ಕರ್ನಾಟಕ

karnataka

ಚಿತ್ರದುರ್ಗದಲ್ಲಿ ಭೀಕರ ಅಪಘಾತ: ಗರ್ಭಿಣಿ ಸೇರಿ ಮೂವರ ದುರ್ಮರಣ

By

Published : Jun 10, 2019, 7:52 PM IST

ಮೈನ್ಸ್ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 9 ತಿಂಗಳ ಗರ್ಭಿಣಿ ಸೇರಿ ಒಟ್ಟು ಮೂರು ಜನ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಗ್ರಾಮದಲ್ಲಿ ನಡೆದಿದೆ.

Chitradurga

ಚಿತ್ರದುರ್ಗ:ಮೈನ್ಸ್ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 9 ತಿಂಗಳ ಗರ್ಭಿಣಿ ಸೇರಿ ಒಟ್ಟು ಮೂರು ಜನ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಗ್ರಾಮದ ಬಳಿ ನಡೆದಿದೆ.

ಚಿತ್ರದುರ್ಗದಲ್ಲಿ ಭೀಕರ ಅಪಘಾತ

ಗರ್ಭಿಣಿ ಮಹಿಳೆ ದೀಪಾ (21), ಮಹಾತೇಂಶ್ (28), ಚೇತನ್ (08) ಮೃತರೆಂದು ಗುರುತಿಸಲಾಗಿದೆ. ಮೃತರು ಭೀಮಸಮುದ್ರ ಗ್ರಾಮದರೆಂದು ತಿಳಿದು ಬಂದಿದೆ. ಲಾರಿ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಇಬ್ಭಾಗವಾಗಿದ್ದು, ಮೂರು ಜನರ ಪ್ರಾಣಪಕ್ಷಿ ಹಾರಿ ಹೋಗಿದೆ. ಘಟನಾ ಸ್ಥಳದಲ್ಲಿ ಬಿಗುವಿನ ವಾತವಾರಣವಿದ್ದು, ಡಿಆರ್ ತುಕ್ಕಡಿ ಸಮೇತ ಎಸ್ಪಿ ಡಾ. ಅರುಣ್ ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಲು ಮುಂದಾಗಿದ್ದಾರೆ.

ಇದೇ ಸ್ಥಳದಲ್ಲಿ ಈ ರೀತಿಯ ಘಟನೆಗಳು ಪದೇ ಪದೇ ನಡೆಯುತ್ತಿದ್ದು, ಮೈನ್ಸ್ ಕಂಪನಿ ಎಚ್ಚೆತ್ತುಕೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಜಿಲ್ಲಾಧಿಕಾರಿ ಬರುವ ತನಕ ಶವ ಸಾಗಿಸಲು ಬಿಡದೆ ಸ್ಥಳೀಯರು ಪಟ್ಟು ಹಿಡಿದಿದ್ದು ಪೊಲೀಸರಿಗೆ ತಲೆಬಿಸಿಯಾಗಿ ಪರಿಣಮಿಸಿತ್ತು.

Intro:ಚಿತ್ರದುರ್ಗದಲ್ಲಿ ಭೀಕರ ಅಪಘಾತ : ಗರ್ಭಿಣಿ ಸೇರಿ ಮೂರು ಜನ್ರ ದುರ್ಮರಣ

ಆ್ಯಂಕರ್:- ಮೈನ್ಸ್ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬಂತ್ತು ತಿಂಗಳ ಗರ್ಭಿಣಿ ಮಹಿಳೆ ಸೇರಿ ಒಟ್ಟು ಮೂರು ಜನ ಸ್ಥಳದಲ್ಲೇ ಸಾವನಪ್ಪಿರುವ ದಾರುಣ ಘಟನೆ ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಗ್ರಾಮದ ಬಳಿ ನಡೆದಿದೆ. ಒಂಬತ್ತು ತಿಂಗಳ ಗರ್ಭಿಣಿ ಸೇರಿದ್ದಂತೆ ಇಬ್ಬರ ಸಾವನಪ್ಪಿದ್ದು, ಗರ್ಭಿಣಿ ಮಹಿಳೆ ದೀಪಾ (೨೧), ಮಹಾತೇಂಶ್(೨೮), ಚೇತನ್ (೮) ಮೃತರೆಂದು ಗುರುತಿಸಲಾಗಿದೆ. ಮೃತರನ್ನು ಭೀಮಸಮುದ್ರ ಗ್ರಾಮದರೆಂದು ತಿಳಿದುಬಂದಿದೆ. ಘಟನ ಸ್ಥಳದಲ್ಲಿ ಬಿಗುವಿನ ವಾತವಾರಣ ಬೆನ್ನಲ್ಲೇ ಡಿಆರ್ ತುಕ್ಕಡಿ ಸಮೇತ ಎಸ್ಪಿ ಡಾ ಅರುಣ್ ಘಟನ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಲು ಮುಂದಾಗಿದ್ದಾರೆ. ಇದೇ ಘಟನ ಸ್ಥಳದಲ್ಲಿ ಸಾಕಷ್ಟು ೧೦ ಅಪಘಾತ ಘಟನೆಗಳು ನಡೆದ್ರೂ, ಮೈನ್ಸ್ ಕಂಪನಿ ಎಚ್ಚೆತ್ತುಕೊಳ್ಳದೆ ಇರುವುದಕ್ಕೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ‌. ಲಾರಿ ಡಿಕ್ಕಿ ಹೊಡೆದ ಪರಿಣಾಮ ದ್ವೀಚಕ್ರ ವಾಹನ ಇಬ್ಬಾಗವಾಗಿದ್ದು, ಮೂರು ಜನ್ರ ಪ್ರಾಣಪಕ್ಷಿ ಹಾರಿಹೋಗಿದೆ. ಇನ್ನೂ ಜಿಲ್ಲಾಧಿಕಾರಿ ಬರುವ ತನಕ ಶವ ಸಾಗಿಸಲು ಬಿಡದೆ ಸ್ಥಳೀಯರು ಪಟ್ಟು ಹಿಡಿದಿರುವುದು ಪೋಲಿಸರಿಗೆ ತಲೆಬಿಸಿಯಾಗಿ ಪರಿಣಮಿಸಿದೆ.

ಫ್ಲೋ.....Body:AccidentConclusion:3 death

TAGGED:

ABOUT THE AUTHOR

...view details