ಕರ್ನಾಟಕ

karnataka

ನವರಾತ್ರಿ ಬಂತೆಂದರೆ ಇವರು ಪ್ರೇತ.. ಹರಕೆ ತೀರಿಸಲು ಪುತ್ತೂರು ಆಟೋ ಚಾಲಕನ ವಿಚಿತ್ರ ವೇಷ

By

Published : Oct 14, 2021, 5:02 PM IST

Updated : Oct 14, 2021, 5:25 PM IST

ghost-impersonator

ಆಟೋ ಚಾಲಕನಾಗಿ ದುಡಿಯುತ್ತಿರುವ ದಿವಾಕರ್, ನವರಾತ್ರಿ ಬಂತೆಂದರೆ ಪ್ರೇತವಾಗಿ ಬಿಡುತ್ತಾರೆ. ಹೌದು, ನವರಾತ್ರಿಯ ಒಂಬತ್ತು ದಿನಗಳಲ್ಲಿ ಪ್ರೇತದ ವೇಷಧಾರಿಯಾಗುವ ಇವರು ವಿಚಿತ್ರವಾಗಿ ಅರಚಾಡುತ್ತಾ ಮನೆ ಮನೆಗೆ, ಅಂಗಡಿಗಳಿಗೆ ಅಲೆಯುತ್ತಾರೆ.

ಪುತ್ತೂರು(ದಕ್ಷಿಣ ಕನ್ನಡ):ನವರಾತ್ರಿ ಬಂತೆಂದರೆ ಸಾಕು ಎಲ್ಲಾ ದೇವಿ ದೇವಸ್ಥಾನಗಳಲ್ಲಿ ವಿಶೇಷ ಆರಾಧನೆಗಳು ಜರುಗುತ್ತವೆ. ಇನ್ನೊಂದೆಡೆ ವಿವಿಧ ವೇಷಧಾರಿಗಳು ಮನೆ ಮನೆಗೆ ಆಗಮಿಸಿ ಜನರ ಮನತಣಿಸುತ್ತಾರೆ. ಹುಲಿವೇಷ, ಪುರುಷವೇಷ, ಸ್ತ್ರೀವೇಷ ಹೀಗೆ ಹಲವು ತರಹದ ವೇಷಗಳನ್ನು ನವರಾತ್ರಿಯ ಒಂಬತ್ತು ದಿನಗಳಲ್ಲಿ ನೋಡಬಹುದು. ಆದ್ರೆ ಪ್ರೇತದ ವೇಷದ ಮೂಲಕ ಪುತ್ತೂರಿನ ವ್ಯಕ್ತಿಯೊಬ್ಬರು ಕಳೆದ 13 ವರ್ಷಗಳಿಂದ ಗಮನ ಸೆಳೆಯುತ್ತಿದ್ದಾರೆ.

ಹರಕೆ ತೀರಿಸಲು ಪುತ್ತೂರು ಆಟೋ ಚಾಲಕ ವಿಚಿತ್ರ ವೇಷ ಅವಲಂಬಿಸಿದ್ದಾರೆ

ಹೌದು, ಈ ರೀತಿ ಪ್ರೇತ ವೇಷದ ಮೂಲಕ ತನ್ನ ಹರಕೆಯನ್ನು ತೀರಿಸುತ್ತಾ ಬರುತ್ತಿರುವವರು ತಾಲೂಕಿನ ಕೆಮ್ಮಾಯಿ ನಿವಾಸಿ ದಿವಾಕರ್ ದೇವಾಡಿಗ. ಆಟೋ ಚಾಲಕನಾಗಿ ದುಡಿಯುತ್ತಿರುವ ದಿವಾಕರ್, ನವರಾತ್ರಿ ಬಂತೆಂದರೆ ಪ್ರೇತವಾಗಿ ಬಿಡುತ್ತಾರೆ. ನವರಾತ್ರಿಯ 9 ದಿನಗಳಲ್ಲಿ ಪ್ರೇತದ ವೇಷಧಾರಿಯಾಗುವ ಇವರು ವಿಚಿತ್ರವಾಗಿ ಅರಚಾಡುತ್ತಾ ಮನೆ ಮನೆಗೆ, ಅಂಗಡಿಗಳಿಗೆ ಅಲೆಯುತ್ತಾರೆ.

