ಕರ್ನಾಟಕ

karnataka

ಚಿತ್ರದುರ್ಗದಲ್ಲಿ ಆ್ಯಂಬುಲೆನ್ಸ್​ -ಸ್ಕೂಟಿ ಮಧ್ಯೆ ಡಿಕ್ಕಿ.. ಮೂವರು​ ಸವಾರರು ದುರ್ಮರಣ!

By

Published : Jun 14, 2021, 11:01 PM IST

ಆ್ಯಂಬುಲೆನ್ಸ್ ಮತ್ತು​ ಸ್ಕೂಟಿ ಮಧ್ಯ ಡಿಕ್ಕಿ ಸಂಭವಿಸಿದ್ದು, ಸ್ಥಳದಲ್ಲೇ ತ್ರಿಬಲ್​ ರೈಡಿಂಗ್​ ಸವಾರರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ಹೊರವಲಯದಲ್ಲಿ ನಡೆದಿದೆ.

three people died, three people died in road accident, three people died in road accident at Chitradurga, Chitradurga road accident, Chitradurga road accident news, ಮೂವರು ಸಾವು, ರಸ್ತೆ ಅಪಘಾತದಲ್ಲಿ ಮೂವರು ಸಾವು, ಚಿತ್ರದುರ್ಗ ರಸ್ತೆ ಅಪಘಾತದಲ್ಲಿ ಮೂವರು ಸಾವು, ಚಿತ್ರದುರ್ಗ ರಸ್ತೆ ಅಪಘಾತ, ಚಿತ್ರದುರ್ಗ ರಸ್ತೆ ಅಪಘಾತ ಸುದ್ದಿ,
ಸ್ಥಳದಲ್ಲೇ ತ್ರಿಬಲ್​ ರೈಡಿಂಗ್​ ಸವಾರರು ಸಾವು!

ಚಿತ್ರದುರ್ಗ:ಆ್ಯಂಬುಲೆನ್ಸ್ ಮತ್ತು ಸ್ಕೂಟಿ ನಡುವೆ ಮುಖಾಮುಖಾ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದಲ್ಲಿ ಸಂಭವಿಸಿದೆ. ಸುದ್ದಿ ತಿಳಿದಾಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳದಲ್ಲೇ ತ್ರಿಬಲ್​ ರೈಡಿಂಗ್​ ಸವಾರರು ಸಾವು!

ನಗರದ ಹೊರವಲಯದ ಹೊಳಲ್ಕೆರೆ ರಸ್ತೆಯ ತಿರುಮಲ ಡಾಬಾ ಬಳಿ ಶಿವಮೊಗ್ಗದ ಕಡೆಯಿಂದ ಚಿತ್ರದುರ್ಗಕ್ಕೆ ಬರುತ್ತಿದ್ದ ಆಂಬ್ಯುಲೆನ್ಸ್​ ಮತ್ತು ತ್ರಿಬಲ್​ ರೈಡಿಂಗ್​ನಲ್ಲಿ ಹೋಗುತ್ತಿದ್ದ ಸ್ಕೂಟಿ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟಿಯಲ್ಲಿದ್ದ ಮೂವರು ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಮೃತಪಟ್ಟವರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಮೃತ ದೇಹಗಳನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಸ್ಥಳದಲ್ಲೇ ತ್ರಿಬಲ್​ ರೈಡಿಂಗ್​ ಸವಾರರು ಸಾವು!

ಈ ಘಟನೆ ಕುರಿತು ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details