ಕರ್ನಾಟಕ

karnataka

ದತ್ತಮಾಲಾ ಶೋಭಾಯಾತ್ರೆ: ಡಿಜೆ ಸೌಂಡ್​ಗೆ ಕುಣಿದು ಕುಪ್ಪಳಿಸಿದ ಭಕ್ತರು

By

Published : Dec 19, 2021, 6:55 AM IST

ದತ್ತಮಾಲಾ ಕಾರ್ಯಕ್ರಮದ ಶೋಭಾಯಾತ್ರೆಯಲ್ಲಿ ಚಿಕ್ಕಮಗಳೂರು ನಗರದ ಬಸವನಹಳ್ಳಿ ಹಾಗೂ ಹನುಮಂತಪ್ಪ ವೃತ್ತದ ಬಳಿ ಭಕ್ತರು ಡಿಜೆ ಸೌಂಡ್​ಗೆ ಕುಣಿದು ಕುಪ್ಪಳಿಸಿದರು. ಏಕ ಕಾಲದಲ್ಲಿ 10 ಸಾವಿರಕ್ಕೂ ಅಧಿಕ ಜನರು ಒಂದೆಡೆ ಸೇರಿ ಜೈ ದತ್ತಾತ್ರೇಯ, ಜೈ ಶ್ರೀರಾಮ್ ಎಂದು ಜೈಕಾರ ಕೂಗುತ್ತಾ ಹೆಜ್ಜೆ ಹಾಕಿದ್ರು.

Datta Jayanti
ದತ್ತಮಾಲಾ ಕಾರ್ಯಕ್ರಮದ ಶೋಭಾಯಾತ್ರೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ವತಿಯಿಂದ ಅದ್ಧೂರಿಯಾಗಿ ದತ್ತಮಾಲಾ ಜಯಂತಿ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ 10 ಹತ್ತು ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದು, ನಗರದ ಬಸವನಹಳ್ಳಿ ರಸ್ತೆಯುದ್ದಕ್ಕೂ ಡಿಜೆ ಸೌಂಡ್​ಗೆ ಕುಡಿದು ಕುಪ್ಪಳಿಸಿದರು.

ದತ್ತಮಾಲಾ ಕಾರ್ಯಕ್ರಮದ ಶೋಭಾಯಾತ್ರೆಯಲ್ಲಿ ನಗರದ ಬಸವನಹಳ್ಳಿ ಹಾಗೂ ಹನುಮಂತಪ್ಪ ವೃತ್ತದ ಬಳಿ ಜನರು ಡಿಜೆ ಸೌಂಡ್​ಗೆ ಕುಣಿದು ಕುಪ್ಪಳಿಸಿದರು. ಏಕ ಕಾಲದಲ್ಲಿ 10 ಸಾವಿರಕ್ಕೂ ಅಧಿಕ ಜನರು ಒಂದೆಡೆ ಸೇರಿ ಜೈ ದತ್ತಾತ್ರೇಯ, ಜೈ ಶ್ರೀರಾಮ್ ಎಂದು ಜೈಕಾರ ಕೂಗುತ್ತಾ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಅಷ್ಟೇ ಅಲ್ಲದೆ ನಗರದ ಪ್ರಮುಖ ರಸ್ತೆಗಳು ಕೇಸರಿಮಯದಿಂದ ಕಂಗೊಳಿಸುತ್ತಿತ್ತು.

ದತ್ತಮಾಲಾ ಕಾರ್ಯಕ್ರಮದ ಶೋಭಾಯಾತ್ರೆ

ಶೋಭಾಯಾತ್ರೆಗೆ ಮೆರಗು ತಂದ ಪುನೀತ್ ಭಾವಚಿತ್ರಗಳು:

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮನ್ನು ಅಗಲಿ ಒಂದೂವರೆ ತಿಂಗಳು ಕಳೆದಿದೆ. ದೈಹಿಕವಾಗಿ ಅವರು ಅಗಲಿದರೂ, ಮಾನಸಿಕವಾಗಿ ಪ್ರತಿಯೊಬ್ಬರ ಮನಸ್ಸಿನಲ್ಲಿ ಅಚ್ಚಳಿಯದಂತೆ ಜೀವಂತವಾಗಿದ್ದಾರೆ. ನಿನ್ನೆ ನಡೆದ ಶೋಭಾಯಾತ್ರೆಯಲ್ಲೂ ಪುನೀತ್ ಭಾವಚಿತ್ರ ಹಿಡಿದು ಅವರ ಅಭಿಮಾನಿಗಳು ರಸ್ತೆ ಉದ್ದಕ್ಕೂ ಸಾಗಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದರು.

ABOUT THE AUTHOR

...view details