ಕರ್ನಾಟಕ

karnataka

ಹೆಸರು ಬೇಳೆ, ಐಸ್ ಕ್ರೀಂ ತಿಂದು ಫುಡ್​ ಪಾಯ್ಸನ್​: ಮಂಗಳೂರಿನಲ್ಲಿ ನಾಲ್ವರು ಆಸ್ಪತ್ರೆಗೆ ದಾಖಲು

By

Published : Oct 26, 2022, 6:19 PM IST

Updated : Oct 26, 2022, 6:28 PM IST

ಹೆಸರು ಬೇಳೆ ಮತ್ತು ಐಸ್​ಕ್ರೀಂ ಸೇವನೆಯಿಂದ ಫುಡ್​ ಪಾಯಿಸನ್​ಗೆ ಒಳಗಾದ ನಾಲ್ವರನ್ನು ಮಂಗಳೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

food-poison-4-people-admitted-to-hospital-in-manglore
ಹೆಸರು ಬೇಳೆ, ಐಸ್ ಕ್ರೀಂ ತಿಂದು ಫುಡ್​ ಪಾಯ್ಸನ್​: ನಾಲ್ವರು ಆಸ್ಪತ್ರೆಗೆ ದಾಖಲು

ಮಂಗಳೂರು:ಹೆಸರುಬೇಳೆ ಮತ್ತು ಐಸ್ ಕ್ರೀಂ ಸೇವಿಸಿ ಫುಡ್​ ಪಾಯಿಸನ್‌ಗೊಳಗಾದ ನಾಲ್ವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೆಪ್ಪು ಬಪ್ಪಾಲ್‌ನ ನಿವಾಸಿಗಳಾದ ಅರವಿಂದ ರಾವ್ (52), ಪತ್ನಿ ಪ್ರಭಾವತಿ (45) ಮತ್ತು ಮಕ್ಕಳಾದ ಸೌರಭ್ (20) ಪ್ರತೀಕ್ (18) ಅನಾರೋಗ್ಯ ಹೊಂದಿದ್ದಾರೆ.

ಫುಡ್​ ಪಾಯಿಸನ್​ ಆಗಿ ಅಸ್ವಸ್ಥಗೊಂಡವರು

ಇವರು ನಿನ್ನೆ ರಾತ್ರಿ ಮಲಗುವ ಮೊದಲು ಹೆಸರುಬೇಳೆ ಮತ್ತು ಐಸ್ ಕ್ರೀಂ ತಿಂದಿದ್ದರು. ಆ ಬಳಿಕ ವಾಂತಿ ಶುರುವಾಗಿದೆ. ಇಂದು ಬೆಳಿಗ್ಗೆ ಮನೆ ಬಾಗಿಲನ್ನು ತೆರೆಯದಿರುವುದನ್ನು ಗಮನಿಸಿದ ಸಂಬಂಧಿಕರು ಬಾಗಿಲು ತೆರೆದು ನೋಡಿದಾಗ ಅಸ್ವಸ್ಥಗೊಂಡಿರುವುದು ಗೊತ್ತಾಗಿದೆ. ತಕ್ಷಣ ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ:ಪಾದಚಾರಿ ಮೇಲೆ ಹರಿದ ಲಾರಿ: ಸ್ಥಳದಲ್ಲಿಯೇ ವ್ಯಕ್ತಿ ಸಾವು

Last Updated :Oct 26, 2022, 6:28 PM IST

ABOUT THE AUTHOR

...view details