ಕರ್ನಾಟಕ

karnataka

ಅಕ್ರಮ ಚಿನ್ನ ಸಾಗಣೆಯ ಪ್ರತ್ಯೇಕ ಪ್ರಕರಣ: 1.59 ಕೋಟಿ ಮೌಲ್ಯದ ಚಿನ್ನ ವಶ

By

Published : Oct 22, 2022, 1:02 PM IST

ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿದ್ದ ಪ್ರತ್ಯೇಕ ಪ್ರಕರಣಗಳಲ್ಲಿ ಅ.10 ರಿಂದ ಅ.21ರವರೆಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಒಟ್ಟು 3124.540 ಗ್ರಾಂ ಚಿನ್ನವನ್ನು ಕಸ್ಟಮ್ಸ್​ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ.

Kn_Mng_0
ಅಕ್ರಮ ಚಿನ್ನ ಸಾಗಾಟ ಪ್ರತ್ಯೇಕ ಪ್ರಕರಣ

ಮಂಗಳೂರು: ಜೀನ್ಸ್ ಪ್ಯಾಂಟ್, ಒಳ ಉಡುಪು ಮತ್ತು ಗುದನಾಳದಲ್ಲಿ ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿರುವ ಪ್ರತ್ಯೆಕ ಪ್ರಕರಣಗಳನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಅಕ್ಟೋಬರ್ 10 ರಿಂದ 21 ವರೆಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ 24 ಕ್ಯಾರೆಟ್ ಶುದ್ದತೆಯ 3124.540 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 1,59,66,883 ರೂ. ಎಂದು ಅಂದಾಜಿಸಲಾಗಿದೆ. ದುಬೈ ನಿಂದ ಮಂಗಳೂರಿಗೆ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕರನ್ನು ತಪಾಸಣೆ ನಡೆಸಿದಾಗ ಅಕ್ರಮ ಚಿನ್ನ ಸಾಗಾಟ ಪತ್ತೆಯಾಗಿದೆ.

ದುಬೈ ನಿಂದ ಆಗಮಿಸಿದ ಐವರು ಪುರುಷ ಪ್ರಯಾಣಿಕರು ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿದ್ದು, ಜೀನ್ಸ್ ಪ್ಯಾಂಟ್, ಒಳ ಉಡುಪು ಸೇರಿದಂತೆ ಗುದನಾಳದಲ್ಲಿ ಚಿನ್ನ ಇಟ್ಟು ಸಾಗಣೆ ಮಾಡುವುದನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿ ಆರೋಪಿಗಳ ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ:ಅಕ್ರಮ ಚಿನ್ನ ಸಾಗಾಣಿಕೆ : ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ನಾಲ್ವರ ಬಂಧನ

ABOUT THE AUTHOR

...view details