ಕರ್ನಾಟಕ

karnataka

ವಿದ್ಯಾರ್ಥಿನಿ ಸಾವು: ವೈದ್ಯರ ವಿರುದ್ಧ ಕುಟುಂಬಸ್ಥರ ಆಕ್ರೋಶ

By

Published : Feb 23, 2019, 3:45 PM IST

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ತಳವರಹಟ್ಟಿ ಗ್ರಾಮದ ವಿದ್ಯಾರ್ಥಿನಿ ಕಮಲ ವಿಷ ಸೇವಿಸಿದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ವೈದ್ಯರ ನಿರ್ಕ್ಷ್ಯದಿಂದ ಅಮಾಯಕ ಬಡ ಜೀವವೊಂದು ಕೈ ತಪ್ಪಿಹೋಗಿದೆ

ಚಿತ್ರದುರ್ಗ: ವಿಷ ಸೇವಿಸಿದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಸಂಬಂಧಿಕರು, ಗ್ರಾಮಸ್ಥರು ಆರೋಪಿಸಿದ್ದಾರೆ.

ಜಿಲ್ಲೆಯ ಹಿರಿಯೂರು ತಾಲೂಕಿನ ತಳವರಹಟ್ಟಿ ಗ್ರಾಮದ ವಿದ್ಯಾರ್ಥಿನಿ ಕಮಲ ನಿನ್ನೆ ಮಧ್ಯಾಹ್ನ ಕ್ಷುಲಕ ಕಾರಣಕ್ಕೆ ಮನೊಂದು ವಿಷ ಸೇವಿಸಿದ್ದಳು. ಇದನ್ನು ಅರಿತ ಸ್ಥಳೀಯರು ತಕ್ಷಣವೇ ವಿದ್ಯಾರ್ಥಿಯನ್ನು ಚಿತ್ರದುರ್ಗ ಆಸ್ಪತ್ರೆಗೆ ದಾಖಲಿಸಿದ್ದರು.

ಸೂಕ್ತ ಸಮಯಕ್ಕೆ ಸರಿಯಾಗಿ ವೈದ್ಯರು ಚಿಕಿತ್ಸೆ ನೀಡಿದ್ದರೆ ಕಮಲ ಬದುಕುಳಿಯುತ್ತಿದ್ದಳು. ಆದರೆ ವೈದ್ಯರ ನಿರ್ಲಕ್ಷ್ಯದಿಂದ ಕೊನೆಯುಸಿರೆಳದಿದ್ದಾಳೆ ಎಂದು ಕುಟುಂಬಸ್ಥರು ದೂರಿದರು.

ವೈದ್ಯರ ನಿರ್ಕ್ಷ್ಯದಿಂದ ಅಮಾಯಕ ಬಡ ಜೀವವೊಂದು ಕೈ ತಪ್ಪಿಹೋಗಿದೆ

ಸರ್ಕಾರಿ ಆಸ್ಪತ್ರೆಯಾಗಿದ್ದರೂ ಕೂಡ ಬ್ಲೆಡ್ ಟಿಸ್ಟ್, ಆ ಟೆಸ್ಟ್ ಈ ಟೆಸ್ಟ್ ಅಂತಾ ಹೊರಗಡೆ ಚೀಟಿ ಬರೆದು ಮೂರ್ನಾಲ್ಕು ಸಾವಿರ ಬಿಲ್​ ಬರೆದರು. ಎಲ್ಲವನ್ನು ಸೂಕ್ತ ಕಾಲಕ್ಕೆ ಮಾಡಿಸಿದರೂ ತಮ್ಮ ಮಗಳು ಬದುಕಲಿಲ್ಲ ಎಂದು ವೈದ್ಯರ ವಿರುದ್ಧ ದೂರಿದರು. ಈ ವಿಷಯವಾಗಿ ಗ್ರಾಮಸ್ಥರು ಹಾಗೂ ವೈದ್ಯರ ಮಧ್ಯೆ ವಾಗ್ವಾದ ನಡೆಯಿತು.

ಇನ್ನೂ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಸರ್ಕಾರಿ ವೈದ್ಯ ಆನಂದ್​ ಮಾತನಾಡಿ, ನಮ್ಮ ವೈದ್ಯರು ಮತ್ತು ಸಿಬ್ಬಂದಿ ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದರು.

