ಕರ್ನಾಟಕ

karnataka

ಮೀನಿನ ಚಿಪ್ಸ್, ಉತ್ಪನ್ನ ಪೂರೈಕೆಗೆ ಒತ್ತು ನೀಡಿ : ಕೋಟ ಶ್ರೀನಿವಾಸ ಪೂಜಾರಿ

By

Published : Oct 7, 2020, 2:54 AM IST

ಬೆಂಗಳೂರಿನಲ್ಲಿ ಮೀನಿನ ಚಿಪ್ಸ್ ಉತ್ಪಾದನೆಯಾಗುತ್ತಿದ್ದು ಇನ್ನು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಮಾರುಕಟ್ಟೆಯಲ್ಲಿ ಈ ಉತ್ಪನ್ನ ದೊರೆಯಲಿದೆ ಎಂದು ಎಂದು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

emphasize-fish-chips-product-supply-minister-kota-srinivas-poojari
ಮೀನಿನ ಚಿಪ್ಸ್

ಮಂಗಳೂರು:ಮೀನುಗಾರಿಕೆ ಉದ್ಯಮದಲ್ಲಿ ತೊಡಗಿಸಿಕೊಳ್ಳುವ ಸಣ್ಣ ಉದ್ದಿಮೆದಾರರಿಗೆ ಮೀನು ಹಾಗೂ ಮೀನಿನ ಮೌಲ್ಯವರ್ಧಿತ ಉತ್ಪನ್ನಗಳ ಉತ್ಪಾದನೆ ಮಾರಾಟಕ್ಕೆ ಅವಶ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಮೀನಿನ ಚಿಪ್ಸ್​ ಮತ್ತು ಮೀನಿನ ಮಸಾಲೆ ಪದಾರ್ಥಗಳನ್ನು ಈಗಾಗಲೇ ಬಿಡುಗಡೆಗೊಳಿಸಿದ್ದು, ಮೀನಿನ ಉತ್ಪನ್ನ ಪೂರೈಕೆ ಹಾಗೂ ವಿತರಣೆಗೆ ಹೆಚ್ಚು ಒತ್ತು ನೀಡಬೇಕು ಎಂದು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಹಾಲ್​ನಲ್ಲಿ ನಡೆದ ಮೀನಿನ ಉತ್ಪಾದನೆಯ ವಿತರಕರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಮೀನಿನ ಚಿಪ್ಸ್ ಉತ್ಪಾದನೆಯನ್ನು ವ್ಯಾಪಕವಾಗಿ ವಿಸ್ತರಿಸುವ ನಿಟ್ಟಿನಲ್ಲಿ ವಿತರಕರ ಪಾತ್ರ ತುಂಬಾ ಮುಖ್ಯವಾಗಿರುತ್ತದೆ. ಹಾಗಾಗಿ ಪರಿಣತಿಯುಳ್ಳ ಷರತ್ತು ಮತ್ತು ನಿಬಂಧನೆಗಳನ್ನು ಪಾಲಿಸುವಂತಹ ಅರ್ಹ ವ್ಯಕ್ತಿಯನ್ನು ವಿತರಕರನ್ನಾಗಿ ನೇಮಿಸಿಕೊಳ್ಳಬೇಕು ಎಂದು ಮೀನುಗಾರಿಕಾ ಸಹಕಾರಿ ಮಹಾಮಂಡಳಿಗೆ ಅವರು ಸೂಚಿಸಿದರು.

ಈಗಾಗಲೇ ಬೆಂಗಳೂರಿನಲ್ಲಿ ಮೀನಿನ ಚಿಪ್ಸ್ ಉತ್ಪಾದನೆಯಾಗುತ್ತಿದ್ದು ಇನ್ನು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಮಾರುಕಟ್ಟೆಯಲ್ಲಿ ಈ ಉತ್ಪನ್ನ ದೊರೆಯಲಿದೆ ಎಂದರು.

ಮತ್ಸ್ಯ ದರ್ಶಿನಿ ಮಳಿಗೆಗಳಿಗೆ ಮೀನು ಹಾಗೂ ಮೀನಿನ ಉತ್ಪನ್ನಗಳನ್ನು ಸರಬರಾಜು ಮಾಡುವುದರ ಬಗ್ಗೆ ಮತ್ಸ್ಯ ಬಂಧನ ಪ್ರೈವೆಟ್ ಲಿಮಿಟೆಡ್ ಜೊತೆ ಒಡಂಬಡಿಕೆ ಮಾಡಿಕೊಂಡು ಪ್ರತಿಯನ್ನು ಹಸ್ತಾಂತರಿಸಲಾಯಿತು. ಇದೇ ವೇಳೆ ಕರಾವಳಿ ಪಡೆಯ ಮೂಲಕ ಮೀನುಗಾರರ ಚಲನವಲನ ದಾಖಲಿಸುವ ಮೊಬೈಲ್ ಆಪನ್ನು ಸಚಿವರು ಬಿಡುಗಡೆಗೊಳಿಸಿದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ಮೀನುಗಾರಿಕಾ ಸಹಕಾರ ಮಹಾ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಎಂ.ಎಲ್. ದೊಡ್ಡಮನಿ, ಕರ್ನಾಟಕ ರಾಜ್ಯ ಮೀನುಗಾರಿಕೆ ಸಹಕಾರಿ ಮಹಾಮಂಡಳಿಯ ಜನರಲ್ ಮ್ಯಾನೇಜರ್ ಪಿ.ಎಂ. ಮುದ್ದಣ್ಣ, ಮೀನುಗಾರಿಕಾ ಉಪನಿರ್ದೇಶಕ ಪಾರ್ಶ್ವನಾಥ್ ಮೊದಲಾದವರು ಉಪಸ್ಥಿತರಿದ್ದರು.

ABOUT THE AUTHOR

...view details