ಕರ್ನಾಟಕ

karnataka

ಬೆಳ್ತಂಗಡಿ: ಕಾರು-ಬಸ್ ಅಪಘಾತ, ಇಬ್ಬರ ದುರ್ಮರಣ

By

Published : Jan 2, 2023, 7:59 AM IST

ಇನೋವಾ ಕಾರು ಹಾಗು ಖಾಸಗಿ ಬಸ್​ ನಡುವೆ ರಸ್ತೆ ಅಪಘಾತ ನಡೆದು ಬೆಳ್ತಂಗಡಿ ತಾಲೂಕಿನಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.

accident car
ಮೂಡಬಿದಿರೆ ರಸ್ತೆಯ ಗೊಳಿಯಂಗಡಿ ಬಳಿ ಅಪಘಾತಕ್ಕೆ ಒಳಗಾದ ಕಾರು

ಬೆಳ್ತಂಗಡಿ:ಹೊಸ ವರುಷದ ಮೊದಲ ದಿನವೇ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸಾವಿಗೀಡಾಗಿರುವ ಘಟನೆ ವೇಣೂರು-ಮೂಡಬಿದಿರೆ ರಸ್ತೆಯ ಗೊಳಿಯಂಗಡಿ ಬಳಿ ನಡೆದಿದೆ. ಮೂಡಬಿದಿರೆಯಿಂದ ಬೆಳ್ತಂಗಡಿ ಕಡೆ ಬರುತ್ತಿದ್ದ ಇನೋವಾ ಕಾರು ಹಾಗು ಬೆಳ್ತಂಗಡಿಯಿಂದ ಮೂಡಬಿದಿರೆಗೆ ಹೋಗುತ್ತಿದ್ದ ಖಾಸಗಿ ಬಸ್ ನಡುವೆ ಅಪಘಾತ ಉಂಟಾಗಿದೆ. ಗಂಜಿಮಠ ಸುರಲ್ಪಾಡಿ ನಿವಾಸಿ ನೌಷದ್ ಹಾಜಿ (47) ಮತ್ತು ಚಾಲಕ ಉಲಾಯಿಬೆಟ್ಟು ನಿವಾಸಿ ಫಾಜಿಲ್(21) ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ABOUT THE AUTHOR

...view details