ಕರ್ನಾಟಕ

karnataka

ಬರಿದಾಗುತ್ತಿರುವ ಜಲಾಶಯದಲ್ಲಿ ನೀರು ಉಳಿಸಿ: ವಾಣಿವಿಲಾಸ ಸಾಗರ ರಕ್ಷಿಸಿ

By

Published : Jul 2, 2019, 3:23 AM IST

ವಾಣಿವಿಲಾಸ ಸಾಗರ ಇದೀಗ ನೀರಿಲ್ಲದೆ ತನ್ನ ಒಡಲು ಬರಿದಾಗಿಸಿಕೊಂಡಿದ್ದು, ನೀರು ಪಾತಾಳಕ್ಕೆ ತಲುಪಿದ್ದರೂ, ಜಿಲ್ಲಾಡಳಿತ ಮಾತ್ರ ಅಳಿದುಳಿದ ನೀರನ್ನು ಬಿಡದೆ ನಗರ ಪ್ರದೇಶಗಳಿಗೆ ಪಂಪ್ ಮಾಡಿ ಅಣೆಕಟ್ಟಿಗೆ ಕುತ್ತು ತರಲು ಹೊರಟಿದೆ ಎಂದು ರೈತರು, ಕನ್ನಡಪರ, ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ರೈತರು, ಕನ್ನಡಪರ, ದಲಿತಪರ ಸಂಘಟನೆಗಳಿಂದ ಪ್ರತಿಭಟನೆ

ಚಿತ್ರದುರ್ಗ: ಕೋಟೆನಾಡಿನಲ್ಲಿ ಬರದಿಂದ ಜನ ಕಂಗ್ಗೆಟ್ಟಿದ್ದು, ಹನಿ ನೀರಿಗೂ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿಲ್ಲದೆ‌ ತೋಟಗಳು ಕೂಡ ಒಣಗುತ್ತಿವೆ. ಜಿಲ್ಲೆಯ ಏಕೈಕ ಜಲಾಶಯದಲ್ಲಿ ನೀರು ಪಾತಾಳ ಕಂಡಿದ್ದು, ಅಧಿಕಾರಿಗಳು ಪರ್ಯಾಯ ಯೋಚನೆ ಮಾಡದೇ, ಡೆಡ್ ಸ್ಟೋರೇಜ್ ನೀರನ್ನು ನಗರ ಪ್ರದೇಶಗಳಿಗೆ ಪಂಪ್ ಮಾಡುತ್ತಿರುವುದರಿಂದ ಜಲಾಶಯಕ್ಕೆ ಕಂಟಕ ತರುತ್ತಿದ್ದಾರೆ.

ರೈತರು, ಕನ್ನಡಪರ, ದಲಿತಪರ ಸಂಘಟನೆಗಳಿಂದ ಪ್ರತಿಭಟನೆ

ಜಿಲ್ಲೆಯ ಹಿರಿಯೂರು ತಾಲೂಕಿನ ಕೂಗಳತೆಯಲ್ಲಿರುವ ವಾಣಿವಿಲಾಸ ಸಾಗರ ಇದೀಗ ನೀರಿಲ್ಲದೆ ತನ್ನ ಒಡಲು ಬರಿದಾಗಿಸಿಕೊಂಡಿದೆ. ನೀರು ಪಾತಾಳಕ್ಕೆ ತಲುಪಿದ್ದರೂ, ಜಿಲ್ಲಾಡಳಿತ ಮಾತ್ರ ಅಳಿದ ಉಳಿದ ನೀರನ್ನು ಬಿಡದೆ ನಗರ ಪ್ರದೇಶಗಳಿಗೆ ಪಂಪ್ ಮಾಡಿ ಅಣೆಕಟ್ಟಿಗೆ ಕುತ್ತು ತರಲು ಹೊರಟಿದೆ. ಇದೇ ಕಾರಣಕ್ಕೆ ಬೀದಿಗಿಳಿದ ರೈತರು, ಕನ್ನಡಪರ, ದಲಿತಪರ ಸಂಘಟನೆಗಳು. ಬರದ ನಾಡು ಚಿತ್ರದುರ್ಗ ಜಿಲ್ಲೆಯ ಏಕೈಕ ನೀರಿನ ಮೂಲ ವಾಣಿ ವಿಲಾಸ ಸಾಗರ ಉಳಿಸಿ, ಭದ್ರ ನೀರು ಹರಿಸಿ ಎಂದು ಪಟ್ಟು ಹಿಡಿದು ಹಿರಿಯೂರು ಬಂದ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಇದೇ ಮೊದಲ ಬಾರಿಗೆ ವಿವಿ ಸಾಗರ ಜಲಾಶಯ ಬರಿದಾಗಿದ್ದು, ಜಲಾಶಯ ಡೆಡ್ ಸ್ಟೋರೇಜ್ ತಲುಪಿದ್ದರೂ ಜಿಲ್ಲಾಡಳಿತ ಮಾತ್ರ ಎಚ್ಚೆತ್ತುಕೊಳ್ಳದೇ ಇಡಿ ಡ್ಯಾಂ ಬರಿದು ಮಾಡುತ್ತಿದೆ. ಇದರಿಂದ ಆತಂಕಗೊಂಡ ರೈತರು ವಿವಿ ಸಾಗರದಿಂದ ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ಹಾಗೂ ಡಿಆರ್​ಡಿಓ ಗೆ ಸರಬರಾಜು ಮಾಡುತ್ತಿರುವ ನೀರನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಅಣೆಕಟ್ಟಿಗೆ ಅಪಾಯವಾಗುತ್ತೆ ಎಂದು ಆಗ್ರಹಿಸಿದರು.

