ಕರ್ನಾಟಕ

karnataka

ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ.. ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಗ್ಯಾಸ್​ ಟ್ಯಾಂಕರ್​, ನಾಲ್ವರು ಸಾವು!

By

Published : Dec 4, 2021, 8:14 AM IST

Updated : Dec 4, 2021, 10:09 AM IST

ಮೃತರು ಗದಗ ಜಿಲ್ಲೆಯ ರೋಣದಿಂದ ಬೆಂಗಳೂರಿಗೆ ತೆರಳುತ್ತಿದ್ದ ಈರುಳ್ಳಿ ಲಾರಿಯಲ್ಲಿದ್ದ ರಾಯಚೂರು ಜಿಲ್ಲೆಯ ಹುಲುಗಪ್ಪ, ರೋಣದ ಚಾಲಕ ಶರಣಪ್ಪ, ವಿಜಯಪುರ ಜಿಲ್ಲೆಯ ಕ್ಲೀನರ್ ಸಂಜಯ್,‌ ಕುಷ್ಟಗಿಯ ಮಂಜುನಾಥ್ ಎಂದು ಗುರುತಿಸಲಾಗಿದೆ..

horrific road accident in Chitradurga district, chitradurga road accident today, Gas tanker collide with Onion lorry, ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ, ಇಂದು ಚಿತ್ರದುರ್ಗದಲ್ಲಿ ರಸ್ತೆ ಅಪಘಾತ, ಈರುಳ್ಳಿ ಲಾರಿಗೆ ಡಿಕ್ಕಿ ಹೊಡೆದ ಗ್ಯಾಸ್​ ಟ್ಯಾಂಕರ್,
ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಗ್ಯಾಸ್​ ಟ್ಯಾಂಕರ್

ಚಿತ್ರದುರ್ಗ :ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿ ನಾಲ್ವರು ಸಾವ್ನಪ್ಪಿರುವ ಘಟನೆ ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ 40ರಲ್ಲಿ ನಡೆದಿದೆ.

ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೊರವರ್ತುಲ ಬೈಪಾಸ್ ಬಳಿ ಪಂಚರ್ ಆಗಿ ನಿಂತಿದ್ದ ಈರುಳ್ಳಿ ಲಾರಿಗೆ ಗ್ಯಾಸ್ ಟ್ಯಾಂಕರ್ ಡಿಕ್ಕಿ ಹೊಡೆದಿದೆ.

ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಗ್ಯಾಸ್​ ಟ್ಯಾಂಕರ್

ಇದರ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡರು. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಮೃತರು ಗದಗ ಜಿಲ್ಲೆಯ ರೋಣದಿಂದ ಬೆಂಗಳೂರಿಗೆ ತೆರಳುತ್ತಿದ್ದ ಈರುಳ್ಳಿ ಲಾರಿಯಲ್ಲಿದ್ದ ರಾಯಚೂರು ಜಿಲ್ಲೆಯ ಹುಲುಗಪ್ಪ, ರೋಣದ ಚಾಲಕ ಶರಣಪ್ಪ, ವಿಜಯಪುರ ಜಿಲ್ಲೆಯ ಕ್ಲೀನರ್ ಸಂಜಯ್,‌ ಕುಷ್ಟಗಿಯ ಮಂಜುನಾಥ್ ಎಂದು ಗುರುತಿಸಲಾಗಿದೆ.

ಈ ಅಪಘಾತ ಕುರಿತಂತೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated :Dec 4, 2021, 10:09 AM IST

ABOUT THE AUTHOR

...view details