಸಿರುಸೇನೆಯ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ಆರೋಪಿಸಿದರು.
ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕ್‌ಗಳ ಮೂಲಕ ರೈತರಿಂದ ಒಟ್ಟು ₹1050 ಕೋಟಿ ಫಸಲ್ ಭೀಮಾ ಯೋಜನೆಯಲ್ಲಿ ಪಾವತಿ ಮಾಡಲಾಗಿದೆ. ಸರ್ಕಾರ ರೈತರ ಖಾತೆಗೆ ನೇರವಾಗಿ ₹25 ಸಾವಿರ ಪರಿಹಾರಧನ ನೀಡುತ್ತಿದ್ರೆ, ಕೇವಲ ₹250 ಕೋಟಿ ಮಾತ್ರ ಬಳಕೆಯಾಗುತ್ತಿತ್ತು. ಆದರೆ, ಇದೀಗ 950 ಕೋಟಿಗಿಂತಲೂ ಅಧಿಕ ಹಣವನ್ನು ಕೇಂದ್ರ ಸರ್ಕಾರ ಹಗಲು ದರೋಡೆ ಮಾಡಿದೆ.