ಇನ್ನು ಭದ್ರಾ ಮೇಲ್ದಂಡೆ ಯೋನೆಯಿಂದ ಮುಂದಿನ 15 ದಿನಗಳಲ್ಲಿ ನೀರು ಹರಿಸಬೇಕು. ಜತೆಗೆ ತಕ್ಷಣ ಜಲಾಶಯದಿಂದ ನೀರು ಪಂಪ್ ಮಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಡ್ಯಾಂ ಬಳಿ ಪ್ರತಿಭಟನೆ ನಡೆಸುತ್ತವೆ ಎಂದು ಎಚ್ಚರಿಸಿದರು. ನಾಳೆ ಕೂಡ ಈ ಹೋರಾಟ ಮುಂದುವರೆಯಲಿದ್ದು, ವಿವಿಸಾಗರ ಡ್ಯಾಂ ಮುಂದೆ ಪ್ರತಿಭಟನೆಗೆ ಕೂರುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.

Intro:ಬರಿದಾದ ಜಲಾಶಯದಲ್ಲಿ ಸ್ವಲ್ಪವಾದ್ರೂ ನೀರು ಉಳಿಸಿ : ವಾಣಿವಿಲಾಸ ಸಾಗರ ರಕ್ಷಿಸಿ

ವಿಶೇಷ ವರದಿ...‌

ಆ್ಯಂಕರ್ : ಕೋಟೆನಾಡು ಚಿತ್ರದುರ್ಗ ಸತತ ಬರದಿಂದ ಕಂಗ್ಗೆಟ್ಟಿರುವ ಜಿಲ್ಲೆ, ಕುಡಿಯುವ ಹನಿ ನೀರಿಗೂ ಪರಿತಾಪಿಸುವ ಪರಿಸ್ಥಿತಿ ಈ ಭಾಗದ ಜನ್ರದ್ದು, ನೀರಿಲ್ಲದೆ‌ ತೋಟಗಳು ಕೂಡ ಒಣಗಿ ನೆಲಕಚ್ಚಿವೆ. ಅದ್ರೇ ಜಿಲ್ಲೆಯ ಏಕೈಕ ಜಲಾಶಯದಲ್ಲಿ ನೀರು ಪಾತಾಳ ಕಂಡಿದ್ದು, ಅಧಿಕಾರಿಗಳು ಪರ್ಯಾಯ ಯೋಚನೆಯನ್ನೇ ಮಾಡದೇ, ಡೆಡ್ ಸ್ಟೋರೇಜ್ ನೀರನ್ನೂ ನಗರ ಪ್ರದೇಶಗಳಿಗೆ ಪಂಪ್ ಮಾಡುತ್ತಿದ್ದರಿಂದ ಜಲಾಶಯಕ್ಕೆ ಕಂಟಕ ತರುತ್ತಿದ್ದಾರೆ.

ಲುಕ್....

