ಕರ್ನಾಟಕ

karnataka

2 ಲಕ್ಷ ಮೌಲ್ಯದ ಮಾದಕ ವಸ್ತು ಸಾಗಾಟ ಯತ್ನ: ನಾಲ್ವರ ಬಂಧನ

By

Published : Dec 19, 2022, 2:09 PM IST

ಅಕ್ರಮವಾಗಿ ಡ್ರಗ್ ಸಾಗಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 2 ಲಕ್ಷ ಮೌಲ್ಯದ ಮಾದಕ ವಸ್ತು ವಶಕ್ಕೆ ಪಡೆಯಲಾಗಿದೆ.

2 lakh worth of drug traffic four arrest
ನಾಲ್ವರ ಬಂಧನ

ಉಳ್ಳಾಲ(ದಕ್ಷಿಣ ಕನ್ನಡ): ಬೆಂಗಳೂರಿಂದ ಮಂಗಳೂರಿನ ನರಿಂಗಾನ ಗ್ರಾಮದ ತೌಡುಗೋಳಿಗೆ ಕಾರಲ್ಲಿ ಸಾಗಿಸಲಾಗುತ್ತಿದ್ದ 2 ಲಕ್ಷ ಮೌಲ್ಯದ ಎಮ್​ಡಿಎಮ್ಎ ಮತ್ತು ಗಾಂಜವನ್ನು ಕೊಣಾಜೆ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.

ಅಕ್ರಮ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೊಯ್ದಿನ್ ಹಫೀಜ್ (36), ಮಹಮ್ಮದ್ ಸಿರಾಜ್ (43), ಇಕ್ಬಾಲ್ (30) ಮಹಮದ್ ಅಝೀಜ್ (33) ಬಂಧಿತರು.

ಬಂಧಿತರಿಂದ 2,10,000 ಮೌಲ್ಯದ ನಿಷೇಧಿತ 4 ಕೆಜಿ ಗಾಂಜಾ, 40 ಗ್ರಾಂ. ಎಮ್​​ಡಿಎಮ್​ಎ ಮತ್ತು 2 ಲಕ್ಷ ಮೌಲ್ಯದ ಅಲ್ಟೋ ಕಾರು ವಶ ಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ:ಪ್ರತ್ಯೇಕ ಅಪಘಾತ: ಮೈಲಾರ ಮಲ್ಲಣ್ಣ ದರ್ಶನದಿಂದ ವಾಪಸ್ಸಾಗುತ್ತಿದ್ದ ಇಬ್ಬರು ಯುವಕರು ಸೇರಿ ಮೂವರ ಸಾವು

ABOUT THE AUTHOR

...view details