ಕರ್ನಾಟಕ

karnataka

ಚಿಕ್ಕಮಗಳೂರು: ಗೋವಾ ರಾಜ್ಯದ ಮದ್ಯ ಮಾರಾಟಕ್ಕೆ ಯತ್ನಿಸಿದ ಆರೋಪಿ ಅಂದರ್​

By

Published : Oct 14, 2020, 7:07 AM IST

ಕೆ.ಎಂ ರಸ್ತೆಯ ಸೇಂಟ್​​ ಜೋಸೆಫ್ ಶಾಲೆಯ ಹತ್ತಿರ ಗೂಡ್ಸ್ ವಾಹನದಲ್ಲಿ ಗೋವಾದ ಮದ್ಯ ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವನನ್ನು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

a-man-arrested-for-selling-goa-state-liquor-in-chikkamagalore
ಗೋವಾ ರಾಜ್ಯಕ್ಕೆ ಸೇರಿದ ಮದ್ಯ ಮಾರಾಟಕ್ಕೆ ಯತ್ನಿಸಿದ ಓರ್ವ ಬಂಧನ

ಚಿಕ್ಕಮಗಳೂರು: ಅಕ್ರಮವಾಗಿ ಗೋವಾ ಮದ್ಯ ಮಾರಾಟಕ್ಕೆ ಯತ್ನಿಸುತ್ತಿದ್ದ ಓರ್ವನನ್ನು ಬಂಧಿಸಲಾಗಿದೆ. ಬಂಧಿತ ವ್ಯಕ್ತಿಯಿಂದ 13 ಲೀಟರ್ ಗೋವಾ ರಾಜ್ಯಕ್ಕೆ ಸೇರಿದ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಇಲಾಖೆ, ನಗರದ ಗೌರಿ ಕಾಲುವೆಯ ನಿವಾಸಿ ನವಿನ್ ಎಂಬಾತನನ್ನು ಬಂಧಿಸಿದ್ದಾರೆ. ಈತ ಕೆ.ಎಂ ರಸ್ತೆಯ ಸೇಂಟ್​​ ಜೋಸೆಫ್ ಶಾಲೆಯ ಹತ್ತಿರ ಗೂಡ್ಸ್ ವಾಹನದಲ್ಲಿ ಗೋವಾದ ಮದ್ಯ ಮಾರಾಟಕ್ಕೆ ಯತ್ನಿಸುತ್ತಿದ್ದ.

ಈ ಮಾಹಿತಿ ಆಧರಿಸಿ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು 13 ಲೀಟರ್ ಮದ್ಯ ಹಾಗೂ ವಾಹನವನ್ನು ವಶಕ್ಕೆ ಪಡೆದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ABOUT THE AUTHOR

...view details