ಈ ಮಧ್ಯೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿ ಅಲ್ಲಿದ್ದ ಬೇರೆ ರೋಗಿಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ನೋಡಿಕೊಂಡರು.

Intro:ವೈದ್ಯರ ನಿರ್ಲಕ್ಷ್ಯ ಆರೋಪ ವಿದ್ಯಾರ್ಥಿನಿ ಸಾವು ಪೋಷಕರ ಆಕ್ರೋಶ

ಚಿತ್ರದುರ್ಗ:- ವೈದ್ಯರನ್ನು ಜನಸಾಮಾನ್ಯರು ವೈದ್ಯೋನಾರಾಯಣ ಹರಿ ಎನ್ನುತ್ತಾರೆ. ಆದರೆ ಕೋಟೆನಾಡಿನ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಮಾತ್ರ ಇದಕ್ಕೆ ತದ್ವಿರುದ್ಧ ಇದ್ದಾರೆ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ವಿದ್ಯಾರ್ಥಿನಿಯೊಬ್ಬಳು ವಿಷ ಸೇವಿಸಿ ಬಂದು ಆಸ್ಪತ್ರೆ ಸೇರಿದರೆ ವೈದ್ಯರ ನಿರ್ಕ್ಷ್ಯದಿಂದ ಅಮಾಯಕ ಬಡ ಜೀವವೊಂದು ಕೈ ತಪ್ಪಿಹೋಗಿದೆ.

ಹೀಗೆ ಎದೆ ಬಡಿದುಕೊಂಡು ಕಣ್ಣೀರು ಹಾಕ್ತಾ ಇರುವ ತಾಯಿ, ಮತ್ತೊಂದು ಕಡೆ ನನ್ನ ಸೊಸೆ ಸಾವಿಗೆ ಕಾರಣರಾದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅಕ್ರೋಶ ವ್ಯಕ್ತ ಪಡಿಸುತ್ತಿರುವ ಮಾವ. ಹೌದು ಈ ದೃಶ್ಯ ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯಲ್ಲಿ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ತಳವರಹಟ್ಟಿ ಗ್ರಾಮದ ವಿದ್ಯಾರ್ಥಿನಿ ಕಮಲ ನಿನ್ನೆ ಮಧ್ಯಾಹ್ನ ಕ್ಷುಲಕ ಕಾರಣಕ್ಕೆ ಮನೊಂದು ವಿಷ ಸೇವಿಸಿದ್ದಾಳೆ. ಇದನ್ನು ಕಂಡ ಮಾವ ಮತ್ತು ಮೃತ ಕಮಲಳ ತಾಯಿ ಮಗಳನ್ನು ಉಳಿಸಿಕೊಳ್ಳಲು ಚಿತ್ರದುರ್ಗ ಆಸ್ಪತ್ರೆಗೆ ಕರೆ ತಂದಿದ್ದಾರೆ. ಆದರೆ ವಿಧಿಯಾಟನೆ ಬೇರೆ ಇತ್ತು ಅನ್ನಿಸುತ್ತೆ. ಸೂಕ್ತ ಸಮಯಕ್ಕೆ ಸರಿಯಾಗಿ ವೈದ್ಯರು ಚಿಕಿತ್ಸೆ ನೀಡಿದ್ದಿದ್ದರೆ ಮೃತ ಕಮಲ ಬದುಕುಳಿಯುತ್ತಿದ್ದಳು ವೈದ್ಯರು ನಿರ್ಲಕ್ಷ್ಯದಿಂದ ವಿಷ ಸೇವಿಸಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಕಮಲ ಕೊನೆಯುಸಿರುಳೆದುದ್ದಲೆ. ಮೃತಪಟ್ಟ ವಿಷಯ ತಿಳಿದ ಕಮಲಳ ತಾಯಿ ,ಮತ್ತು ಸಂಬಂಧಿಕರು ತಡ ರಾತ್ರಿ ವೈದ್ಯರ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿ ಪ್ರತಿಭಟಿಸಿದರು. ಸರ್ಕಾರಿ ಆಸ್ಪತ್ರೆಯಲ್ಲೂ ಸಹ ಬ್ಲೆಡ್ ಟಿಸ್ಟ್ ಆ ಟೆಸ್ಟ್ ಈ ಟೆಸ್ಟ್ ಅಂತಾ ಹೊರಗಡೆ ಚೀಟಿ ಬರೆದು ಮೂರ್ನಾಲ್ಕು ಸಾವಿರ ಬರೆದರು ಎಲ್ಲಾವನ್ನು ಸೂಕ್ತ ಕಾಲಕ್ಕೆ ಕೊಡೊಸಿದರು ವೈದ್ಯರು ಏನು ಆಗಿಲ್ಲ ಎಂದೇಳಿ ನಮ್ಮ ಮಗಳನ್ನು ಬಲಿ ತೆಗದುಕೊಂಡುರು ಎಂದು ಗ್ರಾಮಸ್ಥರು ವೈದ್ಯರ ಮಧ್ಯೆ ಅಕ್ರೋಶಕ್ಕೆ ಕಾರಣವಾಯಿತು.

