ಕರ್ನಾಟಕ

karnataka

ಇನ್ಸ್​​​​ಪೆಕ್ಟರ್​​​​ಗೆ ಶಾಸಕ ಧಮ್ಕಿ ಹಾಕಿದ್ದ ವಿಚಾರ: ಫೇಸ್​​​​ಬುಕ್​​​​ನಲ್ಲಿ ಕುಮಾರಸ್ವಾಮಿ ಹೇಳಿದ್ದು ಹೀಗೆ!

By

Published : May 6, 2022, 4:27 PM IST

ಕಾಫಿನಾಡಲ್ಲಿ ಶಾಸಕರಿಂದ ಪಿಎಸ್​ಐಗೆ ಆವಾಜ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮಾಡಿದ ತಪ್ಪಿಗೆ ಜಾತಿಯನ್ನ ಶಾಸಕ ಕುಮಾರಸ್ವಾಮಿ ಎಳೆ ತಂದಿದ್ದಾರೆ.

MLA abuse to PSI issue, MLA Kumaraswamy clarified on Facebook, PSI abuse by Kumaraswamy, Chikkamagaluru news,ಪಿಎಸ್​ಐಗೆ ಶಾಸಕ ನಿಂದನೆ ವಿಚಾರ, ಫೇಸ್​ಬುಕ್​ನಲ್ಲಿ ಸ್ಪಷ್ಟನೆ ನೀಡಿದ ಶಾಸಕ ಕುಮಾರಸ್ವಾಮಿ, ಕುಮಾರಸ್ವಾಮಿಯಿಂದ ಪಿಎಸ್​ಐಗೆ ನಿಂದನೆ, ಚಿಕ್ಕಮಗಳೂರು ಸುದ್ದಿ,
ಫೇಸ್ಬುಕ್​ನಲ್ಲಿ ಕುಮಾರಸ್ವಾಮಿ ಹೇಳಿದ್ದು ಹೀಗೆ

ಚಿಕ್ಕಮಗಳೂರು: ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಪೊಲೀಸ್ ಇನ್ಸ್​​ಪೆಕ್ಟರ್​​ ​ವೊಬ್ಬರಿಗೆ ಆವಾಜ್​ ಹಾಕಿದ್ದಾರೆ ಎನ್ನಲಾದ ಆಡಿಯೋ ವೈರಲ್​ ಆಗಿತ್ತು. ಹೊಸದಾಗಿ ಮಲ್ಲಂದೂರು ಠಾಣೆಯ ಚಾರ್ಜ್ ತೆಗೆದುಕೊಂಡ ರವೀಶ್​​ಗೆ ಪೋನ್​ ಮಾಡಿ ನಿಂದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈಗ ಮಾಡಿದ ತಪ್ಪಿಗೆ ಜಾತಿಯನ್ನ ಶಾಸಕ ಕುಮಾರಸ್ವಾಮಿ ಎಳೆದು ತಂದಿದ್ದಾರೆ.

ಫೇಸ್ಬುಕ್​ನಲ್ಲಿ ಕುಮಾರಸ್ವಾಮಿ ಹೇಳಿದ್ದು ಹೀಗೆ

ನನ್ನ ವಿರೋಧಿಗಳು ನನ್ನನ್ನ ಒಕ್ಕಲಿಗ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ. ಈ ಹಿಂದೆ ಪಿಎಸ್​ಐ ರವೀಶ್ ನನ್ನ ಬಳಿ ಬಂದಿದ್ದರು. ನೀವು ಮಂಡ್ಯದವರು, ಮಲ್ಲಂದೂರಲ್ಲಿ ಕೂಲಿ ಕಾರ್ಮಿಕರೇ ಹೆಚ್ಚು, ಸಂಬಾಳಿಸುವುದು ಕಷ್ಟ ಎಂದೇಳಿ ಕಳಿಸಿದ್ದೆ. ಅದನ್ನು ಹೊರತುಪಡಿಸಿ ಯಾವುದೇ ಜಾತಿ ಜನಾಂಗದ ವಿಚಾರ ಅಥವಾ ಬೇರೆ ವಿಚಾರವನ್ನು ಕೇಳದೆಯೇ ಕಳಿಸಿಕೊಟ್ಟಿದ್ದೇನೆ ಎಂದು ಫೇಸ್​ಬುಕ್​ನಲ್ಲಿ ಬರೆದಿದ್ದಾರೆ.