ದಿವಾಕರ್ ಹಾಕುವ ಪ್ರೇತದ ವೇಷ ತುಂಬಾನೆ ವಿಶೇಷ

ನವರಾತ್ರಿಯಲ್ಲಿ ಹುಲಿವೇಷ, ಪುರುಷವೇಷ, ಸ್ತ್ರೀವೇಷ ಹೀಗೆ ಹಲವು ವೇಷಗಳು ಸಾಮಾನ್ಯವಾಗಿದ್ದರೆ, ಪುತ್ತೂರಿನಲ್ಲಿ ದಿವಾಕರ್ ಹಾಕುವ ಪ್ರೇತದ ವೇಷ ತುಂಬಾನೆ ವಿಶೇಷವಾದುದು. ಹಲವು ವರ್ಷಗಳಿಂದ ನವರಾತ್ರಿಯಲ್ಲಿ ವೇಷ ಹಾಕುವುದನ್ನು ಕರಗತ ಮಾಡಿಕೊಂಡಿರುವ ಇವರು, ಈ ಹಿಂದೆ ರಾಘವೇಂದ್ರ ಸ್ವಾಮಿ ವೇಷ, ಈಶ್ವರನ ವೇಷ, ಕೃಷ್ಣನ ವೇಷ ಹೀಗೆ ದೇವರ ವೇಷಗಳನ್ನು ಹಾಕುತ್ತಿದ್ದರು.

ಆದರೆ, ಧಾರ್ಮಿಕ ವೇಷಗಳನ್ನು ಹಾಕಲು ನಿಷೇಧ ಹೇರಿದ ಹಿನ್ನೆಲೆ ವೇಷ ಹಾಕುವುದನ್ನೇ ಬಿಟ್ಟಿದ್ದ ದಿವಾಕರ್​ಗೆ ಕೈಕಾಲುಗಳು ಅಲುಗಾಡದಂತಹ ಸ್ಥಿತಿ ನಿರ್ಮಾಣವಾಗಿತ್ತು. ಆ ಬಳಿಕ ನವರಾತ್ರಿಗೆ ಯಾವುದಾದರೂ ವೇಷ ಹಾಕಬೇಕೆಂದು ತೀರ್ಮಾನಿಸಿದ ಅವರು ಪ್ರೇತದ ವೇಷವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಜೀವನಕ್ಕಾಗಿ ಸ್ವಂತ ಆಟೋ ಅವಲಂಬನೆ

ಕಳೆದ 13 ವರ್ಷಗಳಿಂದ ಪ್ರೇತದ ವೇಷವನ್ನು ಹಾಕಿಕೊಂಡು ಜನರನ್ನು ಮನರಂಜಿಸುತ್ತಿರುವ ದಿವಾಕರ್​ಗೆ ಹಣ ಮಾಡುವ ಉದ್ದೇಶವಿಲ್ಲ. ಹರಕೆಗಾಗಿ ಈ ವೇಷವನ್ನು ಹಾಕುತ್ತಿದ್ದು, ಜೀವನಕ್ಕಾಗಿ ಸ್ವಂತ ಆಟೋವನ್ನು ಅವಲಂಬಿಸಿದ್ದಾರೆ. ಪ್ರೇತದ ವೇಷಕ್ಕಾಗಿ ಪೊಲೀಸರ ಅನುಮತಿಯನ್ನೂ ಪಡೆದಿರುವ ಇವರು ಸಂಜೆ 6 ರ ಬಳಿಕ ತನ್ನ ವೇಷವನ್ನು ಕಳಚುತ್ತಾರೆ. ರಾತ್ರಿಯ ಸಮಯದಲ್ಲಿ ಈ ವೇಷವನ್ನು ಹಾಕಿಕೊಂಡು ತಿರುಗಿದಲ್ಲಿ ಜನ ಬೆಚ್ಚಿಬೀಳುವ ಸಾಧ್ಯತೆ ಇರುವುದರಿಂದ ಈ ರೀತಿಯ ವೇಳಾಪಟ್ಟಿಯನ್ನೂ ಅವರು ತಮ್ಮ ವೇಷದಲ್ಲಿ ಸೇರಿಸಿಕೊಂಡಿದ್ದಾರೆ.

ಓದಿ:ಅರಮನೆ ಆವರಣದಲ್ಲಿ ಆಯುಧ ಪೂಜೆ ನೆರವೇರಿಸಿದ ಯದುವೀರ್​​.. ಗ್ರೌಂಡ್​ ರಿಪೋರ್ಟ್​

Last Updated :Oct 14, 2021, 5:25 PM IST

ABOUT THE AUTHOR

...view details