ಕರ್ನಾಟಕ

karnataka

ಒವೈಸಿ, ಆಪ್, ಎಸ್​ಡಿಪಿಐ ಪಕ್ಷಗಳಿಗೆ ಬಿಜೆಪಿ ಫಂಡಿಂಗ್: ಎಂಎಲ್​ಸಿ ಹರೀಶ್ ಕುಮಾರ್ ಆಪಾದನೆ

By

Published : Dec 10, 2022, 1:32 PM IST

Updated : Dec 10, 2022, 3:02 PM IST

ಒವೈಸಿ, ಆಪ್, ಎಸ್​ಡಿಪಿಐ ಪಕ್ಷಗಳು ಬಿಜೆಪಿಯ ಬಿ ಟೀಮ್ ಆಗಿದೆ. ಅದಕ್ಕೆ ಓವೈಸಿ ದೇಶದ ವಿರುದ್ದ, ಭಯೋತ್ಪಾದಕ ರೀತಿಯಲ್ಲಿ ಮಾತಾಡಿದರೂ ಏನೂ ಮಾಡುವುದಿಲ್ಲ ಎಂದು ಎಂಎಲ್​ಸಿ ಹರೀಶ್​ ಕುಮಾರ್​ ಆರೋಪಿಸಿದ್ದಾರೆ.

MLC Hareesh Kumar Pressmeet
ಎಂಎಲ್​ಸಿ ಹರೀಶ್ ಕುಮಾರ್ ಸುದ್ದಿಗೋಷ್ಠಿ

ಎಂಎಲ್​ಸಿ ಹರೀಶ್ ಕುಮಾರ್ ಆಪಾದನೆ

ಮಂಗಳೂರು: ಒವೈಸಿ, ಆಪ್, ಎಸ್​ಡಿಪಿಐ ಪಕ್ಷಗಳಿಗೆ ಬಿಜೆಪಿ ಫಂಡಿಂಗ್ ಮಾಡುತ್ತಿದೆ ಎಂದು ವಿಧಾನಪರಿಷತ್ ಸದಸ್ಯ, ಕಾಂಗ್ರೆಸ್ ದ ಕ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಆಪಾದಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು ಒವೈಸಿ, ಆಪ್, ಎಸ್​ಡಿಪಿಐ ಪಕ್ಷಗಳು ಬಿಜೆಪಿಯ ಬಿ ಟೀಮ್ ಆಗಿದೆ. ಇವುಗಳಿಗೆ ಬಿಜೆಪಿ ಫಂಡಿಂಗ್ ಮಾಡುತ್ತಿದೆ. ಕೇವಲ ಪ್ರಧಾನಮಂತ್ರಿ ಟೀಕೆ ಮಾಡಿದರೆ ಜೈಲಿಗೆ ಹಾಕಲಾಗುತ್ತದೆ. ಆದರೆ, ಓವೈಸಿ ದೇಶದ ವಿರುದ್ದ, ಭಯೋತ್ಪಾದಕ ರೀತಿಯಲ್ಲಿ ಮಾತಾಡಿದರೂ ಏನೂ ಮಾಡುವುದಿಲ್ಲ ಎಂದರು.

ಮೋದಿ ಮೇನಿಯ ಎಂಬುದು ಇಲ್ಲ. ಕೇವಲ 1 ರಾಜ್ಯದಲ್ಲಿ ಗೆದ್ದಿರುವುದನ್ನು ಹೇಳಿ ಮೋದಿ ಮೇನಿಯಾ ಎಂದು ಪ್ರಚಾರಕ್ಕೆ ಇಳಿದಿದ್ದಾರೆ. ಗುಜರಾತ್ ಚುನಾವಣೆ ಕರ್ನಾಟಕ ಚುನಾವಣೆಗೆ ದಿಕ್ಸೂಚಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಗುಜರಾತ್ ದಿಕ್ಸೂಚಿಯಲ್ಲ, ಹಿಮಾಚಲ ಪ್ರದೇಶ ಚುನಾವಣೆ ಕರ್ನಾಟಕ ಚುನಾವಣೆಗೆ ದಿಕ್ಸೂಚಿ ಎಂದು ಹೇಳಿದರು.

ಇದನ್ನೂ ಓದಿ:ವರುಣಾದಲ್ಲಿ ಸಿದ್ದರಾಮಯ್ಯ ಮಿಂಚಿನ ಸಂಚಾರ: ತವರಲ್ಲಿ ರಾಗಿ ಮುದ್ದೆ ಸವಿದ ಮಾಜಿ ಸಿಎಂ

Last Updated : Dec 10, 2022, 3:02 PM IST

ABOUT THE AUTHOR

...view details