ಕರ್ನಾಟಕ

karnataka

ಗೋಮಾಂಸ ಭಕ್ಷಣೆ ಬಗ್ಗೆ ಸಿದ್ದರಾಮಯ್ಯ ನೀಡಿದ ಹೇಳಿಕೆ ಪಕ್ಷದ್ದಲ್ಲ : ಡಿಕೆಶಿ ಸ್ಪಷ್ಟನೆ

By

Published : Jan 6, 2021, 1:07 PM IST

Updated : Jan 6, 2021, 2:50 PM IST

ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರುವ ಅವಶ್ಯಕತೆ ಈಗ ಇರಲಿಲ್ಲ. ಅದನ್ನು ರಾಜಕಾರಣಕ್ಕಾಗಿ ಮಾಡಲಾಗುತ್ತಿದೆ. ಸಾಧ್ಯವಿದ್ರೆ ಗೋಮಾಂಸ ರಫ್ತು ಬ್ಯಾನ್ ಮಾಡಲಿ..

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಬಂಟ್ವಾಳ :ಗೋಮಾಂಸ ಭಕ್ಷಣೆ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಅವರ ವೈಯಕ್ತಿಕ. ಅದು ಪಕ್ಷದ್ದಲ್ಲ. ಅದರಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಬಂಟ್ವಾಳದಲ್ಲಿ ನಡೆಯುತ್ತಿರುವ ಸಂಕಲ್ಪ ಸಮಾವೇಶಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಗೋಹತ್ಯೆ ನಿಷೇಧ ಮಸೂದೆಗೆ ಸುಗ್ರೀವಾಜ್ಞೆ ಹಿನ್ನೆಲೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಗೋಹತ್ಯೆ ನಿಷೇಧ ಕಾನೂನು ಅಗತ್ಯವಿರಲಿಲ್ಲ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ರಾಜಕಾರಣ ಉದ್ದೇಶದಿಂದ ಇದನ್ನ ಜಾರಿ ಮಾಡಿದ್ದಾರೆ. ಗೋವನ್ನ ಪೂಜಿಸುವ ಪದ್ಧತಿ ಮೊದಲಿನಿಂದಲೂ ಇದೆ. ಸಿದ್ದರಾಮಯ್ಯ ಅವರ ಅಭ್ಯಾಸದ ಬಗ್ಗೆಯಷ್ಟೇ ಹೇಳಿದ್ದಾರೆ. ಸಿದ್ದರಾಮಯ್ಯ ಹೇಳಿಕೆಯಿಂದ ಪಕ್ಷಕ್ಕೆ ನಷ್ಟವಿಲ್ಲ. ಕಾರ್ಯಕರ್ತರು ಈ ಬಗ್ಗೆ ಅಭಿಪ್ರಾಯ ತಿಳಿಸಿದ್ರೆ ತಪ್ಪೇನಿದೆ ಎಂದರು.

ಇದನ್ನು ಓದಿ: ‘ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಿಡಿಯಿರಿ’ - ಪೊಲೀಸರಿಗೆ ರವಿ ಪೂಜಾರಿ ಸವಾಲು

ಎಲ್ಲಾ ವರ್ಗದ ಮಂದಿಯೂ ಹೈನುಗಾರಿಕೆ ಮಾಡುತ್ತಾರೆ. ಅವರೆಲ್ಲರಿಗೂ ಸರ್ಕಾರ 25 ರಿಂದ 50 ಸಾವಿರ ರೂ. ಪರಿಹಾರ ನೀಡಲಿ. ಆಮೇಲೆ ಅವರ ಮನೆಗೆ ಬೇಕಾದ್ರೂ ಕರೆದೊಯ್ಯಲಿ ಎಂದು ಹೇಳಿದರು.

ಗೋಹತ್ಯೆ ನಿಷೇಧ ಕಾನೂನು ಬಗ್ಗೆ ಡಿಕೆಶಿ ಮಾತು

ಗೋಮಾಂಸ ರಫ್ತು ಬ್ಯಾನ್ ಮಾಡಲಿ :ಇನ್ನು, ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರುವ ಅವಶ್ಯಕತೆ ಈಗ ಇರಲಿಲ್ಲ. ಅದನ್ನು ರಾಜಕಾರಣಕ್ಕಾಗಿ ಮಾಡಲಾಗುತ್ತಿದೆ. ಸಾಧ್ಯವಿದ್ರೆ ಗೋಮಾಂಸ ರಫ್ತು ಬ್ಯಾನ್ ಮಾಡಲಿ ಎಂದು ಅವರು ಹೇಳಿದ್ದಾರೆ.

Last Updated : Jan 6, 2021, 2:50 PM IST

ABOUT THE AUTHOR

...view details