ಕರ್ನಾಟಕ

karnataka

ಟೀ ಕುಡಿದು ಉಗುಳಿದನೆಂದು ಚಾಕುವಿನಿಂದ ಇರಿದು ಕೊಲೆಗೈದ ಅಂಗಡಿ ಮಾಲೀಕ

By

Published : Sep 23, 2020, 4:51 PM IST

ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ಮುಟ್ಟಿಸಿ ಗಾಯಗೊಂಡ ಯುವಕನನ್ನು ಕೋಲಾರ ಜಾಲಪ್ಪ ಆಸ್ಪತ್ರೆಗೆ ತೆರಳಿಸುವ ವೇಳೆ ಮಾರ್ಗ ಮಧ್ಯೆದಲ್ಲಿ ಮುನಿಕೃಷ್ಣ ಮೃತಪಟ್ಟಿದ್ದಾನೆ..

Young man murder by tea stall owner, Young man murder in Chikkaballapur, Chikkaballapur murder news, Chikkaballapur murder 2020 news, ಅಂಗಡಿ ಮಾಲೀಕನಿಂದ ಯುವಕನ ಕೊಲೆ, ಚಿಕ್ಕಬಳ್ಳಾಪುರದಲ್ಲಿ ಅಂಗಡಿ ಮಾಲೀಕನಿಂದ ಯುವಕನ ಕೊಲೆ, ಚಿಕ್ಕಬಳ್ಳಾಪುರ ಕೊಲೆ, ಚಿಕ್ಕಬಳ್ಳಾಪುರ ಕೊಲೆ 2020, ಚಿಕ್ಕಬಳ್ಳಾಪುರ ಕೊಲೆ 2020 ಸುದ್ದಿ,
ಟೀ ಕುಡಿದು ಉಗುಳಿದಕ್ಕೆ ಚಾಕುವುನಿಂದ ಹಿರಿದು ಕೊಲೆ ಮಾಡಿದ ಅಂಗಡಿ ಮಾಲೀಕ

ಚಿಕ್ಕಬಳ್ಳಾಪುರ:ಟೀ ಕುಡಿದು ಅಂಗಡಿ ಬಳಿ‌ ಉಗುಳಿದ ಎಂಬ ಕಾರಣಕ್ಕೆ ಯುವಕನನ್ನು ಅಂಗಡಿ ಮಾಲೀಕ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಉಲ್ಲಪ್ಪನಹಳ್ಳಿ ಬಳಿ ನಡೆದಿದೆ.

ಟೀ ಕುಡಿದು ಉಗುಳಿದಕ್ಕೆ ಚಾಕುವುನಿಂದ ಇರಿದು ಕೊಲೆ ಮಾಡಿದ ಅಂಗಡಿ ಮಾಲೀಕ

ಗ್ರಾಮದ ಮುನಿಕೃಷ್ಣ(26) ಎಂಬಾತ ಕೊಲೆಯಾದ ಯುವಕ ಎಂದು ತಿಳಿದು ಬಂದಿದೆ. ಮುನಿಕೃಷ್ಣ ಪ್ರತಿನಿತ್ಯ ಗ್ರಾಮದ ಚೇತನ್ ಅಂಗಡಿಗೆ ಟೀ ಕುಡಿಯಲು ತೆರಳುತ್ತಿದ್ದ. ಎಂದಿನಂತೆ ಇಂದು ಮುಂಜಾನೆ 6 ಗಂಟೆ ಸಮಯದಲ್ಲಿ ಟೀ ಕುಡಿದಿದ್ದಾನೆ. ನಂತರ ಟೀ ಕುಡಿದು ಉಗುಳಿದ್ದಾನೆ. ಇದೇ ಕಾರಣಕ್ಕೆ ಇಬ್ಬರ ಮಧ್ಯೆ ಜಗಳ ಶುರುವಾಗಿದೆ.

ಕುಪಿತಗೊಂಡ ಅಂಗಡಿ ಮಾಲೀಕ ಚೇತನ್ ಎಷ್ಟು ಬಾರಿ ನಿಮಗೆ ಹೇಳುವುದು. ಹೀಗೆ ಮಾಡಬೇಡಿ ಎಂದು ಎಚ್ಚರಿಸಿದ್ರೂ ಅದೇ ಹವ್ಯಾಸ ಮುಂದುವರಿಸುತ್ತೀರಾ ಅಂತಾ ಮುನಿಕೃಷ್ಣಗೆ ಗಟ್ಟಿಧ್ವನಿಯಲ್ಲಿ ಹೇಳಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಶುರುವಾದ ಜಗಳ ತಾರಕ್ಕೇರಿದೆ.

ಟೀ ಕುಡಿದು ಉಗುಳಿದನೆಂದು ಚಾಕುವಿನಿಂದ ಇರಿದು ಕೊಲೆ ಮಾಡಿದ ಅಂಗಡಿ ಮಾಲೀಕ

ಮಾತಿಗೆ ಮಾತು ಬೆಳೆದು ಅಂಗಡಿಯಲ್ಲಿದ್ದ ಚಾಕುವಿನಿಂದ ಮುನಿಕೃಷ್ಣನ ಎದೆಯ ಭಾಗಕ್ಕೆ ಚೇತನ್​ ಚುಚ್ಚಿ ಗಾಯಗೊಳಿಸಿದ್ದಾನೆ. ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ಮುಟ್ಟಿಸಿ ಗಾಯಗೊಂಡ ಯುವಕನನ್ನು ಕೋಲಾರ ಜಾಲಪ್ಪ ಆಸ್ಪತ್ರೆಗೆ ತೆರಳಿಸುವ ವೇಳೆ ಮಾರ್ಗ ಮಧ್ಯೆದಲ್ಲಿ ಮುನಿಕೃಷ್ಣ ಮೃತಪಟ್ಟಿದ್ದಾನೆ.

ಮೃತ ದೇಹವನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ. ಈ ಘಟನೆ ಕುರಿತು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

ABOUT THE AUTHOR

...view details