ಕರ್ನಾಟಕ

karnataka

ದಕ್ಷಿಣಕನ್ನಡದಲ್ಲಿ ಮಳೆ ಅಬ್ಬರ: ದುಬೈನಿಂದ ಮಂಗಳೂರಿಗೆ ಬಂದ ವಿಮಾನ ಕೊಚ್ಚಿನ್​ಗೆ ಡೈವರ್ಟ್

By

Published : Jul 9, 2022, 10:38 AM IST

Updated : Jul 9, 2022, 2:35 PM IST

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ, ಹವಾಮಾನ ವೈಪರೀತ್ಯ- ದುಬೈನಿಂದ ಮಂಗಳೂರಿಗೆ ಬಂದ ವಿಮಾನ ಕೊಚ್ಚಿನ್​ಗೆ ಡೈವರ್ಟ್​

heavy-rain-in-dakshina-kannada-district
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ: ದುಬೈನಿಂದ ಬಂದ ವಿಮಾನ ಕೊಚ್ಚಿನ್​ಗೆ ಡೈವರ್ಟ್

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಆರು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಇಂದು ಕೂಡ ಮುಂದುವರೆದಿದೆ. ಸತತ ನಾಲ್ಕು ದಿನಗಳಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡಿದೆ. ಈ ಎಚ್ಚರಿಕೆಯು ಭಾನುವಾರ ಬೆಳಗ್ಗೆವರೆಗೆ ಇರಲಿದೆ.

ಮಳೆಯ ಅಬ್ಬರಕ್ಕೆ ಕೆಲವೆಡೆ ಕಡಲ್ಕೊರೆತ ಹೆಚ್ಚಾಗಿದ್ದು, ನದಿಗಳು ತುಂಬಿ ಅಲ್ಲಲ್ಲಿ ನೆರೆ ಆವರಿಸಿದೆ. ಕಳೆದ ಆರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಮಂಗಳವಾರದಿಂದ ಇಂದಿನವರೆಗೆ ಶಾಲಾ ಕಾಲೇಜುಗೆ ರಜೆ ನೀಡಲಾಗಿದೆ.

ದಕ್ಷಿಣಕನ್ನಡದಲ್ಲಿ ಮಳೆ ಅಬ್ಬರ

ವಿಮಾನ ಡೈವರ್ಟ್: ಭಾರಿ ಮಳೆ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಮಂಗಳೂರಿನಲ್ಲಿ ಇಳಿಯಬೇಕಿದ್ದ ದುಬೈ ವಿಮಾನವನ್ನು ಕೊಚ್ಚಿನ್​ಗೆ ಡೈವರ್ಟ್ ಮಾಡಲಾಗಿದೆ. ದುಬೈನಿಂದ ಮಂಗಳೂರಿಗೆ ಬಂದಿದ್ದ ಸ್ಪೈಸ್ ಜೆಟ್ ವಿಮಾನ ರಾತ್ರಿ 9.30ಕ್ಕೆ ಮಂಗಳೂರು ತಲುಪಿದ್ದು, ಹವಾಮಾನ ವೈಪರೀತ್ಯದಿಂದ ಲ್ಯಾಂಡಿಂಗ್ ಮಾಡಲು ಸಾಧ್ಯವಾಗಿಲ್ಲ.

ಇದನ್ನೂ ಓದಿ:ರಾಜ್ಯಾದ್ಯಂತ ವರುಣಾರ್ಭಟಕ್ಕೆ ತತ್ತರಿಸಿದ ಜನ.. ಕರಾವಳಿ, ಕಲಬುರಗಿಯಲ್ಲಿ ರೆಡ್​ ಅಲರ್ಟ್​

Last Updated : Jul 9, 2022, 2:35 PM IST

ABOUT THE AUTHOR

...view details