ಕರ್ನಾಟಕ

karnataka

ಮಾಜಿ ಸಿಎಂ ಸಿದ್ದರಾಮಯ್ಯ 'ಅಕ್ಕಿ ಹೇಳಿಕೆ' ವಿರುದ್ಧ ಶಾಸಕ ಸಿ.ಟಿ. ರವಿ ವಾಗ್ದಾಳಿ

By

Published : May 18, 2022, 10:29 PM IST

Updated : May 18, 2022, 10:49 PM IST

ಉಚಿತ ಅಕ್ಕಿ ವಿತರಣೆ ಬಗ್ಗೆ ಪದೇ ಪದೆ ಮಾತನಾಡುವ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿ.ಟಿ. ರವಿ ಪರೋಕ್ಷವಾಗಿ ಟೀಕೆ ಮಾಡಿದ್ದಾರೆ.

bjp-mla-c-t-ravi
ಸಿ.ಟಿ. ರವಿ ವಾಗ್ದಾಳಿ

ಚಿಕ್ಕಮಗಳೂರು:ಉಚಿತ ಅಕ್ಕಿ ವಿತರಣೆ ಬಗ್ಗೆ ಪದೇ ಪದೆ ಪ್ರಸ್ತಾಪಿಸುವ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಶಾಸಕ ಸಿ.ಟಿ. ರವಿ ಟೀಕಾಪ್ರಹಾರ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್​ ಆರಂಭದಿಂದ ಈವರೆಗೂ 84 ಕೋಟಿ ಜನರಿಗೆ ಉಚಿತ ಅಕ್ಕಿ ನೀಡಿದ್ದಾರೆ. ಇದನ್ನು ಯಾವತ್ತಾದರೂ ಮೋದಿ ಅವರು, ಕೊಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾರಾ? ಎಂದು ಪ್ರಶ್ನಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ 'ಅಕ್ಕಿ ಹೇಳಿಕೆ' ವಿರುದ್ಧ ಶಾಸಕ ಸಿ.ಟಿ. ರವಿ ವಾಗ್ದಾಳಿ

ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ. ರವಿ, ಮಾಜಿ ಸಿಎಂ ಒಬ್ಬರು ನಾನು ಕೊಟ್ಟೆ, ನಾನು ಕೊಟ್ಟೆ ಅಂತಿರ್ತಾರೆ. ತುಂಬಿದ ಕೊಡ ತುಳುಕಲ್ಲ. ಅರ್ಧಂಬರ್ಧ ಕೊಡಗಳೇ ತುಳುಕೋದು. ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಶೇ 90ರಷ್ಟು ಹಣ ಕೊಡ್ತಿತ್ತು. ಶೇ10ರಷ್ಟು ಮಾತ್ರ ರಾಜ್ಯ ಸರ್ಕಾರದ್ದು. 32 ರೂಪಾಯಿಯಲ್ಲಿ 29 ರೂಪಾಯಿ ಕೇಂದ್ರ ಕೊಡ್ತಿತ್ತು.

3 ರೂಪಾಯಿ ಮಾತ್ರ ರಾಜ್ಯ ಸರ್ಕಾರ ಹಾಕ್ತಿತ್ತು. 29 ರೂಪಾಯಿ ಕೊಟ್ಟ ಮೋದಿ ಎಂದೂ ನಾನು ಕೊಟ್ಟೆ ಅಂತ ಹೇಳಿದ್ದಾರಾ ಎಂದು ಸಿದ್ದರಾಮಯ್ಯ ವಿರುದ್ಧ ಶಾಸಕ ಸಿಟಿ ರವಿ ಪರೋಕ್ಷ ವಾಗ್ದಾಳಿ ನಡೆಸಿದರು.

ಓದಿ:ನಾರಾಯಣಪುರ ನಾಲೆ ಆಧುನೀಕರಣದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ​: ಸಿದ್ದರಾಮಯ್ಯ ಆರೋಪ

Last Updated : May 18, 2022, 10:49 PM IST

ABOUT THE AUTHOR

...view details