ಫ್ಲೋ....

ವಾಯ್ಸ್ 01:- ನೀರು ನೀರು ನೀರು..‌.ನೀರಿಲ್ಲದೆ ಬರಿದಾದ ಜಲಾಶಯ, ಮಳೆಯಿಲ್ಲದೆ ರೈತರು ನಮಗೆ ನೀರು ಕೊಡಿ ಎಂದು ನೀರಿಗಾಗಿ ಗೋಗರೆಯುತ್ತಿರುವ ರೈತ ಸಮೂಹ. ಬರಿದಾದ ಜಲಾಶಯದಲ್ಲಿ ಬರದಿಂದ ರೈತರು ಅಕ್ಷರಶಃ ಬೆಂದು ಹೋಗಿರುವ ದೃಶ್ಯ ಕೋಟೆನಾಡು ಚಿತ್ರದುರ್ಗದಲ್ಲಿ ಕಾಣಸಿಗುತ್ತದೆ. ಜಿಲ್ಲೆಯ ಹಿರಿಯೂರು ತಾಲೂಕಿನ ಕೂಗಳತೆಯಲ್ಲಿರುವ ವಾಣಿವಿಲಾಸ ಸಾಗರ ಇದೀಗ ನೀರಿಲ್ಲದೆ ತನ್ನ ಒಡಲು ಬರಿದಾಗಿಸಿಕೊಂಡಿದೆ. ನೀರು ಪಾತಾಳಕ್ಕೆ ತಲುಪಿದ್ದರು ಜಿಲ್ಲಾಡಳಿತ ಮಾತ್ರ ಅಳಿದ ಉಳಿದ ನೀರನ್ನು ಬಿಡದೆ ನಗರ ಪ್ರದೇಶಗಳಿಗೆ ಪಂಪ್ ಮಾಡಿ ಅಣೆಕಟ್ಟಿಗೆ ಕುತ್ತು ತರಲು ಹೊರಟಿದೆ. ಇದೇ ಕಾರಣಕ್ಕೆ ಬೀದಿಗಿಳಿದ ರೈತರು, ಕನ್ನಡಪರ, ದಲಿತಪರ ಸಂಘಟನೆಗಳು. ಬರದ ನಾಡು ಚಿತ್ರದುರ್ಗ ಜಿಲ್ಲೆಯ ಏಕೈಕ ನೀರಿನ ಮೂಲ ವಾಣಿ ವಿಲಾಸ ಸಾಗರ ಉಳಿಸಿ ಭದ್ರ ನೀರು ಹರಿಸಿ ಎಂದು ಪಟ್ಟು ಹಿಡಿದು ಇಡೀ ಹಿರೊಯೂರು ಬಂದ್ ಮಾಡುವ ಮೂಲಕ ಆಕ್ರೋಶವ್ಯಕ್ತಪಡಿಸಿದರು. ಇದೇ ಮೊದಲ ಬಾರಿಗೆ ವಿವಿ ಸಾಗರ ಜಲಾಶಯ ಬರಿದಾಗಿದ್ದು, ಜಲಾಶಯ ಡೆಡ್ ಸ್ಟೋರೇಜ್ ತಲುಪಿದ್ದರೂ ಜಿಲ್ಲಾಡಳಿತ ಮಾತ್ರ ಎಚ್ಚೆತ್ತುಕೊಳ್ಳದೇ ಇಡೀ ಡ್ಯಾಂ ಬರಿದು ಮಾಡುತ್ತಿದೆ. ಇದರಿಂದ ಆತಂಕಗೊಂಡೊರುವ ರೈತರು ವಿವಿ ಸಾಗರದಿಂದ ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ಹಾಗೂ ಡಿಆರ್ಡಿಓ ಗೆ ಸರಬರಾಜು ಮಾಡುತ್ತಿರುವ ನೀರನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಅಣೆಕಟ್ಟಿಗೆ ಅಪಾಯವಾಗುತ್ತೆ ಎಂದು ಆಗ್ರಹಿಸಿ ಹಿರಿಯೂರು ಬಂದ್ ಕರೆ ಕೊಟ್ಟಿದ್ದು. ಬಂದ್ ಗೆ ಯಶಸ್ವಿಯಾಯಿತು.

ಫ್ಲೋ....

