ಕರ್ನಾಟಕ

karnataka

ಚಿಕ್ಕಮಗಳೂರಲ್ಲಿ ವೃದ್ಧೆ ಸಾಕಿದ್ದ 10ಕ್ಕೂ ಹೆಚ್ಚು ಜಾನುವಾರುಗಳ ಕಳ್ಳತನ: ಬೀದಿಗೆ ಬಿದ್ದ ಹಿರಿಯ ಜೀವ

By

Published : Nov 8, 2021, 8:00 AM IST

ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಾನುವಾರುಗಳ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದೆರಡು ತಿಂಗಳಲ್ಲಿ ವೃದ್ಧೆಯೋರ್ವರು ಸಾಕಿದ್ದ 10 ಕ್ಕೂ ಅಧಿಕ ಹಸುಗಳು ಕಳ್ಳತನವಾಗಿವೆ.

Cattle theft increased in Chikmagalur
ಚಿಕ್ಕಮಗಳೂರಲ್ಲಿ ಜಾನುವಾರು ಕಳ್ಳತನ

ಚಿಕ್ಕಮಗಳೂರು:ಇಳಿ ವಯಸ್ಸಿನಲ್ಲಿ ವೃದ್ಧೆಯೋರ್ವರು ಜೀವನೋಪಾಯಕ್ಕಾಗಿ 10ಕ್ಕೂ ಹೆಚ್ಚು ಜಾ ಸಾಕಿ ಜೀವನ ನಡೆಸುತ್ತಿದ್ದರು. ಆದರೆ ಜಾನುವಾರು ಕಳ್ಳರಿಂದ ಅವರ ಬದುಕು ಅತಂತ್ರವಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚಾದ ಹಸುಗಳ ಕಳ್ಳತನ ಪ್ರಕರಣಗಳು

ನಗರದ ಗೌರಿಕಾಲುವೆ ನಿವಾಸಿಯಾದ ಲಕ್ಷ್ಮೀದೇವಿಯವರು ಸುಮಾರು 10 ಕ್ಕೂ ಅಧಿಕ ಹಸುಗಳನ್ನು ಸಾಕಿದ್ದರು. ಅವುಗಳ ಹಾಲನ್ನು ಡೈರಿಗೆ ಹಾಕಿ ಜೀವನ ಸಾಗಿಸುತ್ತಿದ್ದರು. ಆದರೆ ಕಳೆದ ಎರಡ್ಮೂರು ತಿಂಗಳಲ್ಲಿ ಗೋಕಳ್ಳರು ಸುಮಾರು ನಾಲ್ಕು ಹಸುಗಳು ಸೇರಿಂದತೆ ಕರುಗಳನ್ನು ಕಳ್ಳತನ ಮಾಡಿದ್ದಾರೆ. ದೇವರಿಗೆ ಬಿಟ್ಟಿದ್ದ ಬಸವನನ್ನೂ ಬಿಟ್ಟಿಲ್ಲ. ಈಗ ವೃದ್ಧೆಯ ಬಳಿ ಒಂದೇ ಒಂದು ಹಸು ಉಳಿದುಕೊಂಡಿದೆ.

ರಾತ್ರಿ ವೇಳೆ ಬರುವ ಖದೀಮರು, ಮನೆ ಮುಂದೆ ಮಲಗುವ ಹಸುಗಳನ್ನು ಕಾರಿನಲ್ಲಿ ತುಂಬಿಕೊಂಡು ಹೋಗಿದ್ದಾರೆ. ಈ ಕುರಿತಾದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಹಸುಗಳ ಕಳ್ಳತನ ನಡೆದಾಗಲೆಲ್ಲ ವೃದ್ಧೆಯು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲವಂತೆ. ಪ್ರತಿ ಬಾರಿ ಅಧಿಕಾರಿಗಳು ಹುಡುಕಿ ಕೊಡುವ ಹುಸಿ ಭರವಸೆ ಮಾತ್ರ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಹಸುಗಳನ್ನು ಸಾಕಿ ಹಲವು ವರ್ಷಗಳಿಂದ ಹಾಲು ಮಾರಿ ಜೀವನ ಸಾಗಿಸುತ್ತಿದ್ದೆ. ಈಗ ಅವು ಇಲ್ಲ. ಮತ್ತೆ ಕೊಂಡುಕೊಳ್ಳಲು ನನ್ನ ಬಳಿ ದುಡ್ಡಿಲ್ಲ. ಕಳೆದೆರಡು ವರ್ಷಗಳಲ್ಲಿ 10 ಹಸುಗಳು ಕಳ್ಳತನವಾಗಿವೆ. ನನಗೆ ಹಸುಗಳನ್ನು ಬಿಟ್ಟರೆ ಜೀವನ ನಡೆಸಲು ಯಾವುದೇ ಆಧಾರವಿಲ್ಲ. ಹಾಗಾಗಿ ಬೇರೆಯವರ ಮನೆಯಲ್ಲಿ ಮನಗೆಲಸಕ್ಕೆ ಹೋಗುತ್ತಿದ್ದೇನೆ ಎಂದು ಹಿರಿಯ ಜೀವ ತನ್ನ ಅಳಲು ತೋಡಿಕೊಂಡಿದೆ.

ಗೌರಿಕಾಲುವೆಯಲ್ಲಿ ಹಸುಗಳ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಇದರಿಂದ ಎಚ್ಚೆತ್ತ ಗ್ರಾಮಸ್ಥರು ಮನೆಗೆ ಸಿಸಿಟಿವಿಯನ್ನು ಅಳಡಿಸಿದ್ದಾರೆ. ಆದರೂ ಖದೀಮರು ಕಳ್ಳತನ ಮಾಡುವುದು ಮಾತ್ರ ನಿಲ್ಲಿಸಿಲ್ಲ. ಹಸುಗಳ ಕಳ್ಳತನವಾದಗಲೆಲ್ಲ ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿ ಸಮೇತ ದೂರು ದಾಖಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಇದನ್ನೂ ಓದಿ: ಇಂದಿನಿಂದ ಎಲ್​​ಕೆಜಿ, ಯುಕೆಜಿ, ಅಂಗನವಾಡಿ ಪುನಾರಂಭ: ಶಿಕ್ಷಣ ಇಲಾಖೆಯ ಮಾರ್ಗಸೂಚಿ ಪಾಲನೆ ಕಡ್ಡಾಯ

ABOUT THE AUTHOR

...view details