ಕರ್ನಾಟಕ

karnataka

ಕಡಬ ಬಳಿ ಪೊಲೀಸ್​ ಜೀಪ್​-ಬೊಲೆರೋ ನಡುವೆ ಡಿಕ್ಕಿ...

By

Published : Sep 4, 2021, 12:59 PM IST

ಕಡಬ ಸಮೀಪ ಕಳಾರ ಎಂಬಲ್ಲಿ, ಪೊಲೀಸ್ ಜೀಪು ಹಾಗೂ ಬೊಲೆರೋ ವಾಹನದ ನಡುವೆ ಅಪಘಾತ ಸಂಭವಿಸಿದೆ.

accident-between-police-jeep-and-bolero-vehicle
ಕಡಬ ಬಳಿ ಪೊಲೀಸ್​ ಜೀಪ್​-ಬೊಲೆರೋ ನಡುವೆ ಡಿಕ್ಕಿ... ಸಿಬ್ಬಂದಿ ಪ್ರಾಣಾಪಾಯದಿಂದ ಪಾರು

ಕಡಬ(ದಕ್ಷಿಣ ಕನ್ನಡ):ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಸಮೀಪ ಕಳಾರ ಎಂಬಲ್ಲಿ, ಪೊಲೀಸ್ ಜೀಪು ಹಾಗೂ ಬೊಲೆರೋ ವಾಹನದ ನಡುವೆ ಅಪಘಾತ ಸಂಭವಿಸಿದೆ. ಎಸ್​ಐ ಸೇರಿದಂತೆ ಇಬ್ಬರು ಚಾಲಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಡಬ ಪೊಲೀಸ್ ಠಾಣಾಧಿಕಾರಿ ರುಕ್ಮ ನಾಯ್ಕ್ ಪ್ರಯಾಣಿಸುತ್ತಿದ್ದ ಪೊಲೀಸ್ ಜೀಪು ಹಾಗೂ ಕುಂತೂರು ಪದವು ಕಡೆಯದು ಎನ್ನಲಾದ ಬೊಲೆರೋ ವಾಹನದ ಮಧ್ಯೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಎರಡೂ ವಾಹನಗಳು ಬಹುತೇಕ ನುಜ್ಜುಗುಜ್ಜಾಗಿವೆ. ಎಸ್​ಐ ರುಕ್ಮ ನಾಯ್ಕ್ ಹಾಗೂ ಎರಡೂ ವಾಹನಗಳ ಚಾಲಕರುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತರಬೇತಿ ಪಡೆದ ಚಾಲಕರೇ ಇಲ್ಲ?:

ಈ ಹಿಂದೆ ಕಡಬ ಠಾಣೆ ಪೊಲೀಸ್ ವಾಹನದ ಚಾಲಕರಾಗಿ ತರಬೇತಿ ಪಡೆದ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಇದೀಗ ಗೃಹರಕ್ಷಕ ಸಿಬ್ಬಂದಿ ಇಲ್ಲವೇ ಪೊಲೀಸ್ ಸಿಬ್ಬಂದಿಯೇ ಈ ವಾಹನ ಚಲಾಯಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ತುರ್ತು ಸಂದರ್ಭದಲ್ಲಿ ಸೇರಿದಂತೆ ಪೊಲೀಸ್ ವಾಹನ ಚಾಲನೆ ಮಾಡಲು ಕಡಬ ಪೊಲೀಸ್ ಠಾಣೆಗೆ ತರಬೇತಿ ಪಡೆದ ಚಾಲಕರ ನೇಮಕವಾಗಬೇಕಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಇದನ್ನೂ ಓದಿ:ರಾಜಕೀಯ ಸಭೆ-ಸಮಾರಂಭಗಳಿಗೂ ನಿರ್ಬಂಧ ಹೇರಲು ನಿಯಮ ತರುತ್ತೇವೆ: ಸಿಎಂ

ABOUT THE AUTHOR

...view details