ಬೈಟ್: ಕಸವನಹಳ್ಳಿ‌ ರಮೇಶ್, ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ.

ವಾಯ್ಸ್02 :- 1897 ರಲ್ಲಿ ಮೈಸೂರು ಸಂಸ್ಥಾನದ ದಿವಾನ್ ಶೇಷಾದ್ರಿ ಅಯ್ಯರ್ ಅವರು ಶ್ರೀ ಕೃಷ್ಣರಾಜ ಒಡೆಯರನ ಆದೇಶದ ಮೇರೆಗೆ ಪ್ರಾರಂಭಿಸಲ್ಪಟ್ಟು 1907 ರಷ್ಟಿಗೆ ಪೂರ್ಣಗೊಳಿಸಿದರು.ಅಂದು ಈ ಭಾಗದ ರೈತರಿಗೆ ಉಪಯೋಗವಾಗಲೆಂದು ನಿರ್ಮಾಣ ಮಾಡಿದ ಜಲಾಶಯ ನೀರಿಲ್ಲದರ ಅವನತಿಯತ್ತ ಸಾಗಿದೆ. ಇನ್ನೂ ದಶಕಗಳ ಕನಸು ಜಿಲ್ಲೆಯ ಮಹತ್ವಾಕಾಂಕ್ಷಿ ಯೋಜನೆಯಾದ ಭದ್ರಾ ನೀರು ಹರಿಸುವ ಭರವಸೆ ನೀಡಿದರು ಮಾತ್ರ ಇಂದಿಗು ಜಲಾಶಯಕ್ಕೆ ನೀರು ಹರಿದಿಲ್ಲದೆ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಭದ್ರಾ ಮೇಲ್ದಾಂಡೆ ಯೋನೆಯಿಂದ ಮುಂದಿನ 15 ದಿನಗಳಲ್ಲಿ ನೀರು ಹರಿಸಬೇಕು. ಜತೆಗೆ ತಕ್ಷಣ ಜಲಾಶಯದಿಂದ ನೀರು ಪಂಪ್ ಮಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಡ್ಯಾಂ ಬಳಿ ಪ್ರತಿಭಟನೆ ನಡೆಸುತ್ತವೆ ಎಂದು ಎಚ್ಚರಿಸಿದರು. ಇನ್ನೂ ನಾಳೆ ಕೂಡ ಈ ಹೋರಾಟ ಮುಂದುವರೆಯಲಿದ್ದು, ವಿವಿಸಾಗರ ಡ್ಯಾಂ ಮುಂದೆ ಪ್ರತಿಭಟನೆ ಕುರುವುದಾಗಿ ಹೇಳಿದ್ದಾರೆ.

ಫ್ಲೋ....

ಬೈಟ್02:- ಜಾಫರ್, ಕರವೇ ಹಿರಿಯೂರು ನಗರ ಘಟಕದ ಅಧ್ಯಕ್ಷ.

ವಾಯ್ಸ್03 :- ಒಟ್ಟಾರೆ ಜಲಾಶಯವನ್ನು ಬರಿದು ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ರೈತರು ಮುನ್ನೆಚ್ಚರಿಕೆ ವಹಿಸಿ ಜಿಲ್ಲಾಡಳಿತ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಅದೇನೆ ಆಗಲಿ ಈಗಾಗಲೇ ಜಿಲ್ಲಾಡಳಿತ ಹಿರಿಯೂರು, ಚಿತ್ರದುರ್ಗ, ಮತ್ತು ಚಳ್ಳಕೆರೆ ನಗರಗಳಿಗಳಿಗೆ ನೀರು ಪಂಪ್ ಮಾಡುವುದನ್ನು ತಕ್ಷಣ ನಿಲ್ಲಿಸಿ ಜಿಲ್ಲೆಯ ಏಕೈಕ ಜಲಾಶಯವನ್ನು ರಕ್ಷಣೆ ಮಾಡಲು ಪಣತೊಡಬೇಕೆಂಬುದು ರೈತರ ಆಶೆಯವಾಗಿದೆ.

ಡಿ ನೂರುಲ್ಲಾ ಈಟಿವಿ ಭಾರತ ಚಿತ್ರದುರ್ಗ
Body:vv sagaraConclusion:band

TAGGED:

ABOUT THE AUTHOR

...view details