ಕರ್ನಾಟಕ

karnataka

ಕಡಬ ಸಮುದಾಯ ಆಸ್ಪತ್ರೆಯಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ

By

Published : Dec 17, 2019, 11:17 PM IST

ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರ ನಡೆಯಿತು.

Free Eye therapy  Service Camp at Kadaba
ಕಡಬ ಸಮುದಾಯ ಆಸ್ಪತ್ರೆಯಲ್ಲಿ ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರ

ದಕ್ಷಿಣ ಕನ್ನಡ:ಜೆಸಿಐ ಕಡಬ ಕದಂಬ, ಅನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು ಹಾಗೂ ಸಮುದಾಯ ಆರೋಗ್ಯ ಕೇಂದ್ರ ಕಡಬದ ಸಹಭಾಗಿತ್ವದಲ್ಲಿಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರ ನಡೆಯಿತು.

ಕಡಬ ಸಮುದಾಯ ಆಸ್ಪತ್ರೆಯಲ್ಲಿ ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರ

ಆನಂದಾಶ್ರಮ ಸೇವಾ ಟ್ರಸ್ಟ್​ನ ಡಾ.ಗೌರಿ ಪೈ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಜೆಸಿಐ ಕಡಬ ಕದಂಬದ ಅಧ್ಯಕ್ಷ ಮೋಹನ್ ಕೋಡಿಂಬಾಳ ಅಧ್ಯಕ್ಷತೆ ವಹಿಸಿದರು. ಈ ವೇಳೆ ವೈದ್ಯಕೀಯ ವೃತ್ತಿ ಜೀವನದಲ್ಲಿ 49 ವರ್ಷ ಪೂರೈಸಿ 50ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಕಡಬದ ಹಿರಿಯ ವೈದ್ಯ ಡಾ.ಸಿ.ಕೆ.ಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು. ಅರ್ಹರಿಗೆ ಸ್ಥಳದಲ್ಲೇ ಕನ್ನಡಕ ವಿತರಿಸಲಾಯಿತು. ಇನ್ನು ನೇತ್ರ ಶಸ್ತ್ರಚಿಕಿತ್ಸೆ ಅಗತ್ಯ ಇರುವವರಿಗೆ ಉಚಿತ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು 200ಕ್ಕೂ ಹೆಚ್ಚಿನ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.

ಕಾಯ್ಯಕ್ರಮದಲ್ಲಿ ವಿಹಿಂಪ ಕಡಬ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಕಡಬ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುಚಿತ್ರಾ ರಾವ್, ಜೆಸಿಐ ಭಾರತ ವಲಯ 15ರ ರಕ್ತದಾನ ವಿಭಾಗದ ಸಂಯೋಜಕ ಅಶೋಕ್ ಕುಮಾರ್, ಮುಖ್ಯ ನೇತ್ರ ತಜ್ಞೆ ಡಾ.ರೀಜಾ, ಜಿಲ್ಲಾ ಅಂಧತ್ವ ನಿವಾರಣಾ ಘಟಕದ ಹಿರಿಯ ನೇತ್ರಾಧಿಕಾರಿ ಅನಿಲ್ ರಾಮಾನುಜನ್, ನೇತ್ರಾಧಿಕಾರಿಗಳಾದ ಶಾಂತರಾಜು, ಆದರ್ಶ್ ನೇತ್ರ ಪರಿಶೀಲನಾ ಸಿಬ್ಬಂದಿ, ಜೆಸಿಐ ಚಾರಿಟೇಬಲ್ ಟ್ರಸ್ಟ್ ಕಡಬ ಕದಂಬದ ಅಧ್ಯಕ್ಷರಾದ ನಾಗರಾಜ್ ಎನ್.ಕೆ ಸೇರಿದಂತೆ ಜೆಸಿಐ ಆನಂದಾಶ್ರಮ ಪದಾಧಿಕಾರಿಗಳು, ಸಮುದಾಯ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.

