ಕರ್ನಾಟಕ

karnataka

ಕಳ್ಳತನವಾಗಿದ್ದ 1 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸಿದ ಚಿಕ್ಕಮಗಳೂರು ಪೊಲೀಸ್​​

By

Published : Nov 11, 2021, 11:02 AM IST

Updated : Nov 11, 2021, 11:57 AM IST

77 ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಬರೋಬ್ಬರಿ 1 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸರು ಮಾಲೀಕರಿಗೆ ಹಸ್ತಾಂತರ ಮಾಡಿದ್ದಾರೆ.

property recovered by chikmagalur police under 77 theft case
ಕಳ್ಳತನವಾಗಿದ್ದ ಸ್ವತ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸಿದ ಚಿಕ್ಕಮಗಳೂರು ಪೊಲೀಸರು

ಚಿಕ್ಕಮಗಳೂರು: 77 ಕಳ್ಳತನ ಪ್ರಕರಣಗಳಿಗೆ (theft cases) ಸಂಬಂಧಿಸಿದಂತೆ ಬರೋಬ್ಬರಿ 1 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸರು (chikmagalur police department) ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸ್ವತ್ತನ್ನು ಅವುಗಳ ಮಾಲೀಕರಿಗೆ ಹಸ್ತಾಂತರ ಮಾಡುವ ಕಾರ್ಯಕ್ರಮವನ್ನು ನಿನ್ನೆ ಜಿಲ್ಲಾ ಪೊಲೀಸ್ ಇಲಾಖೆ(district police department) ಹಮ್ಮಿಕೊಂಡಿತ್ತು.

ನಗದು ಸೇರಿದಂತೆ ಕಳೆದುಕೊಂಡಿದ್ದ ವಾಹನಗಳು, ವಸ್ತುಗಳನ್ನು ಪಡೆದುಕೊಳ್ಳಲು ಸಂಬಂಧಪಟ್ಟ ದೂರುದಾರರು ಬಂದಿದ್ದರು. ಖುದ್ದು ಚಿಕ್ಕಮಗಳೂರು ಎಸ್ಪಿ ಅಕ್ಷಯ್ (sp akshay) ಪ್ರತಿಯೊಬ್ಬರಿಗೆ ವಸ್ತುಗಳನ್ನು ಹಿಂದಿರುಗಿಸಿ ನೊಂದವರ ಮೊಗದಲ್ಲಿ ಸಂತಸ ಮೂಡುವಂತೆ ಮಾಡಿದ್ರು.

ಕಳ್ಳತನವಾಗಿದ್ದ ಸ್ವತ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸಿದ ಚಿಕ್ಕಮಗಳೂರು ಪೊಲೀಸರು

ಮನೆಯಲ್ಲಿ ಇಲ್ಲದ ವೇಳೆ ಕಳ್ಳತನ, ದಾರಿಯಲ್ಲಿ ಹೋಗುತ್ತಿದ್ದಾಗ ಕಣ್ಣೆದುರೇ ನಡೆದ ಘಟನೆ, ನಡುರಾತ್ರಿಯಲ್ಲಿ ನಡೆದ ದರೋಡೆ ಹೀಗೆ ಹಲವು ಪ್ರಕರಣಗಳಲ್ಲಿ ಜನರು ತಮ್ಮ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡಿದ್ದರು. ಅವನ್ನೆಲ್ಲ ನಿನ್ನೆ ವಾಪಸ್​ ಪಡೆದ್ರು.

ಅಕ್ಕನ ಮದ್ವೆಗೆಂದು ಚಿನ್ನಾಭರಣ ಖರೀದಿಸಿದ್ವಿ, ಕಳ್ಳತನ ಆಗಿದ್ದನ್ನು ನೋಡಿ ದುಃಖಿಸಿದ್ವಿ, ಆದ್ರೆ ಇದೀಗ ಪುನಃ ಚಿನ್ನಾಭರಣ ಸಿಕ್ಕಿರೋದು ಸಂತಸ ತಂದಿದೆ ಎಂದು 110 ಗ್ರಾಂ ಚಿನ್ನಾಭರಣ ಕಳೆದುಕೊಂಡಿದ್ದ ಶ್ವೇತಾ ಸಂತಸ ವ್ಯಕ್ತಪಡಿಸಿದ್ರು.

ಇದನ್ನೂ ಓದಿ:RAIN ALERT: ಮುಂದಿನ 48 ಗಂಟೆ ಮುಂದುವರಿಯಲಿದೆ ಮಳೆ

900 ಗ್ರಾಂ ಚಿನ್ನಾಭರಣ, 12 ಕೆ.ಜಿ ಬೆಳ್ಳಿ, 42ಕ್ಕೂ ಹೆಚ್ಚು ಬೈಕ್​ಗಳು, 7 ಲಕ್ಷ ರೂ. ನಗದು, ಮುರೂವರೆ ಲಕ್ಷ ಮೌಲ್ಯದ ಅಡಕೆ ಬೆಳೆ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಇಲೆಕ್ಟ್ರಾನಿಕ್ ವಸ್ತುಗಳು, ಇತರ ವಸ್ತುಗಳನ್ನು ಪೊಲೀಸರು ವಾರಸುದಾರರಿಗೆ ಹಿಂದಿರುಗಿಸಿದರು.

Last Updated : Nov 11, 2021, 11:57 AM IST

ABOUT THE AUTHOR

...view details