ಐಜಿಗೆ ಪತ್ರ ಬರೆದಿದ್ದ ಶಾಸಕ

ಇದೀಗ ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ನನ್ನ ಗಮನಕ್ಕೆ ಬಾರದೆ ಕೆಲಸಕ್ಕೆ ಹಾಜರಾಗಿದ್ದು, ಆ ವ್ಯಾಪ್ತಿಯ ನಮ್ಮ ಕಾರ್ಯಕರ್ತರು ಹಾಗೂ ಮತದಾರರು ನನ್ನ ಮೇಲೆ ಒತ್ತಡ ಹಾಕಿರುವುದರಿಂದ ಒಬ್ಬ ಶಾಸಕನಾಗಿ ನಾನೇ ಮಾತನಾಡಬೇಕಿದೆ. ಏಕೆಂದರೆ ಪೊಲೀಸ್ ಠಾಣೆ ವಿಚಾರವಾಗಿ ಪ್ರತಿದಿನ ಹತ್ತಾರು ಕರೆಗಳು ನನಗೆ ಬರುತ್ತವೆ. ನಾನೇ ಖುದ್ದು ಅದನ್ನು ನಿವಾರಣೆ ಮಾಡಬೇಕಾದ್ದರಿಂದ ಅದು ನನ್ನ ಹೊಣೆಗಾರಿಕೆಯೂ ಸತ್ಯ ಎಂದಿದ್ದಾರೆ.

ಓದಿ:ಪೊಲೀಸ್ ಇನ್​ಸ್ಪೆಕ್ಟರ್​ಗೆ ಅವಾಜ್​ ಹಾಕಿದ್ರಾ ಮೂಡಿಗೆರೆ ಶಾಸಕ?: ಆಡಿಯೋ ಕೇಳಿ..

ಇದನ್ನು ಹೊರತುಪಡಿಸಿ ಇದೀಗ ನನ್ನ ವಿರುದ್ಧ ಒಕ್ಕಲಿಗರ ವಿರೋಧಿ ಎಂದು ಕುತಂತ್ರ ಹೆಣೆಯುತ್ತಿದ್ದು, ಇದು ಸತ್ಯಕ್ಕೆ ದೂರವಾದ ಮಾತು, ನನ್ನ ಜೊತೆಗಾರರಲ್ಲಿ ಬಹುತೇಕರು ಒಕ್ಕಲಿಗ ನಾಯಕರು ಹಾಗೂ ನಮ್ಮ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಯಲ್ಲಿ ಒಕ್ಕಲಿಗರ ನಿರ್ದೇಶನದಂತೆ ಬಹುತೇಕ ಕೆಲಸ ಮಾಡಲಾಗುತ್ತಿದೆ. ಅದನ್ನು ನೀವು ಸದಾ ನೋಡುತ್ತಿದ್ದೀರಿ. ಅದು ಹೇಗೆ ನಾನು ಒಕ್ಕಲಿಗರ ವಿರೋಧಿಯಾಗುತೇನೆ. ಹಾಗಾಗಿ ನನ್ನ ವಿರೋಧಿಗಳು ಹೆಣೆದಿರುವ ಈ ಕುತಂತ್ರವನ್ನು ದಯವಿಟ್ಟು ಯಾರೂ ನಂಬಬಾರದು ಎಂದು ಫೇಸ್​​​​ಬುಕ್​​ ಮೂಲಕ ಜನರ ಬಳಿ ಮನವಿ ಮಾಡಿಕೊಂಡಿದ್ದಾರೆ.

ಐಜಿಗೆ ಪತ್ರ ಬರೆದಿದ್ದ ಶಾಸಕ

ಶಾಸಕ ಎಂ.ಪಿ ಕುಮಾರಸ್ವಾಮಿ ಕರೆ ಮಾಡುವ ಮುನ್ನ ಪಿಎಸ್ಐ ಪರ ಬ್ಯಾಟ್ ಬೀಸಿದ್ದಾರೆ. ಶಾಸಕರಿಂದ ಪಶ್ಚಿಮ ವಲಯ ಐಜಿಗೆ ಪಿಎಸ್ಐಯನ್ನ ಠಾಣೆಗೆ ನಿಯುಕ್ತಿಗೊಳಿಸುವಂತೆ ಪತ್ರ ಬರೆದಿದ್ದು, ಕಳೆದ ಏಪ್ರಿಲ್ 22 ರಂದು ಪತ್ರವನ್ನು ಶಾಸಕ ಕುಮಾರಸ್ವಾಮಿ ಕೊಟ್ಟಿದ್ದರು. ಪಿಎಸ್‌ಐ ರವೀಶ್‌ಗೆ ಧಮ್ಕಿ ಹಾಕಿರುವ ಆಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವುದಕ್ಕೆ ಸಂಬಂಧಿಸಿದಂತೆ ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಫೇಸ್​​​ಬುಕ್​​​ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ABOUT THE AUTHOR

...view details