ಕರ್ನಾಟಕ

karnataka

ರಾತ್ರಿಯಿಡಿ ಸುರಿದ ಧಾರಾಕಾರ ಮಳೆ.. ನಂದಿ ಬೆಟ್ಟದಲ್ಲಿ ಗುಡ್ಡಕುಸಿತ, ಸಂಪರ್ಕ ಬಂದ್..

By

Published : Aug 25, 2021, 3:37 PM IST

10 ಅಡಿಯಷ್ಟು ಮಣ್ಣು ಮಳೆಯ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ವಿದ್ಯುತ್​ ತಂತಿಗಳು, ಬೃಹತ್ ಮರಗಳು ನೆಲಸಮವಾಗಿವೆ. ಸದ್ಯ ಹಿಂದಿನ ದಿನ ನಂದಿ ಬೆಟ್ಟದಲ್ಲಿ ವಾಸ್ತವ್ಯ ಹೂಡಿರುವ ಪ್ರವಾಸಿಗರು ಮರಳಿ ಬರಲಾಗದೆ ಅಲ್ಲೇ ಸಿಲುಕಿದ್ದಾರೆ..

Road closed from heavy rain at Nandi hills
ಯಿಂದಾಗಿ ನಂದಿ ಬೆಟ್ಟಕ್ಕೆ ಹೋಗುವ ಮಾರ್ಗದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಳೆದ

ಚಿಕ್ಕಬಳ್ಳಾಪುರ :ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ನಂದಿ ಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಗುಡ್ಡ ಕುಸಿತ ಉಂಡಾಗಿದೆ. ಗುಡ್ಡ ಕುಸಿದಿರುವ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ವಾಹನ ಸಂಚಾರ ಬಂದ್ ಮಾಡಲಾಗಿದೆ.

ಕಳೆದ ಮೂರು ದಿನಗಳಿಂದ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದೆ. ಕಳೆದ ರಾತ್ರಿ ನಂದಿ ಬೆಟ್ಟದ 10ನೇ ಕ್ರಾಸ್ ಬಳಿಯ ರಂಗಪ್ಪ ತಿರುವಿನಲ್ಲಿ ಗುಡ್ಡ ಕುಸಿದಿದೆ. ಈ ಹಿನ್ನೆಲೆ ನಂದಿ ಬೆಟ್ಟ ವೀಕ್ಷಣೆಗೆಂದು ಆಗಮಿಸಿದ ಪ್ರವಾಸಿಗರನ್ನು ಪೊಲೀಸರು ವಾಪಸು ಕಳುಹಿಸಯುವ ಕಾರ್ಯ ಮಾಡುತ್ತಿದ್ದಾರೆ.

ನಂದಿ ಬೆಟ್ಟದಲ್ಲಿ ಗುಡ್ಡಕುಸಿತ, ಸಂಪರ್ಕ ಬಂದ್..

10 ಅಡಿಯಷ್ಟು ಮಣ್ಣು ಮಳೆಯ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ವಿದ್ಯುತ್​ ತಂತಿಗಳು, ಬೃಹತ್ ಮರಗಳು ನೆಲಸಮವಾಗಿವೆ. ಸದ್ಯ ಹಿಂದಿನ ದಿನ ನಂದಿ ಬೆಟ್ಟದಲ್ಲಿ ವಾಸ್ತವ್ಯ ಹೂಡಿರುವ ಪ್ರವಾಸಿಗರು ಮರಳಿ ಬರಲಾಗದೆ ಅಲ್ಲೇ ಸಿಲುಕಿದ್ದಾರೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ರಸ್ತೆಯ ಮೇಲೆ ಕುಸಿದಿರುವ ಮಣ್ಣು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಓದಿ:ಮೊದಲ ಬಾರಿಗೆ ಬಿಜೆಪಿಗೆ ಒಲಿದ ಮೇಯರ್ ಪಟ್ಟ.. ಮೈಸೂರು ಮಹಾನಗರ ಪಾಲಿಕೆಯಲ್ಲಿ ಇತಿಹಾಸ ಸೃಷ್ಟಿ

ABOUT THE AUTHOR

...view details