ಕರ್ನಾಟಕ

karnataka

ಬಸ್ ಪಲ್ಟಿಯಾಗಿ ತಪ್ಪಿದ ಅನಾಹುತ: ಐವರಿಗೆ ಗಾಯ

By

Published : Mar 7, 2021, 1:15 AM IST

Updated : Mar 7, 2021, 2:42 AM IST

ಎತ್ತಿನ ಬಂಡಿ ಅಡ್ಡ ಬಂದ ಪರಿಣಾಮ ಬಸ್ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದು, ಈ ವೇಳೆ ಬಸ್ ಪಲ್ಟಿಯಾಗಿ ಐದಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ.

ಚಿತ್ರದುರ್ಗ: ಖಾಸಗಿ ಬಸ್ ಪಲ್ಟಿಯಾಗಿ ಐದಕ್ಕೂ ಅಧಿಕ ಮಂದಿಗೆ ಸಣ್ಣ-ಪುಟ್ಟ ಗಾಯಗಳಾದ ಘಟನೆ ಚಳ್ಳಕೆರೆ ತಾಲೂಕಿನ ಮೈಲನಹಳ್ಳಿ ಗ್ರಾಮದ ಬಳಿ ನಡೆಸಿದೆ.

ಪಲ್ಟಿಯಾದ ಬಸ್​

ಚಳ್ಳಕೆರೆ ಮಾರ್ಗವಾಗಿ ಬಸಾಪುರ್ ಗ್ರಾಮದತ್ತ ಖಾಸಗಿ ಬಸ್ ತೆರಳುತ್ತಿತು. ಈ ವೇಳೆಯಲ್ಲಿ ಎತ್ತಿನ ಬಂಡಿ ಅಡ್ಡ ಬಂದ ಪರಿಣಾಮ ಬಸ್ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಾನೆ ಎನ್ನಲಾಗುತ್ತಿದೆ. ಪರಿಣಾಮ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ 5ಕ್ಕೂ ಅಧಿಕ ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಮಾಹಿತಿ ತಿಳಿದು ಬಂದಿದೆ.

ಇದನ್ನೂ ಓದಿ:ಸಿಲಿಕಾನ್ ಸಿಟಿಯಲ್ಲಿ ಕೋವಿಡ್ ಹೆಚ್ಚಳ: ಹೊರವಲಯದ ಬಿಬಿಎಂಪಿ ಅಧಿಕಾರಿಗಳಿಗೆ ಅಲರ್ಟ್

ಅದೃಷ್ಟವಶಾತ್ ಬಹು ದೊಡ್ಡ ಅನಾಹುತ ತಪ್ಪಿದಂತಾಗಿದೆ. ಪಲ್ಟಿಯಾದ ಖಾಸಗಿ ಬಸ್‌ನಲ್ಲಿ 20 ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ರಸ್ತೆ ಚಿಕ್ಕದಾದ ಪರಿಣಾಮ ಬಸ್ ಪಲ್ಟಿಗೆ ಕಾರಣವೆಂದು ತಿಳಿದು ಬಂದಿದೆ. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Last Updated : Mar 7, 2021, 2:42 AM IST

ABOUT THE AUTHOR

...view details