ಕರ್ನಾಟಕ

karnataka

ಪಿಎಫ್ಐನಿಂದ ಮೂವರು ಸೋಂಕಿತರ ಮೃತದೇಹದ ಅಂತ್ಯಸಂಸ್ಕಾರ

By

Published : Jul 9, 2020, 1:08 PM IST

ಕೊರೊನಾ ಸೋಂಕಿನಿಂದ ಮೃತರಾದವರ ಮೃತದೇಹವನ್ನು ಗೌರವಪೂರ್ವಕವಾಗಿ ಅಂತ್ಯಸಂಸ್ಕಾರ ನಡೆಸುತ್ತೇವೆ ಎಂದು ಪಿಎಫ್ಐ ಕಾರ್ಯಕರ್ತರು ಸ್ವಯಂ ಆಗಿ ಮುಂದೆ ಬಂದಿದ್ದಾರೆ.

ಪಿಎಫ್ಐನಿಂದ ಮೂವರು ಕೊರೊನಾ ಸೋಂಕಿತರ ಮೃತ ದೇಹಕ್ಕೆ ಗೌರವಪೂರ್ವಕ ಅಂತ್ಯಸಂಸ್ಕಾರ

ಮಂಗಳೂರು: ಪಿಎಫ್ಐ ಕಾರ್ಯಕರ್ತರ ತಂಡದಿಂದ ದ.ಕ.ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ಮೂರು ಮೃತದೇಹಗಳಿಗೆ ಗೌರವಪೂರ್ವಕ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಪಿಎಫ್ಐನಿಂದ ಮೂವರು ಕೊರೊನಾ ಸೋಂಕಿತರ ಮೃತ ದೇಹಕ್ಕೆ ಅಂತ್ಯಸಂಸ್ಕಾರ
ಸೋಂಕಿನಿಂದ ನಿನ್ನೆ ಮೃತಪಟ್ಟ ಪುತ್ತೂರಿನ 32 ವರ್ಷದ ಮಹಿಳೆಯ ಮೃತದೇಹದ ಅಂತ್ಯಸಂಸ್ಕಾರವನ್ನು ಪುತ್ತೂರು ಕೂರ್ನಡ್ಕ ಮಸೀದಿ ದಫನ ಭೂಮಿಯಲ್ಲಿ ಮಸೀದಿ ಆಡಳಿತ ಸಮಿತಿ ಸಹಕಾರದೊಂದಿಗೆ ನೆರವೇರಿಸಲಾಗಿದೆ. ಭಟ್ಕಳ ಮೂಲದ 58 ವರ್ಷದ ಸೋಂಕಿತ ವ್ಯಕ್ತಿಯ ಮೃತ ದೇಹದ ಅಂತ್ಯಸಂಸ್ಕಾರವನ್ನು ಬಜ್ಪೆ ಈದ್ಗಾ ಮಸೀದಿ ದಫನ ಭೂಮಿಯಲ್ಲಿ ಮಸೀದಿ ಆಡಳಿತ ಸಮಿತಿ ಸಹಕಾರದೊಂದಿಗೆ ಇಲ್ಯಾಸ್ ಬಜ್ಪೆ ನೇತೃತ್ವದ ತಂಡ ನೆರವೇರಿಸಿತು. ಅದೇ ರೀತಿ ಮೂಡಬಿದಿರೆಯ 63 ವರ್ಷದ ಕೊರೊನಾ ಪೀಡಿತ ವ್ಯಕ್ತಿಯ ಮೃತದೇಹದ ಅಂತ್ಯ ಸಂಸ್ಕಾರವನ್ನು ಮೂಡಬಿದಿರೆಯ ಕೋಟೆಬಾಗಿಲು ಬದ್ರಿಯಾ ಮಸೀದಿಯ ದಫನ ಭೂಮಿಯಲ್ಲಿ ಮಸೀದಿ ಆಡಳಿತ ಸಮಿತಿ ಸಹಕಾರದೊಂದಿಗೆ ಪಿಎಫ್ಐನ ಯಹ್ಯಾ ಅಂಗರಗುಂಡಿ ನೇತೃತ್ವದ ತಂಡ ನೆರವೇರಿಸಿದೆ.
ಕೊರೊನಾ ಸೋಂಕಿತರ ಮೃತದೇಹವನ್ನು ಆರೋಗ್ಯ ಕಾರ್ಯಕರ್ತರು ಅಮಾನವೀಯ ರೀತಿಯಲ್ಲಿ ಅಂತ್ಯಸಂಸ್ಕಾರ ನಡೆಸುತ್ತಿರುವುದನ್ನು ಮನಗಂಡು ಪಿಎಫ್ಐ ಕಾರ್ಯಕರ್ತರು ಸೋಂಕಿನಿಂದ ಮೃತರಾದವರ ಮೃತದೇಹವನ್ನು ಗೌರವಪೂರ್ವಕವಾಗಿ ಅಂತ್ಯಸಂಸ್ಕಾರ ನಡೆಸುತ್ತೇವೆ ಎಂದು ಸ್ವಯಂ ಆಗಿ ಮುಂದೆ ಬಂದಿದ್ದಾರೆ.
ಈಗಾಗಲೇ ದಕ. ಹಾಗೂ ಉಡುಪಿ ಜಿಲ್ಲೆಯಾದ್ಯಂತ 25 ತಂಡಗಳನ್ನು ರಚಿಸಲಾಗಿದ್ದು, ಒಂದು ತಂಡದಲ್ಲಿ 8 ಮಂದಿ ಇದ್ದು, ಇವರೆಲ್ಲರಿಗೂ ಕೋವಿಡ್ ಸೋಂಕಿತರ ಅಂತ್ಯಸಂಸ್ಕಾರ ನಡೆಸುವ ಬಗ್ಗೆ ತರಬೇತಿ ನೀಡಲಾಗಿದೆ. ಧಾರ್ಮಿಕ ವಿಧಿ-ವಿಧಾನಗಳಿಗೆ ಪೂರಕವಾಗಿ ಅಂತ್ಯಸಂಸ್ಕಾರ ನಡೆಸುವ ಫಿಎಫ್ಐ ಕಾರ್ಯಕರ್ತರು, ದ.ಕ.ಜಿಲ್ಲೆಯಲ್ಲಿ ಈಗಾಗಲೇ 10 ಸೋಂಕಿತರ ಮೃತದೇಹಗಳ ಅಂತ್ಯಸಂಸ್ಕಾರ ನೆರವೇರಿಸಿದ್ದು, ಇದೀಗ ಮತ್ತೆ ಮೂರು ಮೃತದೇಹಗಳನ್ನು ಗೌರವಪೂರ್ವಕವಾಗಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ABOUT THE AUTHOR

...view details