ಕರ್ನಾಟಕ

karnataka

ಪೊಲೀಸ್ ಆಯುಕ್ತರಿಂದ ಗಾಂಜಾ ಸಾಗಾಟ ಆರೋಪಿಗಳ ಪರೇಡ್

By

Published : Sep 7, 2020, 3:20 PM IST

ಗೋವಾ, ಕಾಸರಗೋಡು, ಆಂಧ್ರ, ಒಡಿಶಾ ಮೂಲಗಳಿಂದಲೂ ಮಂಗಳೂರಿಗೆ ಗಾಂಜಾ ಸರಬರಾಜು ಆಗುತ್ತಿದೆ ಎಂಬ ಮಾಹಿತಿ ಇದೆ. ಯಾರು ನಿರಂತರ ಈ ಜಾಲದಲ್ಲಿ ಭಾಗವಹಿಸಿ ಗಾಂಜಾ ಸರಬರಾಜು ಮಾಡುತ್ತಿದ್ದಾರೆ ಎಂಬ ಮಾಹಿತಿ ಇದರಿಂದ ಲಭ್ಯವಾಗುತ್ತದೆ..

Parade of marijuana traffickers
ಮಂಗಳೂರು ಪೊಲೀಸ್ ಕವಾಯತು ಮೈದಾನದಲ್ಲಿ ಗಾಂಜಾ ಸಾಗಾಟ ಆರೋಪಿಗಳ ಪರೇಡ್

ಮಂಗಳೂರು :ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಗಾಂಜಾ ಸಾಗಾಟ ಪ್ರಕರಣಗಳಲ್ಲಿ ಸಿಲುಕಿರುವ ಆರೋಪಿಗಳ ಪರೇಡ್ ನಡೆಸಿದರು‌.

ಪೊಲೀಸ್ ಕವಾಯತು ಮೈದಾನದಲ್ಲಿ ಗಾಂಜಾ ಸಾಗಾಟ ಆರೋಪಿಗಳ ಪರೇಡ್..

ಈ ಪರೇಡ್​ನಲ್ಲಿ ಮಂಗಳೂರು ಹಾಗೂ ಕಾಸರಗೋಡು ಮೂಲದ ನೂರಕ್ಕೂ ಅಧಿಕ ಆರೋಪಿಗಳು ಭಾಗಿಯಾಗಿದ್ದರು. ಪೊಲೀಸ್ ಆಯುಕ್ತರು ಎಲ್ಲರನ್ನೂ ಪ್ರತ್ಯೇಕ ವಿಚಾರಣೆ ನಡೆಸಿದರು. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಅವರು ಮಾತನಾಡಿ, ಇಂದು ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸಾಗಾಟದಲ್ಲಿ ಭಾಗಿಯಾಗಿದ್ದವರ ಪರೇಡ್ ನಡೆಸಲಾಗಿದೆ. ಇವರು ಯಾವುದಾದರೂ ಡ್ರಗ್ಸ್ ಸಾಗಾಟ ಹಾಗೂ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದಾರೆಯೇ ಎಂದು ತನಿಖೆ ನಡೆಸಲಾಯಿತು ಎಂದರು.

ಈಗಾಗಲೇ ನಮಗೆ ಗೋವಾ, ಕಾಸರಗೋಡು, ಆಂಧ್ರ, ಒಡಿಶಾ ಮೂಲಗಳಿಂದಲೂ ಮಂಗಳೂರಿಗೆ ಗಾಂಜಾ ಸರಬರಾಜು ಆಗುತ್ತಿದೆ ಎಂಬ ಮಾಹಿತಿ ಇದೆ. ಯಾವ ಕಡೆಗಳಿಂದ ಮಂಗಳೂರಿಗೆ ಗಾಂಜಾ ಸರಬರಾಜು ಆಗುತ್ತಿದೆ, ಯಾರು ನಿರಂತರ ಈ ಜಾಲದಲ್ಲಿ ಭಾಗವಹಿಸಿ ಮಂಗಳೂರಿಗೆ ಗಾಂಜಾ ಸರಬರಾಜು ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತದೆ ಎಂಬ ಉದ್ದೇಶದಿಂದ ಈ ಪೆರೇಡ್ ನಡೆಸಲಾಗಿದೆ ಎಂದರು.

ವಿದೇಶಗಳಿಂದಲೂ ಗಾಂಜಾ ಸರಬರಾಜು ಆಗುತ್ತಿದ್ರೆ, ಆಯಾ ದೇಶಗಳ ಕೇಂದ್ರ ಸಂಘಟಕರೊಂದಿಗೆ ಸಂಪರ್ಕದಲ್ಲಿರುತ್ತೇವೆ. ಕಳೆದ ವರ್ಷ ನಾಲ್ವರ ಮೇಲಿನ ಗುಮಾನಿಯಿಂದ ಪ್ರಸ್ತಾಪ ಕಳಿಸಲಾಗಿದೆ. ಓರ್ವನ ಮೇಲಿನ ಆರೋಪ ಸಾಬೀತು ಆಗಿರುವ ಹಿನ್ನೆಲೆ ಆತನ ಮೇಲೆ ಗೂಂಡಾ ಕಾಯ್ದೆ ಜರುಗಿಸಲಾಗಿದೆ. ಮುಂದಿನ ಒಂದು ತಿಂಗಳ ಅವಧಿಯಲ್ಲಿ ಎಲ್ಲಾ ಆರೋಪಿಗಳ ಮೇಲೆ ಒಂದು ಕಣ್ಣಿಟ್ಟಿರುತ್ತೇವೆ. ಯಾರಾದರೂ ಇಂತಹ ಕೃತ್ಯಗಳಲ್ಲಿ ತೊಡಗಿದ್ದಲ್ಲಿ ತಕ್ಷಣ ಅವರನ್ನು ಜೈಲಿಗಟ್ಟಲಾಗುತ್ತದೆ. ಅಲ್ಲದೇ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

ABOUT THE AUTHOR

...view details