ಕರ್ನಾಟಕ

karnataka

ಚಿಕ್ಕಮಗಳೂರು: ಉಣ್ಣಕ್ಕಿ ಉತ್ಸವದಲ್ಲಿ ಅಲುಗಾಡಿದ ಹುತ್ತ

By

Published : Nov 24, 2021, 3:57 PM IST

ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪ ನವೆಂಬರ್​ 21ರಂದು ನಡೆದ ಉಣ್ಣಕ್ಕಿ ಉತ್ಸವದಲ್ಲಿ ಹುತ್ತ ಅಲುಗಾಡಿದೆ.

snake termitarium shaked at chikmagalur
ಉಣ್ಣಕ್ಕಿ ಉತ್ಸವದಲ್ಲಿ ಅಲುಗಾಡಿದ ಹುತ್ತ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪ ನವೆಂಬರ್​ 21ರಂದು ನಡೆದ ಉಣ್ಣಕ್ಕಿ ಉತ್ಸವದಲ್ಲಿ ಪವಾಡ ನಡೆಯಿತು.

ಇಲ್ಲರುವ ಹುತ್ತಕ್ಕೆ ಸೂರಿಲ್ಲ, ತಡೆಗೋಡೆಗಳೂ ಇಲ್ಲ. ಆದರೂ ಮಳೆ, ಗಾಳಿಗೆ ಒಂದಿಂಚೂ ಕೂಡ ಕರಗಿಲ್ಲ. ದೀಪಾವಳಿ ಅಮಾವಾಸ್ಯೆಯ ನಂತರದ ಮಕ್ಕಳ ಹುಣ್ಣಿಮೆಯ ದಿನ ನಡೆದ ಮಹಾಮಂಗಳಾರತಿ ವೇಳೆ ಹುತ್ತ ಅಲುಗಾಡಿ ಎಲ್ಲರೂ ಹುಬ್ಬೇರುವಂತೆ ಮಾಡಿದೆ.


ಈ ಆಚರಣೆಗೆ 400 ವರ್ಷಗಳ ಇತಿಹಾಸವಿದೆ. ಈ ಹುತ್ತ ಕೇವಲ ಮಣ್ಣಿನ ಹಾವಿನ ಗೂಡಲ್ಲ, ಶಕ್ತಿಯ ಗುಡಿ ಎಂಬುದು ಭಕ್ತರ ನಂಬಿಕೆ. 400 ವರ್ಷಗಳ ಹಿಂದೆ, ಚಿಕ್ಕದಿದ್ದ ಗೂಡು ಇಂದು 16 ಅಡಿಗೂ ಎತ್ತರಕ್ಕೆ ಬೆಳೆದಿದೆ. ವರ್ಷಪೂರ್ತಿ ಮಣ್ಣಿನ ಗೊಂಬೆಯಂತೆ ನಿಲ್ಲುವ ಹುತ್ತ ವರ್ಷಕ್ಕೊಮ್ಮೆ ಅಲುಗಾಡಿ ಭಕ್ತರನ್ನು ಮೂಕವಿಸ್ಮಿತರನ್ನಾಗಿಸುತ್ತೆ. ಈ ಬಾರಿಯೂ ನಡೆದ ಮಹಾಮಂಗಳಾರತಿ ವೇಳೆ ಹುತ್ತ ಅಲುಗಾಡಿದೆ.

ಉತ್ಸವದಂದು ಯಾವುದೇ ಗಾಯವಾಗದ ಕರುವಿನ ಕಿವಿಯನ್ನು ಕತ್ತರಿಸಿ ದೇವರ ಕರುವೆಂದು ಕಾಡಿಗೆ ಬಿಟ್ಟರು. ಇದರಿಂದ ಊರಿನ ದನಕರುಗಳು ಆರೋಗ್ಯವಾಗಿದ್ದು, ಯಾವುದೇ ಅನಾಹುತಗಳು ನಡೆಯೋದಿಲ್ಲ ಅನ್ನೋದು ನಂಬಿಕೆ. ದನ ಕಾಯೋ ಹುಡುಗರು ಕಟ್ಟಿದ ಹುತ್ತವಾಗಿರುವುದರಿಂದ ಕರುವನ್ನು ಕಾಡಿಗೆ ಬಿಡೋ ಆಚರಣೆ ಬೆಳೆದು ಬಂದಿದೆ.

ಇದನ್ನೂ ಓದಿ:ಕನ್ನಡ ಸಾಹಿತ್ಯ ಪರಿಷತ್ ಹೊಸ ಅಧ್ಯಕ್ಷರ ಆಯ್ಕೆ: ಸಂಜೆ 4 ಗಂಟೆಯೊಳಗೆ ಘೋಷಣೆ ಸಾಧ್ಯತೆ

ಉತ್ಸವದ ದಿನ ಕರುವನ್ನು ಹುತ್ತಕ್ಕೆ ಸುತ್ತಿಸುವ ವೇಳೆ ಕರುವಿನ ಮೇಲೆ ಮಂಡಕ್ಕಿ ಹಾಕುತ್ತೇವೆಂದು ಹರಕೆ ಕಟ್ಟಿಕೊಂಡ್ರೆ ಎಂತಹ ಕಷ್ಟವೂ ಕಳೆಯುತ್ತದೆ ಎನ್ನುವುದು ಭಕ್ತರ ನಂಬಿಕೆ. ಚರ್ಮರೋಗ, ಮಕ್ಕಳಾಗದವರು, ತಮ್ಮ ದನಕರುಗಳು ಸಾಯುತ್ತಿದ್ರೆ ಅಥವಾ ಆರೋಗ್ಯ ಹದಗೆಟ್ಟಿದ್ರೆ ಇಲ್ಲಿಗೆ ಹರಕೆ ಕಟ್ಟಿದ್ರೆ ಸಾಕು ವರ್ಷದೊಳಗೆ ಆ ಹರಕೆ ಈಡೇರುತ್ತಂತೆ.

ಹುತ್ತ ಅಲುಗಾಡುವುದರ ಹಿಂದೆ ವೈಜ್ಞಾನಿಕ ಕಾರಣವಿದೆಯೋ ಅಥವಾ ದೇವರ ಶಕ್ತಿ ಅಡಗಿದೆಯೋ ಅನ್ನೋದು ಇಂದಿಗೂ ನಿಗೂಢ.

ABOUT THE AUTHOR

...view details