ಕರ್ನಾಟಕ

karnataka

ಚಿತ್ರದುರ್ಗ ಹಿಂದೂ ಮಹಾಗಣಪತಿ ಶೋಭಾಯಾತ್ರೆ: 3 ಗಂಟೆಯೊಳಗೆ ನಿಮಜ್ಜನ ನಡೆಸುವಂತೆ ಡಿಸಿ ಸೂಚನೆ

By

Published : Oct 1, 2021, 8:36 PM IST

Updated : Oct 1, 2021, 10:51 PM IST

chitradurga-hindu-maha-ganapathi-2021-shobha-yatra
ಚಿತ್ರದುರ್ಗ ಹಿಂದೂ ಮಹಾಗಣಪತಿ ಶೋಭಾಯತ್ರೆ ()

ಕೋಟೆನಾಡು ಚಿತ್ರದುರ್ಗದ ವಿಶ್ವ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಇಲ್ಲಿಯವರೆಗೆ ಯಾವುದೇ ಅಹಿತಕರ ಘಟನೆ ನಡೆಯದೆ ಸುಗಮವಾಗಿ ನೆಡೆದುಕೊಂಡು ಬರುತ್ತಿದೆ. ಕಳೆದ ವರ್ಷದಿಂದ ಕೊರೊನಾ ಹಿನ್ನೆಲೆಯಲ್ಲಿ ಯಾತ್ರೆಗೆ ಅವಕಾಶ ನೀಡಿರಲಿಲ್ಲ. ಈ ಬಾರಿ ಮೂರು ಗಂಟೆಯಲ್ಲಿ ಮಹಾಗಣಪತಿ ಶೋಭಾಯಾತ್ರೆ ಮಾಡಿ ನಿಮಜ್ಜನೆ ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಚಿತ್ರದುರ್ಗ: ನಾಳೆ ನಡೆಯಲಿರುವ (ಅಕ್ಟೋಬರ್ 2) ವಿಶ್ವ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಭಜರಂಗದಳ, ವಿಶ್ವ ಹಿಂದು ಪರಿಷತ್ ಸೇರಿದಂತೆ ಸಾರ್ವಜನಿಕರು ಸಕಲ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ ಜಿಲ್ಲಾಧಿಕಾರಿ ಶೋಭಾಯಾತ್ರೆ ಮಾಡದೇ ಮೂರು ಗಂಟೆಗಳ ಕಾಲಾವಧಿಯಲ್ಲಿ ನಿಮಜ್ಜನೆ ಮಾಡುವಂತೆ ಸೂಚನೆ ನೀಡಿದ್ದಾರೆ.

ಚಿತ್ರದುರ್ಗ ಹಿಂದೂ ಮಹಾಗಣಪತಿ ಶೋಭಾಯತ್ರೆ

ಕೊರೊನಾ ಮೂರನೇ ಅಲೆ ಹಿನ್ನೆಲೆಯಲ್ಲಿ ಯಾವುದೇ ಶೋಭಾಯಾತ್ರೆ ಮಾಡದೇ ನಿಮಜ್ಜನೆ ಮಾಡುವಂತೆ ಎಸ್ಪಿ ರಾಧಿಕಾ ಅವರು ಸಹ ತಿಳಿಸಿದ್ದಾರೆ. ಶೋಭಾಯಾತ್ರೆ ದಿನದಂದು ಚಿತ್ರದುರ್ಗ ನಗರದ ಬಿ.ಡಿ.ರಸ್ತೆ ಸಂಪೂರ್ಣ ಬಂದ್ ಮಾಡಲಾಗುವುದು. ಬೆಂಗಳೂರಿನಿಂದ ಬರುವವರು ಬೈಪಾಸ್ ಮೂಲಕ ಬಸ್ ನಿಲ್ದಾಣಕ್ಕೆ, ಬಸ್ ನಿಲ್ದಾಣದಿಂದ ಮಾರ್ಕೆಟ್‌ ಮೂಲಕ ತೆರಳಬೇಕು. ಈಗಾಗಲೇ ಯಾವುದೇ ತೊಂದರೆ ಆಗದಂತೆ ನಗರದೊಳಗೆ ಮತ್ತು ಹೊರವಲಯದಲ್ಲಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ.

ಖಾಕಿ ನಿಯೋಜನೆ​: ಒಬ್ಬ ಎಎಸ್ಪಿ, 7 ಡಿವೈಎಸ್ಪಿ, 17 ಸಿಪಿಐ, 41 ಪಿಎಸ್​​ಐ, 60 ಎಎಸೈ, ಹೆಚ್ಸಿ, 773 ಪಿಸಿ, 34 ಮಹಿಳಾ ಪೊಲೀಸ್, ಹೆಚ್​​ಜಿ 100, 8 ಡಿಎಆರ್​​ ತುಕಡಿ, 3 ಕೆಎಸ್​ಆರ್​ಪಿ ತುಕಡಿ, 4 ಕ್ಯೂಆರ್ಟಿ ನಿಯೋಜನೆ ಮಾಡಲಾಗಿದ್ದು, 24 ಗಂಟೆಗಳ ಕಾಲ ಪೊಲೀಸ್ ಸರ್ಪಗಾವಲಿನಲ್ಲಿ ಕೋಟೆನಾಡು ಚಿತ್ರದುರ್ಗ ಇರಲಿದೆ.

Last Updated :Oct 1, 2021, 10:51 PM IST

ABOUT THE AUTHOR

...view details