Intro:ಕಡಬ

ಜೇಸಿಐ ಕಡಬ ಕದಂಬ, ಅನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು, ಹಾಗೂ ಸಮುದಾಯ ಆರೋಗ್ಯ ಕೇಂದ್ರ ಕಡಬ ಇದರ ಸಹಭಾಗಿತ್ವದಲ್ಲಿ ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರ ಇಂದು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯಿತು.Body:ಆನಂದಾಶ್ರಮ ಸೇವಾ ಟ್ರಸ್ಟ್ ನ ಡಾ|ಗೌರಿ ಪೈ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಜೆಸಿಐ ಕಡಬ ಕದಂಬದ ಅಧ್ಯಕ್ಷ ಮೋಹನ್ ಕೋಡಿಂಬಾಳ ಅಧ್ಯಕ್ಷತೆ ವಹಿಸಿದರು. ಈ ವೇಳೆ ವೈದ್ಯಕೀಯ ವೃತ್ತಿ ಜೀವನದಲ್ಲಿ 49 ವರ್ಷ ಪೂರೈಸಿ 50ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಕಡಬದ ಹಿರಿಯ ವೈದ್ಯ ಡಾ|ಸಿ.ಕೆ ಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು.
ಕಾಯ್ಯಕ್ರಮದಲ್ಲಿ ವಿಹಿಂಪ ಕಡಬ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಕಡಬ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸುಚಿತ್ರಾ ರಾವ್, ಜೆಸಿಐ ಭಾರತ ವಲಯ 15ರ ರಕ್ತದಾನ ವಿಭಾಗದ ಸಂಯೋಜಕ ಅಶೋಕ್ ಕುಮಾರ್, ಮುಖ್ಯ ಅಥಿತಿಗಳಾಗಿದ್ದರು. ಪ್ರಮುಖ ನೇತ್ರ ತಜ್ಞೆ ಡಾ| ರೀಜಾ, ಜಿಲ್ಲಾ ಅಂಧತ್ವ ನಿವಾರಣಾ ಘಟಕದ ಹಿರಿಯ ನೇತ್ರಾಧಿಕಾರಿ ಅನಿಲ್ ರಾಮಾನುಜನ್,ನೇತ್ರಾಧಿಕಾರಿಗಳಾದ ಶಾಂತರಾಜು,ಆದರ್ಶ್ ನೇತ್ರ ಪರಿಶೀಲನಾ ಸಿಬ್ಬಂದಿಗಳು ಕಾರ್ಯಕ್ರಮ ನಡೆಸಿಕೊಟ್ಟರು. ಅರ್ಹರಿಗೆ ಸ್ಥಳದಲ್ಲೇ ಕನ್ನಡಕ ವಿತರಣೆ ನಡೆಯಿತು. ಇನ್ನು ನೇತ್ರ ಶಸ್ತ್ರಚಿಕಿತ್ಸೆ ಅಗತ್ಯ ಇರುವವರಿಗೆ ಅದಕ್ಕೆ ಉಚಿತ ವ್ಯವಸ್ಥೆ ಕಲ್ಪಿಸಲಾಗಿದೆ. ಜೆಸಿಐ ಚಾರಿಟೇಬಲ್ ಟ್ರಸ್ಟ್ ಕಡಬ ಕದಂಬದ ಅಧ್ಯಕ್ಷರಾದ ನಾಗರಾಜ್ ಎನ್.ಕೆ ಸೇರಿದಂತೆ ಜೆಸಿಐ, ಆನಂದಾಶ್ರಮ ಪದಾಧಿಕಾರಿಗಳು, ಸಮುದಾಯ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸುಮಾರು ಇನ್ನೂರಕ್ಕೂ ಹೆಚ್ಚಿನ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.Conclusion:ಕಾರ್ಯಕ್ರಮದ ವೀಡಿಯೋ ಹಾಕಲಾಗಿದೆ.

ABOUT THE AUTHOR

...view details