ಕರ್ನಾಟಕ

karnataka

ಬಂಟ್ವಾಳ-ಹೆದ್ದಾರಿ ಭೂಸ್ವಾಧೀನ ಮಾಡಿದ್ರೂ ಬಾರದ ಪರಿಹಾರ: ಪ್ರತಿಭಟನೆಗೆ ಸಂತ್ರಸ್ತರ ನಿರ್ಧಾರ

By

Published : Jul 5, 2021, 8:30 PM IST

bantwal
ಬಂಟ್ವಾಳ ()

ಜು.20ರೊಳಗೆ ಯಾವುದೇ ಪರಿಹಾರ ಬರದಿದ್ದರೆ ನಮ್ಮ ಜಮೀನಿಗೆ ಬೇಲಿ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಸಂತ್ರಸ್ತರು ಎಚ್ಚರಿಕೆ ನೀಡಿದ್ದಾರೆ.

ಬಂಟ್ವಾಳ:ತಾಲೂಕಿನ ಪುಂಜಾಲಕಟ್ಟೆ ಹೆದ್ದಾರಿ ಅಗಲೀಕರಣ ಸಂದರ್ಭ ತಮ್ಮ ಜಮೀನು ಸ್ವಾಧೀನಪಡಿಸಿಕೊಂಡಿದ್ದರೂ ಇದುವರೆಗೂ ಪರಿಹಾರ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಜು.20ರೊಳಗೆ ಯಾವುದೇ ಪರಿಹಾರ ಬರದಿದ್ದರೆ ತಮ್ಮ ಜಮೀನಿಗೆ ಬೇಲಿ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಭೂಮಿ ಕಳೆದುಕೊಂಡವರು ಎಚ್ಚರಿಕೆ ನೀಡಿದ್ದಾರೆ.

ನಾವೂರಿನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಸಂತ್ರಸ್ತರ ಪರವಾಗಿ ಮಾತನಾಡಿದ ಸಿಪ್ರಿಯನ್ ಸಿಕ್ವೇರಾ ಮತ್ತು ಸದಾನಂದ ನಾವೂರು, ಬಂಟ್ವಾಳ ಪುರಸಭಾ ವ್ಯಾಪ್ತಿ ಸೇರಿದಂತೆ ನಾವೂರು, ಕಾವಳಪುಡೂರು, ಕಾವಳಪಡೂರು, ಪಿಲಾತಬೆಟ್ಟು ಗ್ರಾ.ಪಂ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ವಿಶೇಷ ಭೂಸ್ವಾಧೀನಾಧಿಕಾರಿ ಮೂಲಕ ಹಲವಾರು ಮಂದಿಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಭೂಮಿ ಕಳೆದುಕೊಂಡವರ ದಾಖಲೆ ಪಡೆದು, ಕಳೆದ ಡಿಸೆಂಬರ್​​ನಲ್ಲಿ ಪ್ರತಿ ಭೂ ಮಾಲೀಕರಿಗೂ ಅವರ ಭೂಮಿಗೆ ನಿಗದಿಪಡಿಸಿದ ಮೊತ್ತವನ್ನು ನಮೂದಿಸಿ ನೋಟಿಸ್ ನೀಡಲಾಗಿತ್ತು. ಆದರೆ ಈವರೆಗೆ ಪರಿಹಾರ ದೊರಕಿಲ್ಲ ಎಂದರು.

ಜಮೀನಿಗೆ ಬೇಲಿ ಹಾಕಿ ಪ್ರತಿಭಟನೆ ಮಾಡಲು ಸಂತ್ರಸ್ತರ ನಿರ್ಧಾರ..

ಅಭಿವೃದ್ಧಿಗೆ ಅಡ್ಡಿಯಾಗಬಾರದು ಎಂದು ಜಾಗ ಕೊಟ್ಟರೆ, ಪರಿಹಾರ ಮಾಡುವುದಕ್ಕೆ ವಿಳಂಬ ಧೋರಣೆ ಅನುಸರಿಸುವ ಹಿನ್ನೆಲೆಯಲ್ಲಿ ದಿಕ್ಕು ತೋಚದೆ ನಾವು ಸ್ವಾಧೀನಪಡಿಸಿಕೊಂಡಿರುವ ನಮ್ಮ ಜಮೀನಿಗೆ ಜುಲೈ 20ರಂದು ಬೇಲಿ ಹಾಕಿ ಪ್ರತಿಭಟನೆಯನ್ನು ಮಾಡುವುದಾಗಿ ಅವರು ತಿಳಿಸಿದರು.

ABOUT THE AUTHOR

...view details