ಕರ್ನಾಟಕ

karnataka

ಚಿಕ್ಕಮಗಳೂರು: ಮಹಾಮಳೆಯ ಆರ್ಭಟಕ್ಕೆ ತತ್ತರಿಸಿದ ಮಲೆನಾಡು..ಆತಂಕದಲ್ಲಿ ಜನಜೀವನ

By

Published : Jul 11, 2022, 8:04 PM IST

ಚಿಕ್ಕಮಗಳೂರು ಜಿಲ್ಲೆಯ ಗೋರಿಗಂಡಿ ಬಳಿ ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಮಸೀದಿ ಸೇರಿದಂತೆ ಅಂಗಡಿಗಳಿಗೆ ನದಿ ನೀರು ನುಗ್ಗಲು ಪ್ರಾರಂಭ ಮಾಡಿದೆ.

ಕೆರೆ ಒಡೆದು ದ್ವೀಪದಂತಾದ ಬಡಾವಣೆ
ಕೆರೆ ಒಡೆದು ದ್ವೀಪದಂತಾದ ಬಡಾವಣೆ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆಯ ಅವಾಂತರ ಮುಂದುವರೆದಿದ್ದು, ಮಲೆನಾಡು ಭಾಗದಲ್ಲಿಯೂ ಧಾರಾಕಾರ ಮಳೆ ಸುರಿಯಲು ಪ್ರಾರಂಭವಾಗಿದೆ. ನಗರದ ಹೊರವಲಯದ ಉಪ್ಪಳ್ಳಿ ಬಡಾವಣೆಯಲ್ಲಿ ಈ ಘಟನೆ ಜರುಗಿದ್ದು, ಕೆರೆಯ ಕಟ್ಟೆ ಬಿರುಕು ಬಿಟ್ಟು ಬಡಾವಣೆಗೆ ನೀರು ನುಗ್ಗುತ್ತಿದೆ.

ಭಾರೀ ಮಳೆಯಿಂದ ಚಿಕ್ಕಮಗಳೂರಿನಲ್ಲಿ ಅನಾಹುತ ಸಂಭವಿಸಿರುವುದು

ಬಾರಿ ಮಳೆಗೆ ಕಂಬದಕೆರೆ ಏರಿ ಒಡೆದು ಬಡಾವಣೆಗೆ ನೀರು ನುಗ್ಗುತ್ತಿದ್ದು, ಹಲವು ಮನೆಗಳು ದ್ವೀಪದಂತಾಗಿದೆ. ಪರಿಣಾಮ ಈ ಭಾಗದ ನಿವಾಸಿಗಳು ಪರದಾಟ ನಡೆಸುತ್ತಿದ್ದು, ಕೆರೆಯಲ್ಲಿ ಸಂಗ್ರಹವಾಗಿದ್ದ ಅಪಾರ ಪ್ರಮಾಣದ ನೀರು ಪೋಲಾಗಲು ಪ್ರಾರಂಭ ಮಾಡಿದೆ. ಕೆರೆ ನೀರು ರಸ್ತೆಗಳಿಗೂ ನುಗ್ಗುತ್ತಿದ್ದು, ವಾಹನ ಸವಾರರು ಸಂಚಾರ ಮಾಡಲು ಸಾಧ್ಯವಾಗದೇ ನಿಂತಲ್ಲೇ ನಿಲ್ಲುವಂತಾಗಿದೆ.

ಜಿಲ್ಲೆಯ ಗೋರಿಗಂಡಿ ಬಳಿ ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು,ಮಸೀದಿ ಸೇರಿದಂತೆ ಅಂಗಡಿಗಳಿಗೆ ನದಿ ನೀರು ನುಗ್ಗಲು ಪ್ರಾರಂಭ ಮಾಡಿದೆ. ಮಳೆ ಹೆಚ್ಚಾದಂತೆ ಭದ್ರಾ ನದಿಯ ಒಳ ಹರಿವಿನಲ್ಲಿ ಹೆಚ್ಚಳ ಕಂಡು ಬರುತ್ತಿದೆ.

ಕಾಫಿ ತೋಟದಲ್ಲಿ ಭಾರಿ ಭೂ ಕುಸಿತ: ಇದು ಒಂದು ಕಡೆಯ ಅವಾಂತರವಾದರೆ ಮಲೆನಾಡು ಭಾಗದಲ್ಲಿ ಭೂಕುಸಿತದ ಆತಂಕ ಜನರಲ್ಲಿ ಕಾಡಲು ಪ್ರಾರಂಭ ಮಾಡಿದೆ. ಮಳೆ‌ ಹೆಚ್ಚಾದಂತೆ ಭೂ ಕುಸಿತ ಹೆಚ್ಚಾಗುತ್ತಿದ್ದು, ಕಾಫಿ ತೋಟದಲ್ಲಿ ಭಾರೀ ಭೂ ಕುಸಿತ ಆಗಿರುವ ಘಟನೆ ಬೆಳಕಿಗೆ ಬಂದಿದೆ. ಎತ್ತರದ ಪ್ರದೇಶದಿಂದ ಕಾಫಿ ತೋಟ‌ ಕುಸಿಯುತ್ತಿದ್ದು, ಒಂದು ಎಕರೆಗೂ ಅಧಿಕ ಪ್ರದೇಶದಲ್ಲಿ ಭೂ ಕುಸಿತ ಉಂಟಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆರೆಮಕ್ಕಿ ಗ್ರಾಮದಲ್ಲಿ ಈ ಭೂಕುಸಿತ ಆಗುತ್ತಿದ್ದು, ನಿರಂತರ ಸುರಿಯುವ ಮಳೆಗೆ ಇಲ್ಲಿನ ಸ್ಥಳೀಯರು ಶಾಪ ಹಾಕುವಂತಾಗುತ್ತಿದೆ.

ಓದಿ:ಉದ್ಯೋಗ ಸೃಷ್ಟಿಗೆ ನಾವು ಸ್ಥಾಪಿಸಿದ್ಧ ಸಂಸ್ಥೆಗಳನ್ನೇ ಕೇಂದ್ರ ಸರ್ಕಾರ ಮಾರಾಟ ಮಾಡ್ತಿದೆ: ಡಿಕೆಶಿ

ABOUT THE AUTHOR

...view details