ಕರ್ನಾಟಕ

karnataka

ಬೇರೆ ಬೇರೆ ಕಾರಣಕ್ಕೆ ಡಿ ವಿ ಸದಾನಂದಗೌಡರೇ ನಿವೃತ್ತಿ ಘೋಷಿಸಿದ್ದಾರೆ: ಶೋಭಾ ಕರಂದ್ಲಾಜೆ

By ETV Bharat Karnataka Team

Published : Nov 10, 2023, 8:26 PM IST

ಡಿ ವಿ ಸದಾನಂದಗೌಡರು ಚುನಾವಣಾ ರಾಜಕೀಯ ಬೇಡ ಎಂದಿದ್ದಾರೆ. ಆದರೆ, ರಾಜಕೀಯ ಬೇಡ ಎಂದು ಹೇಳಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ತಿಳಿಸಿದ್ದಾರೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು :ಡಿ ವಿ ಸದಾನಂದಗೌಡರಿಗೆ ಬಿಜೆಪಿ ರಾಜ್ಯದಲ್ಲಿ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಕೇಂದ್ರದಲ್ಲಿ ಮಂತ್ರಿಯನ್ನಾಗಿ ಮಾಡಿದೆ. ಎಲ್ಲ ಅವಕಾಶವನ್ನ ಅವರಿಗೆ ಕೊಟ್ಟಿದೆ ಎಂದು ಚಿಕ್ಕಮಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ.

ಬೇರೆ ಬೇರೆ ಕಾರಣದಿಂದ ರಾಜಕೀಯ ನಿವೃತ್ತಿ ಎಂದು ಅವರೇ ಘೋಷಣೆ ಮಾಡಿದ್ದಾರೆ. ಇದರಲ್ಲಿ ಯಾವುದೇ ಕಾಂಟ್ರವರ್ಸಿ ಪ್ರಶ್ನೆ ಇಲ್ಲ. ಚುನಾವಣಾ ರಾಜಕೀಯ ಬೇಡ ಅಂದಿದ್ದಾರೆ. ಆದರೆ, ರಾಜಕೀಯ ಬೇಡ ಅಂತ ಹೇಳಿಲ್ಲ. ಅವರು ಅವರ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರರಿದ್ದಾರೆ. ನನ್ನ ಬಳಿಯೂ ಒಮ್ಮೆ ಇದರ ಬಗ್ಗೆ ಹೇಳಿಕೊಂಡಿದ್ದರು. ಗೌಡ್ರೆ ಸುಮ್ಮನಿರಿ, ಇದರ ಬಗ್ಗೆ ಏಕೆ ಮಾತನಾಡುತ್ತೀರಿ ಎಂಬ ಸಲಹೆ ನೀಡಿದ್ದೆ. ನಾನು ಸಾಕಷ್ಟು ಚುನಾವಣೆ ಮಾಡಿದ್ದೇನೆ. ಹೊಸಬರು ಬರಲಿ ಎಂದು ಹೇಳಿದ್ದರು. ಹಾಲಿ ಸಂಸದರಿಗೆ ಟಿಕೆಟ್ ಸಿಗುವ ವಿಚಾರ ನಮಗೆ ಗೊತ್ತಿಲ್ಲ. ಅದು ಪಕ್ಷ ತೀರ್ಮಾನ ಮಾಡುತ್ತೆ ಎಂದು ತಿಳಿಸಿದ್ದಾರೆ.

