ಕರ್ನಾಟಕ

karnataka

ಕೊಪ್ಪದಲ್ಲಿ ಬಿಡಾಡಿ ಗೋವುಗಳ ಕಳ್ಳತನ: ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆ

By

Published : Jul 31, 2021, 7:22 AM IST

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ನಗರದ ಹೊರ ವಲಯದ ಬಳಿ ಬಿಡಾಡಿ ದನಗಳನ್ನು ಕದ್ದು ಕಾರಿನಲ್ಲಿ ತುಂಬಿಕೊಂಡು ಹೋದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

roadside cow theft scene captured in cctv
ಗೋವುಗಳ ಕಳ್ಳತನ

ಚಿಕ್ಕಮಗಳೂರು: ರಸ್ತೆ ಪಕ್ಕ ಮಲಗಿದ್ದ ಹಸುಗಳನ್ನು ಕಳ್ಳತನ ಮಾಡಿ ಕದ್ದೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ನಗರದ ಹೊರ ವಲಯದ ಹುಲ್ಲುಮಕ್ಕಿ ಸ್ವದೇಶಿ ಭಂಡಾರ ಬಳಿ ಮಲಗಿದ್ದ ಹಸುಗಳನ್ನು ಖದೀಮರು ರಾತ್ರಿ ಕದ್ದೊಯ್ಯುತ್ತಿರುವ ಪ್ರಕರಣ ಸಿಸಿಟಿವಿಯಿಂದ ಬೆಳಕಿಗೆ ಬಂದಿದೆ.

ಬಿಡಾಡಿ ಗೋವುಗಳ ಕಳ್ಳತನ

ಮಲಗಿದ್ದ ಹಸುಗಳನ್ನು ನಿರ್ದಯೆಯಿಂದ ಎಳೆದೊಯ್ಯುತ್ತಿರುವುದು ಪತ್ತೆಯಾಗಿದ್ದು, ಕೊಪ್ಪದಲ್ಲಿ ಗೋ ಕಳ್ಳತನ ವ್ಯಾಪಕವಾಗಿ ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಹಾಲು ಕೊಡದ ಹಸುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಮೇವು ಹಾಕುವ ಉಸಾಬರಿಗೇ ಹೋಗದೆ, ಹಾಗೇ ಬೀದಿಗೆ ಬಿಡುತ್ತಿರುವುದು ಗೋಕಳ್ಳರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ.

ಬಿಡಾಡಿ ದನಗಳ ಕಳ್ಳತನ ಹೀಗೇ ಮುಂದುವರೆಯುತ್ತದೆ. ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ:ತಮ್ಮಂದಿರಿಗೂ ಹೆಂಡ್ತಿಯಾಗುವಂತೆ ಗಂಡನ ಒತ್ತಾಯ...ನಿರಾಕರಿಸಿದ್ದಕ್ಕೆ ಏನ್ಮಾಡಿದ್ರು ಗೊತ್ತೇ?

ABOUT THE AUTHOR

...view details