ಕರ್ನಾಟಕ

karnataka

ಕಾಂಗ್ರೆಸ್ ಬಿಟ್ಟು‌ ಬಿಜೆಪಿಗೆ ಬಂದಿದ್ದಕ್ಕೆ ಜನ ನನ್ನನ್ನು‌ ಸೋಲಿಸಿದ್ದಾರೆ: ಸಚಿವ ಎಂಟಿಬಿ

By

Published : Nov 26, 2022, 10:53 PM IST

ಕಾಂಗ್ರೆಸ್ ಬಿಟ್ಟು‌ ಬಿಜೆಪಿಗೆ ಬಂದಿದ್ದಕ್ಕೆ ಜನ ನನ್ನನ್ನು‌ ಸೋಲಿಸಿದ್ದಾರೆ ಎಂದು ಚಿಕ್ಕಬಳ್ಳಾಪುರದ ಜರಬಂಡಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ‌ ಕಾರ್ಯಕ್ರಮದಲ್ಲಿ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.

people-defeated-me-for-leaving-congress-and-joining-bjp-says-minister-mtb-nagaraj
ಕಾಂಗ್ರೆಸ್ ಬಿಟ್ಟು‌ ಬಿಜೆಪಿಗೆ ಬಂದಿದ್ದಕ್ಕೆ ಜನ ನನ್ನನ್ನು‌ ಸೋಲಿಸಿದ್ದಾರೆ :ಸಚಿವ ಎಂಟಿಬಿ

ಚಿಕ್ಕಬಳ್ಳಾಪುರ :ಕಳೆದ ಬಾರಿಯ ಉಪಚುನಾವಣೆ ವೇಳೆ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದ್ದಕ್ಕೆ ಕ್ಷೇತ್ರದ ಜನ ನನ್ನನ್ನು ಸೋಲಿಸಿದ್ದಾರೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.

ನೂತನ‌ ತಾಲೂಕು ಮಂಚೇನಹಳ್ಳಿಯ ಜರಬಂಡಹಳ್ಳಿ ಗ್ರಾಮದಲ್ಲಿ‌ಕಂದಾಯ ಸಚಿವರ ನೇತೃತ್ವದಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮದ ಸಂದರ್ಭ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ತಮ್ಮ ಸೋಲಿನ ಕಹಿ ನೆನಪನ್ನು ಮೆಲುಕು ಹಾಕಿದರು. ಬಿಜೆಪಿ ಸರ್ಕಾರದಲ್ಲಿ ಸಾಕಷ್ಟು ಅಭಿವೃದ್ದಿಗಳು ನಡೆದಿವೆ.

ಯಾವ ಶಾಸಕರು, ಸಚಿವರು ಎಷ್ಟು ಕೆಲಸ ಮಾಡಿದ್ದಾರೆ ಎಂದು ಜನರೇ ನೆನೆಪಿಟ್ಟುಕೊಂಡು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಬೇಕು. ಎಲ್ಲಾ‌ ಅಭಿವೃದ್ದಿ ಕೆಲಸಗಳನ್ನು ಜನತೆ ನೆನಪಿನಲ್ಲಿಟ್ಟುಕೊಂಡಿರುತ್ತಾರೆ. ಆದರೆ ಚುನಾವಣೆಗೆ ನಾಲ್ಕೈದು ದಿನ ಇರುವಾಗ ನಿದ್ದೆ ಮಂಪರು ಬಂದ ಹಾಗೆ ತೂಕಡಿಸಿ ಬಿಡುತ್ತಾರೆ. ಮೊನ್ನೆ ನಡೆದ ಬೈ ಎಲೆಕ್ಷನ್‍ನಲ್ಲಿ ನಾನು ಸೋಲಬೇಕಿತ್ತಾ? ಆದರೆ ಸೋಲಿಸಿಬಿಟ್ಟಿರಿ ಎಂದು ಹೇಳಿದರು.

ಕಾಂಗ್ರೆಸ್ ಬಿಟ್ಟು‌ ಬಿಜೆಪಿಗೆ ಬಂದಿದ್ದಕ್ಕೆ ಜನ ನನ್ನನ್ನು‌ ಸೋಲಿಸಿದ್ದಾರೆ :ಸಚಿವ ಎಂಟಿಬಿ

ಇನ್ನು ಚುನಾವಣೆಯಲ್ಲಿ ಸೋಲಲು ನನ್ನದು ಒಂದು ತಪ್ಪಿದೆ. ನಾನು ಸುಧಾಕರ್ ಜೊತೆಗೆ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದನಲ್ಲ ಅದಕ್ಕೆ ಜನತೆ ಸೋಲಿಸಿ ಬಿಟ್ಟರು. ಆದರೆ ಸುಧಾಕರ್‌ನನ್ನು ಗೆಲ್ಲಿಸಿದ್ದೀರಾ. ಇದೇ ನನಗೆ ನೋವು ತರಿಸಿದೆ. ಸೋಲಿನಿಂದ ನನಗೆ ಏನೂ ಕಷ್ಟವಾಗಲಿಲ್ಲ. ದೇವರು ಎಲ್ಲಾ ಕೊಟ್ಟಿದ್ದಾರೆ. ಆದರೆ, ಹೊಸಕೋಟೆ ತಾಲೂಕಿನ ಅಭಿವೃದ್ಧಿಗೆ ಹಿನ್ನೆಡೆ ಆಯಿತು. ಹೊಸಕೋಟೆ ಜನರ ಸೇವೆ ಮಾಡಲು ಆಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ :ರಾಜ್ಯದಲ್ಲಿ ಮೀಸಲು ಕದನ : ರಿಸರ್ವೇಷನ್ ಹೆಚ್ಚಳಕ್ಕೆ ಒಕ್ಕಲಿಗ ಸಮುದಾಯದಿಂದ ಹೋರಾಟದ ಕಹಳೆ

ABOUT THE AUTHOR

...view details