ಚುನಾವಣಾ ಪ್ರಚಾರದಲ್ಲಿ ಆರ್​ಡಿಪಿ ನೌಕರಿ ನೀಡುವ ಭರವಸೆ‌ ಬಗ್ಗೆ ಮಾತನಾಡಿದ ಅವರು, ಗ್ಯಾರಂಟಿ, ನೌಕರಿ ಆಫರ್​ಗಳು ಫ್ರಾಡ್ ಅಂತಾ ದೇಶದಲ್ಲಿ ಸಾಬೀತಾಗಿದೆ. ಯಾವ ಯಾವ ಸರ್ಕಾರಗಳು ಘೋಷಣೆ ಮಾಡಿದ್ವು. ಯಾವುದು ಕೂಡ ಈಡೇರಿಸಲು ಆಗಲ್ಲ. ಈಗ ಕರ್ನಾಟಕದಲ್ಲಿ ನೋಡ್ತಾ ಇದ್ದೀವಿ, ಗೃಹಲಕ್ಷ್ಮಿ ಎಲ್ಲರಿಗೂ ಬಂದಿಲ್ಲ. ವಿದ್ಯುತ್​ ಬಿಲ್ ಜಾಸ್ತಿ ಮಾಡಿದ್ರು ವಿದ್ಯುತ್​ ಉಚಿತ ಅಂದ್ರು. ಇವತ್ತು ಬಿಲ್ ಕಟ್ಟಲು ಆಗದೇ ಇಂಡಸ್ಟ್ರಿಗಳು ನಿಂತು ಹೋಗಿದೆ. ಎಲ್ಲ ಗ್ಯಾರಂಟಿ ಗಳು ಫೈಲೂರ್​ ಆಗಿದೆ. ಬಸ್ ಅರ್ಧಕ್ಕೆ ನಿಂತು ಹೋಗಿದೆ. ನಿಗಮಗಳು ನಷ್ಟದ ಕೂಪದಲ್ಲಿವೆ. ಇಂತಹ ಗ್ಯಾರಂಟಿಗಳನ್ನ ಚುನಾವಣಾ ಗಿಮಿಕ್ ಕೊಟ್ಟು, ಜನರಿಗೆ ಮೋಸ ಮಾಡುವಂತಹ ಕರ್ನಾಟಕ ರಾಜ್ಯ ಕಂಡಿದ್ದಾರೆ, ಬೇರೆ ಬೇರೆ ರಾಜ್ಯದಲ್ಲಿ ಕಂಡಿದ್ದಾರೆ. ಯಾರು ಮೋಸ ಹೋಗಲ್ಲ ಎಂದು ಹೇಳಿದರು. ನಂತರ ಆರ್​ಡಿಪಿ ಹೇಳಿದ್ದಾರೆ. ಅದು ಎಲ್ಲರಿಗೂ ನೌಕರಿ‌ ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು.

ನಂತರ ಕಾಂಗ್ರೆಸ್ ವಿರುದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದ್ದು, ಅವರೇ ಅವರೇ ಹೊಡೆದಾಡುತ್ತಾರೆ
ನೋಡೋಣ. ನಾವು ವಿರೋಧ ಪಕ್ಷವಾಗಿ ಏನು ಕೆಲಸ ಮಾಡಬೇಕು ಅದನ್ನ ಮಾಡ್ತಿದ್ದೀವಿ. ವಿರೋಧ ಪಕ್ಷವಾಗಿ ಎಲ್ಲ ಹೋರಾಟಗಳನ್ನ ಮಾಡಿ, ಇವರ ಮುಖವಾಡ ಕಳುಚುವಂತ ಕೆಲಸ ಮಾಡುತ್ತೇವೆ. ಅವರವರೇ ಕಿತ್ತಾಡೋದಕ್ಕೆ ನಾವೇನೂ ಮಾಡೋಣ ಎಂದರು.

ಅದು ಅವರ ಪಕ್ಷದ ಆಂತರಿಕ ವಿಚಾರ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್​ ಕಿತ್ತಾಡ್ತಾ ಇದ್ದಾರೆ. ಶಾಸಕರು - ಶಾಸಕರು ಕಿತ್ತಾಡುತ್ತ ಇದ್ದಾರೆ. ಮಂತ್ರಿಗಳು ಗುಂಪುಗಾರಿಕೆ ಮಾಡುತ್ತ ಇದ್ದಾರೆ‌. ಅವರು ಯಾತ್ರೆಗೆ ಹೋಗ್ತಾ ಇದ್ದಾರೆ. ದುಬೈ, ಅಸ್ಸಾಂ, ಯಾರೊ ಮುಂಬೈಗೆ, ಇನ್ನೆಲ್ಲೋ ಯಾರೋ ಹೋಗಿ ಕುತ್ಕೋತ್ತಾರೆ‌. ಮುಖ್ಯಮಂತ್ರಿ ಸಪರೇಟ್ ಔತಣ ಕೂಟ ಕರೆಯುತ್ತಾರೆ. ಡಿ. ಕೆ ಶಿವಕುಮಾರ್ ಸಪರೇಟ್ ಔತಣ ಕೂಟ ಕರೆಯುತ್ತಾರೆ‌. ಒಬ್ಬ ಮಂತ್ರಿ ಮನೆಗೆ, ಅಣ್ಣ ತಮ್ಮ ಹೋಗ್ತಾರೆ. ಇದಕ್ಕೆ ಯಾರು ಕಾರಣ, ಅವರೇ ಕಾರಣ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಇದನ್ನೂ ಓದಿ :ಹೈಕಮಾಂಡ್ ಸೂಚನೆಯಂತೆ ಚುನಾವಣಾ ರಾಜಕೀಯದಿಂದ ಸದಾನಂದಗೌಡ ನಿವೃತ್ತಿ: ಬಿ ಎಸ್​ ಯಡಿಯೂರಪ್ಪ

ABOUT THE AUTHOR

...view details