ಕರ್ನಾಟಕ

karnataka

ಹಿಟ್​ ಆ್ಯಂಡ್​ ರನ್​: ಚಳ್ಳಕೆರೆ ಬಳಿ ನವ ವಿವಾಹಿತ ದಂಪತಿ ಬಾಳು ದಾರುಣ ಅಂತ್ಯ!

By

Published : Nov 20, 2020, 9:03 AM IST

ಕೇವಲ ಆರು ತಿಂಗಳ ಹಿಂದೆ ಮದುವೆಯಾಗಿದ್ದ ದಂಪತಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

couple killed in road accident, couple killed in road accident at Chitradurga, Chitradurga road accident, Chitradurga road accident news, ರಸ್ತೆ ಅಪಘಾತದಲ್ಲಿ ದಂಪತಿ ಸಾವು, ಚಿತ್ರದುರ್ಗ ರಸ್ತೆ ಅಪಘಾತದಲ್ಲಿ ದಂತಪಿ ಸಾವು, ಚಿತ್ರದುರ್ಗ ರಸ್ತೆ ಅಪಘಾತ, ಚಿತ್ರದುರ್ಗ ರಸ್ತೆ ಅಪಘಾತ ಸುದ್ದಿ,
ನವ ವಿವಾಹಿತರ ಬಾಳು ನುಂಗಿದ ರಸ್ತೆ ಅಪಘಾತ

ಚಿತ್ರದುರ್ಗ:ಅಪರಿಚಿತ ಲಾರಿವೊಂದು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚಿಕ್ಕಮ್ಮನಹಳ್ಳಿ ಬಳಿ ನಡೆದಿದೆ.

ನವ ವಿವಾಹಿತರ ಬಾಳು ನುಂಗಿದ ರಸ್ತೆ ಅಪಘಾತ

ನಗರಂಗೆರೆ ಗ್ರಾಮದ ನಿವಾಸಿ ಸಂದೀಪ (30) ಮತ್ತು ಪತ್ನಿ ಭವ್ಯ (26) ದಂಪತಿ ಕಳೆದ ರಾತ್ರಿ ಬೈಕ್​ನಲ್ಲಿ ತೆರಳುತ್ತಿದ್ದರು. ಈ ವೇಳೆ ಚಳ್ಳಕೆರೆಯಿಂದ ಹಿರೇಹಳ್ಳಿ ಕಡೆ ಸಂಚರಿಸುತ್ತಿದ್ದ ಅಪರಿಚಿತ ವಾಹನವೊಂದು ಚಿಕ್ಕಮ್ಮನಹಳ್ಳಿ ಬಳಿ ಇವರ ಬೈಕ್​ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕಿಗೆ ಡಿಕ್ಕಿ ಹೊಡೆದ ಬಳಿಕ ವಾಹನ ಸಮೇತ ಚಾಲಕ ಪರಾರಿಯಾಗಿದ್ದಾನೆ. ಈ ಘಟನೆ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದರು.

ನವ ವಿವಾಹಿತರ ಬಾಳು ನುಂಗಿದ ರಸ್ತೆ ಅಪಘಾತ

ಮೃತಪಟ್ಟ ದಂಪತಿ ಆರು ತಿಂಗಳ ಹಿಂದೆ ವಿವಾಹವಾಗಿದ್ದರು ಎಂದು ತಿಳಿದು ಬಂದಿದೆ. ಘಟ‌ನಾ ಸ್ಥಳಕ್ಕೆ ತಳಕು ಪೊಲೀಸರು ಭೇಟಿ ನೀಡಿ ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details