ಇನ್ನೂ ಸ್ಥಳಕ್ಕೆ ಆಗವಿಸಿ ಜಿಲ್ಲಾ ಸರ್ಕಾರಿ ನಿವಾಸಿ ವೈದ್ಯ ಆನಂದ ನಮ್ಮ ವೈದ್ಯರು ಮತ್ತು ಸಿಬ್ಬಂದಿಗಳು ಸೂಕ್ತ ಚಿಕಿತ್ಸೆ ನೀಡಲಾಗಿದೆ ಆದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ವೈದ್ಯರು ಹೇಳುತ್ತಾರೆ. ಇನ್ನೂ ಡಾಕ್ಟರ್ ಮೋನಿಕಾ ಮೃತ ವಿದ್ಯಾರ್ಥಿನಿ ರ್ಯಾಬಿಟ್ ಪಾಯಿಸನ್ ಸೇವನೆ ಮಾಡಿರುವುದರಿಂದ ವ್ಯಕ್ತಿಗಳನ್ನು ಉಳಿಸಿಕೊಳ್ಳಲು ತುಂಬಾ ಕಷ್ಟ ತಳಿದು ಯಾವಾಗಬೇಕಾದರೂ ಸಡನ್ ಡೆತ್ ಆಗಬಹುದು ಎಂದು ರೆಪರೇನ್ಸ್ ಕಾರ್ಡ್ ಗೂ ಸಹಿ ಮಾಡಿಕೊಂಡಿರುತ್ತೇವೆ. ಅದ್ರೇ ನಾವು ಉಳಿಸಿಕೊಳ್ಳು ಆಗಲಿಲ್ಲ ಎಂದು ಬೇಜಾವ್ದಾರಿ ಉತ್ತರ ನೀಡುತ್ತಾರೆ.

ಈ ಮಧ್ಯೆ ಪೊಲೀಸರು ಸಹ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿ ಅಲ್ಲಿದ ರೋಗಿಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ನೋಡಿಕೊಂಡರು. ಒಟ್ಟಾರೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯವೂ ಇದ್ದು ಇಲ್ಲವಂತಾಗಿದ್ದು, ಬಡಜೀವಗಳು ದಿನನಿತ್ಯ ಬಲಿಯಾಗುತ್ತಿವೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಚಿವರು ಹೆಚ್ಚೆತ್ತು ಇತಂಹ ಅನಾವುತಗಳನ್ನು ತಪ್ಪಿಸಿ ಸೂಕ್ತ ಚಿಕಿತ್ಸೆಯೊಂದಿಗೆ ಮೃತ ಕಮಲ ಅಂತವರ ಅಮಯಾಕ ಬಡ ಜೀವಗಳನ್ನು ಉಳಿಸಿಬೇಕಾಗಿದೆ.

ಡಿ ನೂರುಲ್ಲಾ ಈಟಿವಿ ಭಾರತ್ ಚಿತ್ರದುರ್ಗBody:DoctorConclusion:Yadavattu

TAGGED:

ABOUT THE AUTHOR

...view details