ಕರ್ನಾಟಕ

karnataka

ಉಜಿರೆ: ಮಗನಿಗೆ ಚೂರಿ ಇರಿದು ಕೊಂದ ತಂದೆ

By ETV Bharat Karnataka Team

Published : Oct 30, 2023, 5:46 PM IST

ತಂದೆ ಮತ್ತು ಮಗನ ನಡುವೆ ನಡೆದ ಜಗಳ ಮಗನ ಕೊಲೆಯಲ್ಲಿ ಅಂತ್ಯವಾಗಿದೆ. ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಘಟನೆ ನಡೆದಿದೆ.

ಜಗದೀಶ್ ಆಚಾರಿ
ಜಗದೀಶ್ ಆಚಾರಿ

ಬೆಳ್ತಂಗಡಿ: ತಂದೆ ಮತ್ತು ಮಗನ ನಡುವಿನ ಜಗಳ ತಾರಕಕ್ಕೇರಿ ಮಗನ ಕೊಲೆಯೊಂದಿಗೆ ಅಂತ್ಯವಾದ ಘಟನೆ ಉಜಿರೆ ಗ್ರಾಮದಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಉಜಿರೆಯ ಕೊಡೆಕಲ್ಲು ನಿವಾಸಿ ಕೃಷ್ಣಯ್ಯ ಆಚಾರಿ ಎಂಬವರು ಅಕ್ಟೋಬರ್ 29ರಂದು ಎಂದಿನಂತೆ ಮಲಗಿದ್ದಾಗ ಮಗ ಜಗದೀಶ್ ಆಚಾರಿ ತಂದೆಯೊಂದಿಗೆ ಯಾವುದೋ ಕಾರಣಕ್ಕೆ ಮಾತು ಆರಂಭಿಸಿದ್ದಾರೆ. ತದನಂತರ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೋಪಗೊಂಡ ತಂದೆ ಮಗನ ಕುತ್ತಿಗೆಗೆ ಚೂರಿಯಿಂದ ಇರಿದಿದ್ದಾರೆ.

ಗಂಭೀರವಾಗಿ ಗಾಯಗೊಂಡ ಜಗದೀಶ್ ಅವರನ್ನು ಮನೆಯವರು ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಸೇರಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಜಗದೀಶ್ ಸಾವನ್ನಪ್ಪಿದ್ದಾರೆ.

ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಜಗದೀಶ್ ಮೃತದೇಹದ ಪರೀಕ್ಷೆ ನಡೆಯಲಿದೆ.

ಬಂಟ್ವಾಳ ಸಮೀಪ ಗುಂಪು ಗಲಾಟೆ: ಬಂಟ್ವಾಳ ತಾಲೂಕಿನ ಮೆಲ್ಕಾರ್ ಎಂಬಲ್ಲಿ ಎರಡು ತಂಡಗಳ ನಡುವಿನ ಘರ್ಷಣೆಯಲ್ಲಿ ಚೂರಿ ಇರಿತ ನಡೆದು ಮೂವರು ಗಾಯಗೊಂಡ ಘಟನೆ (ಅಕ್ಟೋಬರ್ -27-2023) ರಾತ್ರಿ (ಗುರುವಾರ) ನಡೆದಿತ್ತು. ಗಾಯಗೊಂಡ ಮೂವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ:ಬಂಟ್ವಾಳ ಸಮೀಪ ಎರಡು ಗುಂಪುಗಳ ನಡುವೆ ಗಲಾಟೆ: ಮೂವರಿಗೆ ಚೂರಿ ಇರಿತ

ABOUT THE AUTHOR

...view details