ಕರ್ನಾಟಕ

karnataka

ನಿವೇಶನ ಜಾಗದ ವಿಚಾರವಾಗಿ ಗಲಾಟೆ.. ನಿವೃತ್ತ ಶಿಕ್ಷಕನ ಕೊಲೆಯಲ್ಲಿ ಅಂತ್ಯ

By

Published : Nov 25, 2022, 4:14 PM IST

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಶಿವನಿ ಗ್ರಾಮದಲ್ಲಿ ನಿವೇಶನ ಜಾಗದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದು ನಿವೃತ್ತ ಶಿಕ್ಷಕ ಶೇಖರಪ್ಪ ಸಾವನ್ನಪ್ಪಿರುವ ಘಟನೆ ನಡೆದಿದೆ.

ನಿವೃತ್ತ ಶಿಕ್ಷಕ ಶೇಖರಪ್ಪ
ನಿವೃತ್ತ ಶಿಕ್ಷಕ ಶೇಖರಪ್ಪ

ಚಿಕ್ಕಮಗಳೂರು:ನಿವೇಶನ ಜಾಗದ ವಿಚಾರವಾಗಿ ಮಾರಾಮಾರಿ ಆಗಿದ್ದು, ಈ ವೇಳೆ ಹೆಲ್ಮೆಟ್​ನಲ್ಲಿ ಹೊಡೆದು ವ್ಯಕ್ತಿಯ ಕೊಲೆ ಆಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. 5 ಅಡಿ ಜಾಗಕ್ಕಾಗಿ ಅಕ್ಕ - ಪಕ್ಕದ ಎರಡು ಕುಟುಂಬಗಳ ನಡುವೆ ಮಾರಾಮಾರಿ ಆಗಿದ್ದು, ಗಲಾಟೆಯಲ್ಲಿ ನಿವೃತ್ತ ಶಿಕ್ಷಕ ಶೇಖರಪ್ಪ ಸಾವನ್ನಪ್ಪಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಶಿವನಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಾವು ಬದುಕಿನ ನಡುವೆ ಹೋರಾಡಿದ ಶೇಖರಪ್ಪ ನಿನ್ನೆ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಎರಡೂ ಕುಟುಂಬಗಳ ಹತ್ತಾರು ಜನರಿಗೆ ಗಾಯ ಆಗಿದ್ದು, ಈ ಘಟನೆ ಖಂಡಿಸಿ ಪೊಲೀಸ್ ಠಾಣೆ ಬಳಿ ಮೃತರ ಸಂಬಂಧಿಕರ ಪ್ರತಿಭಟನೆ ನಡೆಯುತ್ತಿದೆ.

ನಿವೇಶನ ಜಾಗದ ವಿಚಾರವಾಗಿ ಗಲಾಟೆ

ಉಮೇಶ್, ಮಲ್ಲಿಕಾರ್ಜುನ, ರಾಜು ದೇವಿಕಾ ಎಂಬುವರನ್ನು ಪೊಲೀಸರು ಬಂಧನ ಮಾಡಿದ್ದು, ಘಟನೆ ನಡೆದು ಮೂರು ದಿನವಾದರೂ ಆರೋಪಿಗಳನ್ನ ಬಂಧಿಸದ ಪೊಲೀಸರ ವಿರುದ್ಧ ಮೃತನ ಸಂಬಂಧಿಕರು ಆಕ್ರೋಶ ಹೊರ ಹಾಕಿದ್ದಾರೆ.

ಓದಿ:ಆಸ್ತಿ ವಿವಾದ: ಸ್ವಂತ ಅಣ್ಣನನ್ನೇ ಕೊಂದ ತಮ್ಮಂದಿರು, ವಿಡಿಯೋ ವೈರಲ್

ABOUT THE AUTHOR

...view details